ಮೊಂಥಾ ಚಂಡಮಾರುತ ಎಫೆಕ್ಟ್!‌ – ತಿಮ್ಮಪ್ಪನ ಭಕ್ತರಿಗೆ ತಿರುಪತಿ ಜಿಲ್ಲಾಡಳಿತದಿಂದ  ಮಹತ್ವದ ಸೂಚನೆ!

ಮೊಂಥಾ ಚಂಡಮಾರುತ ಎಫೆಕ್ಟ್!‌ – ತಿಮ್ಮಪ್ಪನ ಭಕ್ತರಿಗೆ ತಿರುಪತಿ ಜಿಲ್ಲಾಡಳಿತದಿಂದ  ಮಹತ್ವದ ಸೂಚನೆ!

ಬಂಗಾಳಕೊಲ್ಲಿಯಲ್ಲಿ ರೂಪುಗೊಳ್ಳುತ್ತಿರುವ ಮೊಂಥಾ ಚಂಡಮಾರುತದ ಪರಿಣಾಮಗಳು ಇಂದಿನಿಂದ ಗೋಚರಿಸಲು ಪ್ರಾರಂಭವಾಗಿದೆ. ಇಂದು ಸಂಜೆ ವೇಳೆಗೆ ಆಂಧ್ರಪ್ರದೇಶದ ಕಾಕಿನಾಡ ಬಳಿಯ ಮಚಲಿಪಟ್ಟಣ ಮತ್ತು ಕಳಿಂಗಪಟ್ಟಣಂ ನಡುವೆ ಚಂಡಮಾರುತವು ಭೂಕುಸಿತವನ್ನು ಉಂಟುಮಾಡಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದೀಗ ತಿರುಪತಿಗೆ ತೆರಳುವವರಿಗೆ ಅಲ್ಲಿನ ಜಿಲ್ಲಾಡಳಿತ ಮಹತ್ವದ ಮಾಹಿತಿ ನೀಡಿದೆ.

ಇದನ್ನೂ ಓದಿ: ಕಾಂತಾರ ಚಾಪ್ಟರ್‌ 1 ಕನಸು ಭಗ್ನ! – ಸಾವಿರ ಕೋಟಿ ರೂಪಾಯಿ ಕಲೆಕ್ಷನ್‌ ಮಾಡಲ್ವಾ ಶೆಟ್ರ ಸಿನಿಮಾ?

ಕರಾವಳಿ ಪ್ರದೇಶಗಳಲ್ಲಿ ಮೊಂತಾ ಚಂಡಮಾರುತದ ಭೀತಿ ಹೆಚ್ಚಾಗಿದೆ. ಈ ಚಂಡಮಾರುತ ಗಂಭೀರ ಚಂಡಮಾರುತವಾಗಿ ಬದಲಾಗಿ ಅಕ್ಟೋಬರ್ 28ರ ಸಂಜೆ ಅಥವಾ ರಾತ್ರಿ ಕಾಕಿನಾಡ ಬಳಿಯಲ್ಲಿ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ. ತಿರುಪತಿ, ಚಿತ್ತೂರು, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಅಲ್ಲದೇ ಗಾಳಿ ವೇಗ 90-100 ಕಿ.ಮೀ. ಪ್ರತಿ ಗಂಟೆಗೆ ಇರಲಿದ್ದು, ಇದು 110 ಕಿ.ಮೀ.ವರೆಗೂ ಹೆಚ್ಚಾಗಬಹುದು ಎಂದು IMD ಮಾಹಿತಿ ನೀಡಿದೆ. ಇದ್ರ ಬೆನ್ನಲ್ಲೇ ತಿರುಪತಿ ಜಿಲ್ಲಾಧಿಕಾರಿ ಎಸ್. ವೆಂಕಟೇಶ್ವರ ಅವರು ತಿರುಪತಿಗೆ ಆಗಮಿಸುವ ಯಾತ್ರಿಗಳಿಗೆ ಹಾಗೂ ಸ್ಥಳೀಯರಿಗೆ ಮಹತ್ವದ ಸೂಚನೆ ನೀಡಿದ್ದಾರೆ.

ಜಿಲ್ಲೆಯು 75 ಕಿ.ಮೀ. ಕರಾವಳಿಯನ್ನು ಹೊಂದಿದ್ದು, ಐದು ಕರಾವಳಿ ವಿಭಾಗಗಳಲ್ಲಿ ಭಾರೀ ಮಳೆ ಬರಲಿದೆ. ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ತುರ್ತು ಸಂದರ್ಭ ಹೊರತುಪಡಿಸಿ ಜನರು ಮನೆಯೊಳಗೆ ಇರಲು ಸೂಚಿಸಲಾಗಿದೆ. ಅಲ್ಲದೇ ತಿರುಮಲಕ್ಕೆ ಪ್ರಯಾಣಿಸುವ ಯಾತ್ರಿಕರು ಯಾತ್ರೆಯನ್ನು ತಾತ್ಕಾಲಿಕವಾಗಿ ಮುಂದೂಡಬೇಕು. ಜಿಲ್ಲಾಡಳಿತ ಯಾತ್ರಿಕರಿಗೆ ಸದ್ಯ ಮಳೆ, ಗಾಳೊ ಹೆಚ್ಚಾಗಿರುವುದರಿಂದ ಭೂಕುಸಿತದ ಆತಂಕ ಇದೆ, ಹೀಗಾಗಿ ಜನರು ಆದಷ್ಟು ಯಾತ್ರೆಯನ್ನು ಮುಂದೂಡಬೇಕು ಎಂದು ಮನವಿ ಮಾಡಿದ್ದಾರೆ.

Shwetha M