ಆನೆ, ಚಿರತೆ, ಹುಲಿ ಆಯ್ತು ಈಗ ಕೋತಿ ಕಾಟ – ಬಾಲಕನ ಹೊಟ್ಟೆ ಬಗೆದು ಕರುಳು ಕಿತ್ತು ಹತ್ಯೆಗೈದ ಮಂಗಗಳು!

ಆನೆ, ಚಿರತೆ, ಹುಲಿ ಆಯ್ತು ಈಗ ಕೋತಿ ಕಾಟ – ಬಾಲಕನ ಹೊಟ್ಟೆ ಬಗೆದು ಕರುಳು ಕಿತ್ತು ಹತ್ಯೆಗೈದ ಮಂಗಗಳು!

ಹುಲಿ, ಚಿರತೆ, ಆನೆಗಳು ಕಾಡಿನಿಂದ ನಾಡಿಗೆ ಬಂದು ಜನರ ನಿದ್ದೆಗೆಡಿಸುತ್ತಿವೆ. ಈಗಾಗಲೇ ಹಲವು ಜೀವ ಬಲಿ ಪಡೆದುಕೊಂಡಿವೆ. ಇದರ ಮಧ್ಯೆ ಕೋತಿಗಳ ಕಾಟ ಶುರುವಾಗಿದೆ.  ಕಳೆದ ಎರಡು ದಿನಗಳ ಹಿಂದೆಯಷ್ಟೇ ಕೋತಿ ದಾಳಿಯಿಂದ ದಾವಣಗೆರೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಈ ಘಟನೆ ಮಾಸುವ ಮುನ್ನವೇ ಗುಜರಾತ್‌ನಲ್ಲಿ ಕೋತಿಗಳು ಬಾಲಕನನ್ನು ಬಲಿ ತೆಗೆದುಕೊಂಡಿವೆ.

ಹೌದು, ಗುಜರಾತ್‌ನ ಗಾಂಧಿನಗರದ ಸಾಲ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆಟವಾಡುತ್ತಿದ್ದ ಹತ್ತು ವರ್ಷದ ಬಾಲಕನ ಮೇಲೆ ಕೋತಿಗಳು ಏಕಾಏಕಿ ದಾಳಿ ಮಾಡಿ ಮಾಡಿವೆ. ಬಳಿಕ ಉಗುರಿನಿಂದ ಪರಚಿ ಹೊಟ್ಟೆಯನ್ನು ಬಗೆದು ಕರುಳನ್ನು ಹೊರತೆಗೆದಿವೆ ಎಂದು ಪೊಲೀಸರು ತಿಳಿಸಿದ್ದಾರೆ.  ಮೃತಪಟ್ಟ ಬಾಲಕನನ್ನು ದೀಪಕ್ ಠಾಕೂರ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ನಾಯಿ ಕಚ್ಚಿದ ಸಂತ್ರಸ್ತರಿಗೆ ಪ್ರತಿ ಹಲ್ಲಿನ ಗಾಯಕ್ಕೆ 10,000 ರೂ. ಪರಿಹಾರ! – ಹೈಕೋರ್ಟ್‌

ಬಾಲಕನ ಮೇಲೆ ದಾಳಿ ಮಾಡುತ್ತಿರುವ ವೇಳೆ ಸ್ಥಳೀಯರು ಆತನನ್ನು ರಕ್ಷಿಸಲು ಸ್ಥಳಕ್ಕೆ ಧಾವಿಸಿದ್ದಾರೆ. ಆ ವೇಳೆಗಾಗಲೇ ಬಾಲಕ ಗಂಭೀರವಾಗಿ ಗಾಯಗೊಂಡಿದ್ದ. ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಆರಂಭಿಸುವ ಮುನ್ನವೇ ಬಾಲಕ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಂದು ವಾರದಲ್ಲಿ ಗ್ರಾಮದಲ್ಲಿ ಕೋತಿಗಳು ನಡೆಸಿದ ಮೂರನೇ ದಾಳಿ ಇದಾಗಿದೆ. ಮಂಗಗಳನ್ನು ಹಿಡಿಯಲು ಇಲಾಖೆ ಪ್ರಯತ್ನಿಸುತ್ತಿದೆ. ನಾವು ಕಳೆದ ಒಂದು ವಾರದಲ್ಲಿ ಎರಡು ಲಂಗೂರ್ ಗಳನ್ನು ರಕ್ಷಿಸಿದ್ದೇವೆ ಮತ್ತು ಇನ್ನೊಂದು ಲಂಗೂರ್ ಅನ್ನು ಬಲೆಗೆ ಬೀಳಿಸಲು ಪಂಜರಗಳನ್ನು ಇಟ್ಟಿದ್ದೇವೆ. ಗ್ರಾಮದಲ್ಲಿ ಕಳೆದ ಒಂದು ವಾರದಿಂದದಾಳಿಯಲ್ಲಿ ತೊಡಗಿರುವ ಕೋತಿಗಳ ದಂಡೇ ಇದೆ ಎಂದು ಅರಣ್ಯಾಧಿಕಾರಿ ವಿಶಾಲ್ ಚೌಧರಿ ತಿಳಿಸಿದ್ದಾರೆ.

Shwetha M