ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ 3 ನೇ ದಿನವೂ ವಿಘ್ನ! – ಸರ್ವರ್‌ ಸಮಸ್ಯೆಗೆ ತಲೆಕೆಡಿಸಿಕೊಂಡ ಅಧಿಕಾರಿಗಳು

ಗೃಹಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಗೆ 3 ನೇ ದಿನವೂ ವಿಘ್ನ! – ಸರ್ವರ್‌ ಸಮಸ್ಯೆಗೆ ತಲೆಕೆಡಿಸಿಕೊಂಡ ಅಧಿಕಾರಿಗಳು

ಬೆಂಗಳೂರು: ಕಾಂಗ್ರೆಸ್​ ಪಕ್ಷ ಘೋಷಿಸಿದ್ದ ಚುನಾವಣಾ ಪೂರ್ವ ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಜ್ಯೋತಿ ಯೋಜನೆಯ ನೋಂದಣಿ ಕಾರ್ಯಕ್ಕೆ ಜೂನ್​ 18ರಂದು ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಗೃಹ ಜ್ಯೋತಿ ಯೋಜನೆಗೆ ನೋಂದಣಿಗಳು ಗಣನೀಯವಾಗಿ ಹೆಚ್ಚಿದೆ. ಜೂನ್ 20ರ ಮೂರನೆ ದಿನವಾದ ಮಂಗಳವಾರ ಕೂಡ ಸೇವಾಸಿಂಧು ಪೋರ್ಟಲ್ ನಲ್ಲಿ ಸಮಸ್ಯೆ ಎದ್ದು ಕಾಣುತ್ತಿದೆ. ಇದರಿಂದಾಗಿ ಜನರು ಸರತಿ ಸಾಲಿನಲ್ಲಿ ಗಂಟೆ ಗಟ್ಟಲೇ ಕಾಯುವ ಪರಿಸ್ಥಿತಿ ಉಂಟಾಗಿದೆ.

ಮಂಗಳವಾರ ಮುಂಜಾನೆಯಿಂದಲೇ ಜನರು ನಾಡ ಕಚೇರಿ, ಬೆಂಗಳೂರು ಓನ್, ಗ್ರಾಮ ಓನ್ ಹಾಗೂ ಬೆಸ್ಕಾಂ ಕಚೇರಿಗಳ ಮುಂದೆ ಜಮಾಯಿಸಿದ್ದಾರೆ. ಮೂರನೆ ದಿನವಾದ ಮಂಗಳವಾರ ಕೂಡ ಸೇವಾಸಿಂಧು ಪೋರ್ಟಲ್ ಸಮಸ್ಯೆ ಎದ್ದು ಕಾಣುತ್ತಿದೆ. ಅಧಿಕಾರಿಗಳಿಗೆ ಗೃಹಜ್ಯೋತಿ ಟಾರ್ಗೆಟ್ ‌ರೀಚ್ ಮಾಡಲು ಆಗ್ತಿಲ್ಲ. ಒಂದು ‌ದಿನಕ್ಕೆ ಹತ್ತು ಲಕ್ಷ ಜನರಿಂದ ಅಪ್ಲಿಕೇಶನ್ ಹಾಕಿಸಲು ಇಂಧನ ಇಲಾಖೆ ಪ್ಲಾನ್ ಮಾಡಿತ್ತು. ಆದರೆ ಮೊದಲ ದಿನ 55 ಸಾವಿರ ಎರಡನೇ ದಿನ 1,06,4032 ಲಕ್ಷ ಜನ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಗೃಹಜ್ಯೋತಿ ಯೋಜನೆಗೆ ಭರ್ಜರಿ ಪ್ರತಿಕ್ರಿಯೆ – ಎರಡನೇ ದಿನಕ್ಕೆ ನೋಂದಣಿ ದುಪ್ಪಟ್ಟು

ರಾಜ್ಯದಲ್ಲಿ 200 ಯೂನಿಟ್ ವಿದ್ಯುತ್ ಬಳಕೆ ಮಾಡುವವರ ಸಂಖ್ಯೆ ‌2 ಕೋಟಿ 14 ಲಕ್ಷ ಇದೆ. ಹಾಗಾಗಿ ‌ಅಧಿಕಾರಿಗಳು ಒಂದು ದಿನಕ್ಕೆ ಹತ್ತು ಲಕ್ಷ ಜನರಿಂದ ಅಪ್ಲಿಕೇಶನ್ ಹಾಕಿಸಿದ್ರೆ, 21 ಅಥವಾ ‌22 ದಿನಗಳಲ್ಲಿ ರಾಜ್ಯದ ಎಲ್ಲಾ ಫಲಾನುಭವಿಗಳಿಂದ ಅರ್ಜಿ ಹಾಕಿಸಿದಂತೆ‌ ಆಗುತ್ತದೆ ‌ಎಂದು ಇಂಧನ ಇಲಾಖೆ ಪ್ಲಾನ್ ಮಾಡಿತ್ತು. ಆದ್ರೆ ಸರ್ವರ್ ಸ್ಲೋ ಸಮಸ್ಯೆಯಿಂದ ಟಾರ್ಗೆಟ್ ರೀಚ್ ಮಾಡೋದು ಕಷ್ಟ ‌ಆಗುತ್ತಿದೆ.  ಮೂರನೇ ದಿನವು ಸರ್ವರ್ ಡೌನ್ ಆಗುತ್ತಿದೆ. ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಜನರು ನಾ ಮುಂದು ತಾ ಮುಂದು ಎಂದು ಮುಗಿಬೀಳುತ್ತಿದ್ದಾರೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಜನರು ಬರುವ ಸಾಧ್ಯತೆ ಇದೆ.

ಈಗಾಗಲೇ ಬೆಂಗಳೂರು ಒನ್, ‌ಗ್ರಾಮ ಒನ್, ನಾಡ ಕಚೇರಿಗಳು, ಸ್ಥಳೀಯ ಬೆಸ್ಕಾಂಗಳಲ್ಲಿಯೂ ಸಹ ಅರ್ಜಿ ಸಲ್ಲಿಕ್ಕೆಗೆ ಅವಕಾಶ ನೀಡಲಾಗಿದೆ. ಸೇವಾ ಸಿಂಧು ಪೋರ್ಟಲ್​ಗೆ ಕೇವಲ 1 ಲಕ್ಷಕ್ಕೂ ಹೆಚ್ಚು ಅರ್ಜಿ ಸ್ವೀಕರಿಸುವ ಕೆಪ್ಯಾಸಿಟಿಯಿದ್ದು ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸುತ್ತಿರುವುದರಿಂದ ಸರ್ವರ್ ‌ಸಮಸ್ಯೆ ಎದುರಾಗುತ್ತಿದೆ ಅನ್ನುವ ಮಾಹಿತಿ ಸಿಕ್ಕಿದೆ.

ಬೆಂಗಳೂರು ಒನ್, ‌ಗ್ರಾಮ ಒನ್, ನಾಡ ಕಚೇರಿಗಳು, ಸ್ಥಳೀಯ ಬೆಸ್ಕಾಂಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿ ಅರ್ಜಿ ಹಾಕುತ್ತಿದ್ದಾರೆ. ಈ ವೇಳೆ ಕೆಲವು ಕಡೆಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ಈ ನೂಕುನುಗ್ಗಲನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಂದಿನ ತಿಂಗಳಿನಿಂದ ಯೋಜನೆ ಜಾರಿಯಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಗೃಹಜ್ಯೋತಿ ಸೌಲಭ್ಯ ಸಿಗುತ್ತೋ ಇಲ್ಲವೋ ಎಂದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಕಾಂಗ್ರೆಸ್‌ ಪಕ್ಷವು ಕೊಟ್ಟ ಮಾತನ್ನು ಉಳಿಸಿಕೊಳ್ಳಲಿದೆ. ಯೋಜನೆಯನ್ನು ಜಾರಿಗೆ ತಂದೇ ತರುತ್ತೇವೆ. ಅರ್ಜಿ ಸಲ್ಲಿಸಲು ನೂಕು ನುಗ್ಗಲಿನಲ್ಲಿ ತೆರಳುವ ಅವಶ್ಯಕತೆಯಿಲ್ಲ. ಮುಂದಿನ ತಿಂಗಳಿನಿಂದ ನಿಮಗೆ ವಿದ್ಯುತ್‌ ಬಿಲ್‌ ಬರುವುದಿಲ್ಲ. ಆದರೆ, ನೀವು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು. ಈಗಾಗಲೇ ನಮ್ಮ ಇಂಧನ ಸಚಿವರು ತಮಗೆ ಎಲ್ಲಾ ಮಾಹಿತಿ ನೀಡಿದ್ದಾರೆ. ತಪ್ಪದೇ ಅರ್ಜಿ ಸಲ್ಲಿಸಿ, ಆತಂಕ ಪಡಬೇಡಿ ಎಂದಿದ್ದಾರೆ.

suddiyaana