ಭಾರತದ ಟಾರ್ಗೆಟ್ ODI ವಿಶ್ವಕಪ್ – RO-KO ಮೇಲೆ ಕಣ್ಣಿಟ್ರಾ ಗಂಭೀರ್?
ಏಕದಿನ ಪಂದ್ಯಗಳಿಗೆ ಡಿಮ್ಯಾಂಡ್ ಏಕೆ?

ಭಾರತದ ಟಾರ್ಗೆಟ್ ODI ವಿಶ್ವಕಪ್ – RO-KO ಮೇಲೆ ಕಣ್ಣಿಟ್ರಾ ಗಂಭೀರ್?ಏಕದಿನ ಪಂದ್ಯಗಳಿಗೆ ಡಿಮ್ಯಾಂಡ್ ಏಕೆ?

ಬ್ಯಾಕ್ ಟು ಬ್ಯಾಕ್ ಟಿ-20 ವಿಶ್ವಕಪ್​ಗಳನ್ನ ಗೆದ್ದಿರೋ ಟೀಂ ಇಂಡಿಯಾದ ನೆಕ್ಸ್​ಟ್ ಟಾರ್ಗೆಟ್ ಇರೋದೇ 2027ರ ಏಕದಿನ ವಿಶ್ವಕಪ್. ಹೆಡ್​ಕೋಚ್ ಗೌತಮ್ ಗಂಭೀರ್ ಅವ್ರ ಗುರಿ, ಲೆಜೆಂಡರಿ ಪ್ಲೇಯರ್​ಗಳಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವ್ರ ಲೈಫ್​ಟೈಂ ಡ್ರೀಮ್ ಕೂಡ ಇದೇ ಆಗಿದೆ. ಌಂಡ್ ಬಿಸಿಸಿಐ ಮ್ಯಾನೇಜ್​ಮೆಂಟ್ ಕೂಡ ಇದೇ ಚಾಂಪಿಯನ್ ಶಿಪ್ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಭಾರತ ಈ ಮೊದಲು ಮಾಡಿದ್ದ ಶೆಡ್ಯೂಲ್​ಗಿಂತ ಜಾಸ್ತಿ ಏಕದಿನ ಪಂದ್ಯಗಳನ್ನ ಆಡೋಕೆ ಮುಂದಾಗಿದೆ.

ಇದನ್ನೂ ಓದಿ   : SRHಗೆ ಪಾಕ್ ಆಟಗಾರ ಎಂಟ್ರಿ- ಸನ್‌ರೈಸರ್ಸ್‌ ತಂಡ ಬಾಯ್ಕಟ್‌ಗೆ ಫ್ಯಾನ್ಸ್ ಆಗ್ರಹ

ಭಾರತದಲ್ಲಿ ಈಗ ಐಪಿಎಲ್ ಫೀವರ್ ಸ್ಟಾರ್ಟ್ ಆಗ್ತಿದೆ. ಮೇ 31ಕ್ಕೆ 19ನೇ ಆವೃತ್ತಿಯ ಚಾಂಪಿಯನ್​ ಉದಯದೊಂದಿಗೆ ಈ ಟೂರ್ನಿಗೆ ಗುಡ್ ಬೈ ಹೇಳ್ತಾರೆ. ಌಂಡ್ ನೆಕ್ಸ್​ಟ್ ಸ್ಟಾರ್ಟ್ ಆಗೋದೇ ಏಕದಿನ ವಿಶ್ವಕಪ್ ರಣಬೇಟೆಯ ತಂತ್ರಗಳು. ಅದೂ ಅಲ್ದೇ 2011 ರಿಂದ ಭಾರತ ಏಕದಿನ ವಿಶ್ವಕಪ್ ಗೆದ್ದಿಲ್ಲ. 2023ರಲ್ಲಿ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಅನ್ ಬೀಟನ್ ಆಗಿ ಫೈನಲ್​ವರೆಗೂ ಬಂದ್ರೂ ಆಸ್ಟ್ರೇಲಿಯಾ ವಿರುದ್ಧ ಸೋತು ನಿರಾಸೆಗೊಂಡಿದ್ರು. ಬಟ್ 2027ಗೆ ಶತಾಯ ಗತಾಯ ಗೆಲ್ಲಲೇಬೇಕು ಅಂತಾ ಈಗಿನಿಂದಲೇ ಸ್ಟ್ರಾಟರ್ಜಿಗಳನ್ನ ಸ್ಟಾರ್ಟ್​ ಮಾಡಿದ್ದಾರೆ. ಇದಕ್ಕಾಗಿ ಬಿಸಿಸಿಐ ಹೊಸ ಹೆಜ್ಜೆ ಇಟ್ಟಿದೆ.

ಮುಂದಿನ 12 ತಿಂಗಳಲ್ಲಿ ಏಕದಿನ ಪಂದ್ಯಗಳದ್ದೇ ಹಬ್ಬ!

2027ರಲ್ಲಿ ಪ್ರತಿಷ್ಠಿಕ ಏಕದಿನ ವಿಶ್ವಕಪ್ ಟೂರ್ನಿ ನಡೆಯಲಿದೆ. ಎಲ್ಲಾ ತಂಡಗಳು ಆಲ್ರೆಡಿ ಈ ಪಂದ್ಯಾವಳಿಗಾಗಿ ಪ್ರೀಪ್ಲ್ಯಾನ್ ಸ್ಟಾರ್ಟ್ ಮಾಡಿದ್ದಾರೆ. ಜೊತೆಗೆ ಏಕದಿನ ಪಂದ್ಯಗಳ ಮೇಲೆ ಜಾಸ್ತಿ ಫೋಕಸ್ ಮಾಡ್ತಾರೆ. ಇದಕ್ಕೆ ಟೀಂ ಇಂಡಿಯಾ ಹೊರತಲ್ಲ. ಅದೂ ಅಲ್ದೇ ಟೀಂ ಇಂಡಿಯಾದ ಲೆಜೆಂಡರಿ ಪ್ಲೇಯರ್​ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಈ ಮಾದರಿಯಲ್ಲಿ ಮಾತ್ರ ಆಡ್ತಿದ್ದಾರೆ. ಸೋ ಈಗ ಒಡಿಐ ಫಾರ್ಮೆಟ್​ನಲ್ಲಿ ಹೆಚ್ಚಿನ ಪಂದ್ಯಗಳನ್ನ ಆಡಿಸೋಕೆ ಬೇರೆ ಬೇರೆ ತಂಡಗಳು ಬಿಸಿಸಿಐಗೆ ಆಫರ್ ಮಾಡ್ತಿವೆ. ಈವನ್ ಬಿಸಿಸಿಐ ಮ್ಯಾನೇಜ್​ಮೆಂಟ್ ಕೂಡ ಇದನ್ನ ಒಪ್ಪಿಕೊಂಡಿದೆ.

ಏಕದಿನ ಪಂದ್ಯಗಳ ಮೇಲೆ ಕಣ್ಣು!

ಐಪಿಎಲ್ ಬಳಿಕ ಆಫ್ಘನ್ ವಿರುದ್ಧ 1 ಟೆಸ್ಟ್, 3 ಏಕದಿನ ಪಂದ್ಯ

ಇಂಗ್ಲೆಂಡ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯ

ಇಂಗ್ಲೆಂಡ್ ಬಳಿಕ ಐರ್ಲೆಂಡ್ ವಿರುದ್ಧವೂ ಸರಣಿ ಆಡುವ ಸಾಧ್ಯತೆ

ಶ್ರೀಲಂಕಾ ತಂಡದಿಂದಲೂ ಬಿಸಿಸಿಐ ಬಳಿ ಒಡಿಐ ಸರಣಿಗೆ ಮನವಿ

ಲಂಕಾ ವಿರುದ್ಧ 3 ಟಿ-20ಐ ಹಾಗೇ 2 ಟೆಸ್ಟ್ ಮಾತ್ರ ನಿಗದಿಯಾಗಿದೆ

ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ವಿರುದ್ಧವೂ ಸರಣಿ

ನ್ಯೂಜಿಲೆಂಡ್ ಸರಣಿ ವೇಳೆ 5 ಪಂದ್ಯಗಳ ಏಕದಿನ ಸರಣಿಗೆ ಮನವಿ

ಹೀಗೆ ಮೊದಲು ಶೆಡ್ಯೂಲ್ ಆಗಿರೋ ಮ್ಯಾಚ್​ಗಳ ಪೈಕಿ ಒಂದಷ್ಟು ಕ್ರಿಕೆಟ್ ಮಂಡಗಳಿಗಳು ಏಕದಿನ ಸರಣಿಗೆ ಮನವಿ ಮಾಡಿವೆ. ಇನ್ನೂ ಕೆಲವ್ರು ಹೆಚ್ಚುವರಿ ಪಂದ್ಯಗಳಿಗೆ ಸಜೆಸ್ಟ್ ಮಾಡಿದ್ದಾರೆ. ಸೋ ಅಲ್ಲಿಗೆ ಎಲ್ಲಾ ತಂಡಗಳೂ ಕೂಡ ಏಕದಿನ ಮಾದರಿಯನ್ನೇ ಪ್ರಿಫರ್ ಮಾಡ್ತಿರೋದು ಇಲ್ಲಿ ಗೊತ್ತಾಗ್ತಿದೆ. ಹಾಗೇ ಹೆಚ್ಚೆಚ್ಚು ಪಂದ್ಯಗಳನ್ನ ಆಡಿಸಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರ್ಫಾಮೆನ್ಸ್ ಮೇಲೂ ಕಣ್ಣಿಡೋ ಪ್ಲ್ಯಾನ್ ನಡೆದಿದೆ. ಒಟ್ನಲ್ಲಿ ಎಲ್ಲರ ಕಣ್ಣು ಈಗ ಏಕದಿನ ವಿಶ್ವಕಪ್ ಮೇಲಿದೆ. ಌಂಡ್ ಭಾರತೀಯರ ಕಣ್ಣಂತೂ ರೋಕೋ ಪಂದ್ಯಗಳ ಮೇಲೇ ಇದೆ.

Shantha Kumari

Leave a Reply

Your email address will not be published. Required fields are marked *