ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಬಿಹಾರದಲ್ಲಿ 1,000 ಕ್ಕೂ ಹೆಚ್ಚು ಶಿಶುಗಳ ಜನನ!

ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಬಿಹಾರದಲ್ಲಿ 1,000 ಕ್ಕೂ ಹೆಚ್ಚು ಶಿಶುಗಳ ಜನನ!

ಒಂದು ಕುಟುಂಬದಲ್ಲಿ ಮಗುವಿನ ಆಗಮನವೆಂದರೆ ಸಂತೋಷದ ಹೊನಲು ಹರಿಯುವಂತಹ ಸಮಯ. ಎಲ್ಲರೂ ಈ ಸಮಯಕ್ಕೆ ಕಾತುರರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಳ್ಳೆಯ ದಿನ ನೋಡಿ ಹೆರಿಗೆ ಮಾಡಿಸುವ ಕ್ರಮವೂ ಇದೆ. ಅಶುಭ ಘಳಿಗೆಯಲ್ಲಿ ಮಗು ಹುಟ್ಟಿದರೆ ಕಷ್ಟಗಳು ಬರಬಹುದು ಎನ್ನುವ ಕಾರಣಕ್ಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ಇದು ಟ್ರೆಂಡ್‌ ಆಗಿ ಬಿಟ್ಟಿದೆ. ಗರ್ಭಿಣಿಗೆ ಹೆರಿಗೆ ಸಮಯ ಬರುತ್ತಿದ್ದಂತೆ ಒಳ್ಳೆಯ ಸಮಯ, ಒಳ್ಳೆದಿನ ಯಾವುದು ಎಂದು ಪಂಚಾಂಗ ನೋಡುತ್ತಾರೆ. ಹಬ್ಬಗಳು ಹತ್ತಿರದಲ್ಲಿದ್ದರೆ ಅಂದೇ ಮಗು ಜನಿಸಬೇಕು ಎಂದು ವೈದ್ಯರ ಬಳಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಖುತ್ತಾರೆ. ಇದು ಟ್ರೆಂಡ್ ಆಗಿಬಿಟ್ಟಿದೆ. ಬಿಹಾರದಲ್ಲೂ ಇಂತಹ ಟ್ರೆಂಡ್ ನಡೆಯುತ್ತಿದೆ.

ದೇಶದೆಲ್ಲೆಡೆ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗಿದೆ. ಹಿಂದೂ ಪಂಚಾಂಗದ ಪ್ರಕಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಒಳ್ಳೆ ದಿನವಾಗಿದೆ. ಈ ದಿನ ಮಕ್ಕಳು ಜನಿಸಿದರೆ ಯಾವುದೇ ತೊಂದರೆಗಳು ಆಗುವುದಿಲ್ಲ. ಎಲ್ಲವೂ ಒಳ್ಳೆಯದಾಗುತ್ತದೆ ಎಂಬುವುದು ಜನರ ನಂಬಿಕೆ ಹೀಗಾಗಿಯೇ ಬಿಹಾರದಲ್ಲಿ ಶ್ರೀಕೃಷ್ಣನ ಜನ್ಮದಿನದಂದು ಹೆರಿಗೆಯಾಗಲು ಬಯಸಿದ್ದ ಗರ್ಭಿಣಿಯರು 1000ಕ್ಕೂ ಮಕ್ಕಳಿಗೆ ಜನ್ಮ ಕೊಟ್ಟಿದ್ದಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯಂದು ಒಂದೇ ರಾಜ್ಯದಲ್ಲಿ1000ಕ್ಕೂ ಶಿಶುಗಳ ಜನನವಾಗಿರುವುದು ಬಿಹಾರದ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸಂಚಲನ ಉಂಟಾಗಿದೆ.

ಇದನ್ನೂ ಓದಿ: ಅಭಿಮಾನಿಗಳ ಮನಗೆದ್ದ ‘ಜವಾನ್’ – ಶಾರುಖ್ ಖಾನ್ ದ್ವಿಪಾತ್ರ ಮೆಚ್ಚಿಕೊಂಡ ಫ್ಯಾನ್ಸ್

ಈ ವರ್ಷದ ಬಹುತೇಕ ಹಬ್ಬದ ದಿನಾಂಕಗಳು ಗೊಂದಲಮಯವಾಗಿವೆ. ರಾಖಿ ಹಬ್ಬ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ ಹಬ್ಬಗಳ ದಿನಾಂಕಗಳಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿಯೇ ಕೆಲವರು ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬವನ್ನು ಸೆಪ್ಟೆಂಬರ್ 6 (2023) ಮತ್ತು ಸೆಪ್ಟೆಂಬರ್ 7 ಅಲ್ಲ ಎಂದು ಭಾವಿಸಿದ್ದರು. ಇದರಿಂದಾಗಿ ಕೆಲವು ಪ್ರದೇಶಗಳಲ್ಲಿ ಸೆ.6ರಂದು ಆಚರಿಸಿದರೆ, ಹಲವೆಡೆ ಕೆಲವರು 7ರಂದು ಆಚರಿಸುತ್ತಾರೆ. ಈ ಕ್ರಮದಲ್ಲಿ ಬಿಹಾರದಲ್ಲಿ ನ.6ರಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಇದರಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ದಿನವೇ ತಮ್ಮ ಮಕ್ಕಳು ಹುಟ್ಟಬೇಕು ಎಂದುಕೊಂಡವರು ಮಧ್ಯರಾತ್ರಿ 12.00 ಗಂಟೆಗೆ ಮುಹೂರ್ತ ನಿಶ್ಚಯಿಸಿ ಸಿಸೇರಿಯನ್ ಮಾಡಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.

ಕೆಲವರಿಗೆ ಆಕಸ್ಮಿಕವಾಗಿ ಹಬ್ಬದ ದಿನವೇ ಹೆರಿಗೆಯಾಗಿದೆ. ಇನ್ನು ಕೆಲವರು 6 ಮತ್ತು 7ರಂದು ಹೆರಿಗೆ ಆಗುವಂತೆ ವೈದ್ಯರ ಬಳಿ ಚರ್ಚಿಸಿ ಸಿಸೇರಿಯನ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಬುಧವಾರ (ಸೆಪ್ಟೆಂಬರ್ 6, 2023) ಮಧ್ಯಾಹ್ನ 3 ಗಂಟೆಯವರೆಗೆ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 500 ಕ್ಕೂ ಹೆಚ್ಚು ಮಹಿಳೆಯರು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಅವರಲ್ಲಿ 150 ಮಂದಿ ರಾಜಧಾನಿ ಪಾಟ್ನಾದಲ್ಲಿ ಜನ್ಮ ನೀಡಿದ್ದಾರೆ. ಬಿಹಾರದಲ್ಲಿ ದಿನವಿಡೀ ನಡೆದ ಹೆರಿಗೆಗಳನ್ನು ಸೇರಿಸಿದರೆ 1000 ಮೀರುತ್ತದೆ ಎಂದು ವೈದ್ಯರು ಹೇಳಿದ್ದಾರೆ.

ಈ ಕುರಿತಾಗಿ ಮಾತನಾಡಿದ ವೈದ್ಯರು, ಪ್ರಸ್ತುತ ಚಿಕಿತ್ಸಾ ವಿಧಾನಗಳೊಂದಿಗೆ ಅಂದರೆ ನಾಲ್ಕೈದು ದಿನಗಳ ಮುಂಚೆ ಅಥವಾ ನಂತರದ ಶಸ್ತ್ರಕ್ರಿಯೆಯ ವಿಧಾನದಿಂದ ಹೆರಿಗೆಯಾಗಬಹುದು. ಆದರೆ ಹೆರಿಗೆಗೆ ಇನ್ನೂ 10-15 ದಿನವಿದ್ದರೂ ಕೆಲವರಿಗೆ ಹಬ್ಬದ ದಿನವೇ ಹೆರಿಗೆ ಆಗಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಅವರ ಆಶಯವನ್ನು ಪರಿಗಣಿಸಿದರೂ ಗರ್ಭದಲ್ಲಿರುವ ಮಗುವಿನ ಸ್ಥಿತಿ ನೋಡಿಯೇ ಯಾವಾಗ ಹೆರಿಗೆ ಮಾಡಬೇಕೆಂದು ನಿರ್ಧರಿಸುತ್ತೇವೆ. ಏನೇ ಆದರೂ ಅವಧಿಗೂ ಮುನ್ನ ಹೆರಿಗೆ ಮಾಡಿಸುವುದು ಸರಿಯಲ್ಲ ಎಂದಿದ್ದಾರೆ.

suddiyaana