ಮಲೆನಾಡಿಗೆ ಮಾರಕವಾದ ಮಂಗನ ಕಾಯಿಲೆ..! – ಕೆಎಫ್ ಡಿಗೆ 18 ವರ್ಷದ ಯುವತಿ ಸಾವು

ಮಲೆನಾಡಿಗೆ ಮಾರಕವಾದ ಮಂಗನ ಕಾಯಿಲೆ..! – ಕೆಎಫ್ ಡಿಗೆ 18 ವರ್ಷದ ಯುವತಿ ಸಾವು

ಸ್ಥಳೀಯವಾಗಿ ಮಂಗನ ಕಾಯಿಲೆ ಎಂದು ಕರೆಸಿಕೊಳ್ಳುವ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಪ್ರತಿ ವರ್ಷ ಜೀವ ಹಾನಿ ಮಾಡುತ್ತಲೇ ಬಂದಿದೆ. ಮಹಾಮಾರಿ  ಮಂಗನ ಕಾಯಿಲೆಗೆ ಈ ವರ್ಷದ ಮೊದಲ ಬಲಿಯಾಗಿದೆ. ಮಂಗನ ಕಾಯಿಲೆಯಿಂದ (ಕೆಎಫ್ ಡಿ) ಬಳಲುತ್ತಿದ್ದ 18 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಲ್ಕಿಸ್ ಬಾನು ಪ್ರಕರಣ – ಅಪರಾಧಿಗಳ ಬಿಡುಗಡೆಗೆ ಗುಜರಾತ್ ಸರ್ಕಾರ ನೀಡಿದ್ದ ಅನುಮತಿ ರದ್ದುಗೊಳಿಸಿದ ‘ಸುಪ್ರೀಂ’

ಶಿವಮೊಗ್ಗ ಜಿಲ್ಲೆಯ ಹೊಸನಗರದ ಅರಮನೆ ಕೊಪ್ಪ ವ್ಯಾಪ್ತಿಯ ಗ್ರಾಮವೊಂದರ ಯುವತಿಗೆ ವಾರದ ಹಿಂದೆ ಜ್ವರ ಕಾಣಿಸಿಕೊಂಡಿತ್ತು. ಏಕಾಏಕಿ ಜ್ವರ ಉಲ್ಬಣಗೊಂಡು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಕೆಎಫ್ ಡಿ ಟೆಸ್ಟ್ ನಡೆಸಿದಾಗ ಮೊದಲ ಬಾರಿ ನೆಗೆಟಿವ್, ಎರಡನೇ ಬಾರಿ ಪಾಸಿಟಿವ್ ಬಂದಿತ್ತು.

ಮೆಗ್ಗಾನ್ ಆಸ್ಪತ್ರೆಯಲ್ಲಿ ಐಸಿಯುನಲ್ಲಿದ್ದ ಯುವತಿಯನ್ನು ಶುಕ್ರವಾರ ಸಂಜೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಹುಅಂಗಾಂಗ ವೈಫಲ್ಯದಿಂದ ಸೋಮವಾರ ಬೆಳಗ್ಗೆ ಯುವತಿ ಸಾವನ್ನಪ್ಪಿದ್ದಾಳೆ. ಈವರೆಗೆ ಮೂರು ಮಂದಿಗೆ ಪಾಸಿಟಿವ್ ಬಂದಿದ್ದು ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

Shwetha M