13 ಸಿಸಿಟಿವಿ ಕ್ಯಾಮರಾಗಳನ್ನು ಕದ್ದ ಕಳ್ಳ ಕಪಿರಾಯ- ಅಂಗಡಿ ಮಾಲೀಕನ ಸ್ಥಿತಿ ಅಯ್ಯೋ ಮಾರಾಯ

13 ಸಿಸಿಟಿವಿ ಕ್ಯಾಮರಾಗಳನ್ನು ಕದ್ದ ಕಳ್ಳ ಕಪಿರಾಯ- ಅಂಗಡಿ ಮಾಲೀಕನ ಸ್ಥಿತಿ ಅಯ್ಯೋ ಮಾರಾಯ

ಅಂಗಡಿಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವುದು. ಇದರ ಬೆನ್ನಲ್ಲೇ ಸಿಸಿಟಿವಿ ಕ್ಯಾಮರಾವೇ ಕಣ್ಮರೆಯಾಗುವುದು. ಪದೇ ಪದೇ ಹಿಂಗ್ಯಾಕೆ ಆಗುತ್ತದೆ ಅಂತಾ ನೋಡಿದ್ರೆ ಕಳ್ಳ ಸಿಕ್ಕಿಬಿದ್ದಿದ್ದ. ಸಿಕ್ಕಿಬಿದ್ದ ಕಳ್ಳನನ್ನು ನೋಡಿ ಸ್ವತಃ ಅಂಗಡಿ ಮಾಲೀಕರೇ ಬೆಚ್ಚಿಬಿದ್ದಿದ್ದರು. ಯಾಕೆಂದರೆ ಆ ಸಿಸಿಟಿವಿ ಕ್ಯಾಮರಾ ಕದ್ದಿರೋ ಕಳ್ಳ ಬೇರಾರು ಆಗಿರಲಿಲ್ಲ. ಇದೆಲ್ಲಾ ಕೋತಿಯೊಂದರ ಕಿತಾಪತಿ. ತಮಿಳುನಾಡಿನ ಕನ್ಯಾಕುಮಾರಿಯ ಅಂಗಡಿಯೊಂದರಲ್ಲಿ ಕಪಿಚೇಷ್ಟೆ ಕಂಡು ಬಂದಿದ್ದು ಕಳ್ಳ ಕೋತಿಯನ್ನ ಏನು ಮಾಡೋದು ಅಂತಾ ಗೊತ್ತಾಗದೇ ಅಂಗಡಿ ಮಾಲೀಕರು ಪರದಾಡುತ್ತಿದ್ದಾರೆ.

ಇದನ್ನೂ ಓದಿ:  ಮಗುವಾಗಿದ್ದಾಗ ಕಿಡ್ನಾಪ್ – 51 ವರ್ಷಗಳ ಬಳಿಕ ಕುಟುಂಬ ಸೇರಿದ ಯುವತಿ 

ತಮಿಳುನಾಡಿನ ಕನ್ಯಾಕುಮಾರಿಯ ಅಂಗಡಿಯೊಂದರಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನೇ ಯಾರೋ ಕದಿಯುತ್ತಿದ್ದರು. ಇದು ಕಳ್ಳರ ಕೈ ಚಳಕ ಇರಬಹುದು ಎಂದುಕೊಂಡು ಮಾಲೀಕ ಸಿಸಿಟಿವಿ ಕಳುವಾಗುವುದಕ್ಕೂ ಮೊದಲಿನ ಫೂಟೇಜ್​​ಗಳನ್ನ ನೋಡಿದ್ದಾರೆ. ಆಗ ಕೋತಿಯ ಮುಖ ಅದರಲ್ಲಿ ಸೆರೆಯಾಗಿದೆ. ಇದೆಲ್ಲಾ ಕಳ್ಳ ಕೋತಿಯ ಕಿತಾಪತಿಯೆಂದು ಗೊತ್ತಾದ ಮೇಲೆ ಅಂಗಡಿ ಮಾಲೀಕರ ಪರದಾಟ ಹೇಳತೀರದಾಗಿತ್ತು. ಯಾಕೆಂದರೆ, ಇವರ ಅಂಗಡಿಯಲ್ಲಿ ಕಳ್ಳ ಕೋತಿ ಕದ್ದಿದ್ದು ಬರೋಬ್ಬರಿ 13 ಸಿಸಿಟಿವಿ ಕ್ಯಾಮರಾಗಳನ್ನು. ಹೊಸ ಸಿಸಿಟಿವಿ ಕ್ಯಾಮೆರಾವನ್ನು ಹಾಕಿದಾಗಲೆಲ್ಲ ಕೋತಿ ಆ ಸಿಸಿಟಿವಿ ಕ್ಯಾಮೆರಾಗಳನ್ನು ಕದಿಯುತಿತ್ತು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

suddiyaana