ಪುಟಿನ್ ಬದ್ದ ವೈರಿ ಜೈಲಿನಲ್ಲಿ ಸಾವು – ಅಲೆಕ್ಸಿ ನವಲ್ನಿಗೆ ಗೌರವ ಸಲ್ಲಿಸಲು ಬಂದಿದ್ದ 400ಕ್ಕೂ ಹೆಚ್ಚು ಜನ ಜೈಲು ಪಾಲು!

ಪುಟಿನ್ ಬದ್ದ ವೈರಿ ಜೈಲಿನಲ್ಲಿ ಸಾವು – ಅಲೆಕ್ಸಿ ನವಲ್ನಿಗೆ ಗೌರವ ಸಲ್ಲಿಸಲು ಬಂದಿದ್ದ 400ಕ್ಕೂ ಹೆಚ್ಚು ಜನ ಜೈಲು ಪಾಲು!

ರಷ್ಯಾದ ವಿರೋಧ ಪಕ್ಷದ ನಾಯಕ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ವೈರಿಯಾಗಿದ್ದ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವನ್ನಪ್ಪಿದ್ದಾರೆ. ಇದೀಗ ಈ ಸಾವಿನ ಬೆನ್ನಲ್ಲೇ ರಷ್ಯಾದಲ್ಲಿ ಭಾರಿ ಕೋಲಾಹಲವೆದ್ದಿದೆ. ನವಲ್ನಿಗೆ ಗೌರವ ಸಲ್ಲಿಸಲು ಬೀದಿಗಿಳಿದಿದ್ದ ಸುಮಾರು 400 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಒಂದೇ ವಿಮಾನದಲ್ಲಿ ಮಂಗಳೂರಿಗೆ ಡಿ.ಕೆ ಶಿವಕುಮಾರ್, ST ಸೋಮಶೇಖರ್ ಪ್ರಯಾಣ – ಕಾಂಗ್ರೆಸ್‌ ಸೇರುತ್ತಾರಾ ಬಿಜೆಪಿ ಶಾಸಕ?

ಕಳೆದ ಎರಡು ದಿನಗಳ ಹಿಂದೆ ಪುಟಿನ್‌ ನ ಬದ್ದ ವೈರಿ ನವಲ್ನಿ ಜೈಲಿನಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ನವಲ್ನಿಗೆ ಶ್ರದ್ದಾಂಜಲಿ ಸಲ್ಲಿಸಲು ನೂರಾರು ಮಂದಿ ಬಂದಿದ್ದರು. ಜೊತೆಗೆ ಕೈಯಲ್ಲಿ ಮೇಣದ ಬತ್ತಿ, ಬ್ಯಾನರ್, ಕರಪತ್ರಗಳನ್ನು ಹಿಡಿದುಕೊಂಡು ನವಲ್ನಿಯವರನ್ನು ಕೊಲೆ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿ ಪುಟಿನ್ ವಿರುದ್ಧ ಪ್ರತಿಭಟನೆ ಆರಂಭಿಸಿದರು. ಪುಟಿನ್ ವಿರುದ್ಧ ಘೋಷಣೆಗಳನ್ನು ಕೂಡ ಕೂಗಿದರು. ಪರಿಸ್ಥಿತಿ ಬಿಗುಡಾಯಿಸುತ್ತಿದ್ದಂತೆ ಪ್ರತಿಭಟನಾಕಾರರ ಗುಂಪನ್ನು ಕಂಡು ರಷ್ಯಾದ ಪೊಲೀಸರು ಹೈ ಅಲರ್ಟ್‌ ಆಗಿದ್ದಾರೆ. ಕೂಡಲೇ ಜನರನ್ನು ಬಂಧಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ. ಸುಮಾರು 12 ಕ್ಕೂ ಹೆಚ್ಚು ನಗರಗಳಲ್ಲಿ ಪೊಲೀಸರು 400ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ರಷ್ಯಾದ ಎರಡನೇ ಅತಿದೊಡ್ಡ ನಗರವಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ 200 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ನವಲ್ನಿ (47) ಅವರ ಹಠಾತ್ ಸಾವು ರಷ್ಯಾದ ಅನೇಕ ಜನರಿಗೆ ಆಘಾತವನ್ನುಂಟು ಮಾಡಿದೆ. ನವಲ್ನಿ ಅವರು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ವ್ಯಾಪಕ ಪ್ರತಿಭಟನೆಗಳಿಗೆ ಹೆಸರುವಾಸಿಯಾಗಿದ್ದರು. ವಿಷಪ್ರಾಸನದಿಂದ ಬದುಕುಳಿದ ಬಳಿಕ ಹಾಗೂ ಜೈಲು ಶಿಕ್ಷೆಗೆ ಒಳಗಾದ ನಂತರವೂ ನವಲ್ನಿ ಪುಟಿನ್ ಅವರನ್ನು ಟೀಕಿಸುವುದನ್ನು ಮುಂದುವರಿಸಿದ್ದರು.

Shwetha M