ಚಂದ್ರಯಾನ – 3 ಸಕ್ಸಸ್‌ ಬೆನ್ನಲ್ಲೇ ಹೊಸ ಕ್ರಾಂತಿಗೆ ಮುಂದಾದ ಇಸ್ರೋ – ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್!

ಚಂದ್ರಯಾನ – 3 ಸಕ್ಸಸ್‌ ಬೆನ್ನಲ್ಲೇ ಹೊಸ ಕ್ರಾಂತಿಗೆ ಮುಂದಾದ ಇಸ್ರೋ – ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್!

ಚಂದ್ರನ ಅಂಗಳದಲ್ಲಿ ಚಂದ್ರಯಾನ ನೌಕೆಯನ್ನ ಇಳಿಸಿ ಇತಿಹಾಸ ಬರೆದ ಭಾರತ ಇದೀಗ ಸೂರ್ಯನ ಮೇಲೆ ಕಣ್ಣಿಟ್ಟಿದ್ದು ಹೊಸ ಕ್ರಾಂತಿಗೆ ಮುಂದಾಗಿದೆ. ಸೌರ ಸಂಶೋಧನೆಗಾಗಿ ಭಾರತದ ಮೊದಲ ಬಾಹ್ಯಾಕಾಶ ವೀಕ್ಷಣಾಲಯವಾದ ಆದಿತ್ಯ-ಎಲ್ 1 ಉಡಾವಣೆಗೆ ಮುಹೂರ್ತ ಫಿಕ್ಸ್ ಮಾಡಿದೆ. ಈ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಪ್ರಕಟಿಸಿದೆ.

ಮುಂದಿನ ಶನಿವಾರ ಅಂದರೆ, ಸೆಪ್ಟೆಂಬರ್‌ 2 ರಂದು ಆದಿತ್ಯ ಎಲ್‌-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ಇಸ್ರೋ ತಿಳಿಸಿದೆ. ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ. ಈಗಾಗಲೇ ‘ಆದಿತ್ಯ-ಎಲ್1’ ಬಾಹ್ಯಾಕಾಶ ನೌಕೆಯನ್ನು ಶ್ರೀಹರಿಕೋಟಾಗೆ ಕಳಿಸಿಕೊಡಲಾಗಿದೆ.

ಇದನ್ನೂ ಓದಿ: ಚಂದ್ರನ ಮೇಲಿನ ಅಧ್ಯಯನಕ್ಕೆ ಕೇವಲ 10 ದಿನಗಳು ಮಾತ್ರ ಬಾಕಿ – ಕೆಲಸ ಚುರುಕುಗೊಳಿಸಿದ ರೋವರ್‌!

ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ ಸೂರ್ಯನ ಹೊರಗಿನ ಪದರಗಳನ್ನ ಆದಿತ್ಯ-ಎಲ್1 ಅಧ್ಯಯನ ಮಾಡಲಿದೆ.. ಇಸ್ರೋ ಆದಿತ್ಯ ಎಲ್‌-1 ಅನ್ನು ಭೂಮಿಯಿಂದ 1.5 ಮಿಲಿಯನ್‌ ಕಿಲೋಮೀಟರ್‌ ದೂರದ ಲಾಂಗ್ರೇಜ್‌ ಪಾಯಿಂಟ್‌ಗೆ ತಲುಪಿಸುತ್ತದೆ. ಚಂದ್ರನಿಂದ ನಾಲ್ಕು ಪಟ್ಟು ದೂರದ ಅಂತರ ಇದಾಗಿದೆ. ಇನ್ನು ಇಡೀ ಯೋಜನೆಯ ಮೂಲ ಉದ್ದೇಶ ಸೂರ್ಯನ ಬಗ್ಗೆ ಇನ್ನಷ್ಟು ಆಳವಾಗಿ ತಿಳಿದುಕೊಳ್ಳುವುದು. ಸೂರ್ಯನ ಪ್ರಭಾವಲಯ, ಉಷ್ಣತೆಯ ಸಮಸ್ಯೆಗಳು, ಪ್ರಭಾವಲಯದಿಂದ ಹೊರಹೊಮ್ಮುವ ಭಾರೀ ಪ್ರಮಾಣದ ಜ್ವಾಲೆ, ಜ್ವಾಲೆಗೂ ಮುನ್ನಾ ಸ್ಥಿತಿ, ಜ್ವಾಲೆಯ ಚಟುವಟಿಕೆಗಳು, ಜ್ವಾಲೆಯ ಗುಣಲಕ್ಷಣ, ಬಾಹ್ಯಾಕಾಶದ ಹವಾಮಾನ ಮೊದಲಾದ ವಿಷಯಗಳ ಕುರಿತು ಮಾಹಿತಿ ಸಂಗ್ರಹಿಸಲಿದೆ.

 

suddiyaana