130 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಡೆ – 90 ಕ್ಕೂ ಅಧಿಕ ಮಂದಿ ಸಾವು

130 ಮಂದಿ ಪ್ರಯಾಣಿಸುತ್ತಿದ್ದ ದೋಣಿ ಸಮುದ್ರದಲ್ಲಿ ಮುಳುಗಡೆ – 90 ಕ್ಕೂ ಅಧಿಕ ಮಂದಿ ಸಾವು

ಸುಮಾರು 130 ಮಂದಿ ಪ್ರಯಾಣಿಸುತ್ತಿದ್ದ ಮೀನುಗಾರಿಕಾ ದೋಣಿಯೊಂದು ಸಮುದ್ರದಲ್ಲಿ ಮುಳುಗಿದೆ. ಈ ಅವಘಡದಲ್ಲಿ 90 ಕ್ಕೂ ಮಂದಿ ಸಾವನ್ನಪ್ಪಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾದ ದ್ವೀಪ ರಾಷ್ಟ್ರ ಮೊಜಾಂಬಿಕ್ ಕರಾವಳಿ ತೀರದಲ್ಲಿ ಈ ದುರಂತ ಸಂಭವಿಸಿದೆ. ಮೊಜಾಂಬಿಕ್ ದ್ವೀಪದಿಂದ ನಂಪುಲಾ ದ್ವೀಪಕ್ಕೆ ತೆರಳುವಾಗ ಈ ಘಟನೆ ಸಂಭವಿಸಿದೆ. ದೋಣಿಯಲ್ಲಿ ನಿಗದಿಗಿಂತ ಹೆಚ್ಚು ಜನರನ್ನು ತುಂಬಿದ್ದೇ ದುರಂತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಗುಜರಾತ್ ವಿರುದ್ಧ ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್.. – 33 ರನ್‌ಗಳ ಭರ್ಜರಿ ಜಯ

ಈ ದೋಣಿ ದೋಣಿ ಪ್ರಯಾಣಿಕರ ಸಾಗಣೆಗೆ ಯೋಗ್ಯವಾಗಿಲ್ಲ, ಸತ್ತವರಲ್ಲಿ ಅನೇಕ ಮಕ್ಕಳೂ ಸೇರಿದ್ದಾರೆ. ನಾಪತ್ತೆಯಾದವರಿಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸಮುದ್ರದ ಪರಿಸ್ಥಿತಿಯು ಈ ಕಾರ್ಯಕ್ಕೆ ತೊಂದರೆಯನ್ನುಂಟುಮಾಡುತ್ತಿದೆ. ಮೊಜಾಂಬಿಕ್​ನಲ್ಲಿ ಕಾಲರಾ ಪ್ರಕರಣಗಳು ಕೂಡ ಹೆಚ್ಚಿದೆ. ಅಕ್ಟೋಬರ್ 2023 ರಿಂದ ಸುಮಾರು 15,000 ಕಾಲರಾ ಪ್ರಕರಣ ವರದಿಯಾಗಿದೆ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರಿಂದಾಗಿ ಜನರು ಮೊಜಾಂಬಿಕ್​ನಿಂದ ವಲಸೆ ಹೋಗುತ್ತಿದ್ದಾರೆ, ಇದಲ್ಲದೇ ನೆರೆಯ ಕಾಬೋ ಡೆಲ್ಗಾಡೊದಲ್ಲಿ ಜಿಹಾದಿ ದಾಳಿಯಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವವರ ಸಂಖ್ಯೆಯೂ ಹೆಚ್ಚಿದೆ ಎಂದು ವರದಿಯಾಗಿದೆ.

ಬದುಕುಳಿದ 5 ಜನರಲ್ಲಿ 2 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ದೋಣಿ ಮೊಜಾಂಬಿಕ್ ದ್ವೀಪದ ಕಡೆಗೆ ಹೋಗುತ್ತಿತ್ತು. ಈ ದ್ವೀಪವನ್ನು ವಾಸ್ಕೋ ಡ ಗಾಮಾ ಕಂಡುಹಿಡಿದಿದ್ದ ಎಂದು ಹೇಳಲಾಗಿದೆ. ಮೊಜಾಂಬಿಕ್​ನಲ್ಲಿ ಹಲವು ಬಾರಿ ವಿನಾಶಕಾರಿ ಚಂಡಮಾರುತಗಳು ಎದುರಾಗುತ್ತವೆ.

Shwetha M