ಭಾರತದಲ್ಲಿ ಮೊದಲ ಬಾರಿಗೆ ಮನಿ ಸ್ಫೈಡರ್ ಪತ್ತೆ- ಅದೃಷ್ಟ ತರುತ್ತಾ ಈ ಜೇಡ
ಮುತಂಗ ಶ್ರೇಣಿಯಲ್ಲಿ ಕಂಡು ಬಂದ ಮನಿ ಸ್ಫೈಡರ್

ಭಾರತದಲ್ಲಿ ಮೊದಲ ಬಾರಿಗೆ ಮನಿ ಸ್ಫೈಡರ್ ಪತ್ತೆ- ಅದೃಷ್ಟ ತರುತ್ತಾ ಈ ಜೇಡಮುತಂಗ ಶ್ರೇಣಿಯಲ್ಲಿ ಕಂಡು ಬಂದ ಮನಿ ಸ್ಫೈಡರ್

ಕೇರಳ: ಯುರೋಪಿಯನ್ ಹುಲ್ಲುಗಾವಲುಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಮನಿ ಸ್ಪೈಡರ್ ಗಳು ಮೊಟ್ಟ ಮೊದಲ ಬಾರಿಗೆ ಭಾರತದ ವಯನಾಡ್ ವನ್ಯಜೀವಿ ಅಭಯಾರಣ್ಯದ ಮುತಂಗ ಶ್ರೇಣಿಯಲ್ಲಿ ಕಂಡು ಬಂದಿವೆ.

ಇರಿಂಜಲಕುಡದ ಕ್ರೈಸ್ಟ್ ಕಾಲೇಜಿನ ಸಂಶೋಧಕರು ಮನಿ ಸ್ಪೈಡರ್ ಪತ್ತೆ ಬಗ್ಗೆ ಬಹಿರಂಗ ಮಾಹಿತಿ ನೀಡಿದ್ದಾರೆ.  ಮನಿ ಸ್ಪೈಡರ್ ಅನ್ನು “ಅದೃಷ್ಟ“ದ ಸಂಕೇತ ಎನ್ನಲಾಗಿದೆ. ಈ ಜೇಡವು ಯಾರ ಸಂಪರ್ಕ ಮಾಡುತ್ತದೆಯೋ ಅವರಿಗೆ ಅದೃಷ್ಟ ಹರಿದು ಬರುತ್ತದೆ ಎಂದು ನಂಬಲಾಗಿದೆ. ತ್ರಿಶ್ಶೂರಿನ ಇರಿಂಜಲಕುಡದ ಕ್ರೈಸ್ಟ್ ಕಾಲೇಜಿನ ಸಂಶೋಧಕರು ಪ್ರೊಸೊಪೊನಾಯ್ಡ್ಸ್ ಕುಲದ ಅಡಿಯಲ್ಲಿ ಬರುವ ಕುಬ್ಜ ಜೇಡಗಳ (ಲಿನಿಫಿಡೆ) ಕುಟುಂಬಕ್ಕೆ ಸೇರಿದ ಜೇಡವನ್ನು ಕಂಡುಹಿಡಿದಿದ್ದಾರೆ. ಇದಕ್ಕೆ ಪ್ರೊಸೊಪೊನಾಯ್ಡ್ಸ್ ಬೈಫ್ಲೆಕ್ಟೋಗೈನಸ್ ಎಂಬ ಹೆಸರನ್ನು ನೀಡಲಾಗಿದೆ.

ಇದನ್ನೂ ಓದಿ: 30 ವರ್ಷಗಳ ಕಾಲ ಫ್ರೀಜರ್ ನಲ್ಲಿ ಇರಿಸಲಾಗಿದ್ದ ಭ್ರೂಣಗಳಿಗೆ ಜನನ ಭಾಗ್ಯ

ಗಂಡು ಮತ್ತು ಹೆಣ್ಣು ಮನಿ ಸ್ಪೈಡರ್ ಗಳು ಕ್ರಮವಾಗಿ 3 ಮಿಲಿಮೀಟರ್ ಮತ್ತು 4 ಮಿಲಿಮೀಟರ್ ಉದ್ದ ಇರುತ್ತವೆ. ಇವುಗಳು ಗಾಢ ಕಂದು ಬಣ್ಣದಲ್ಲಿದೆ. ಅಂಡಾಕಾರದ ಹೊಟ್ಟೆಯ ಮೇಲೆ ಬೆಳ್ಳಿಯಂತೆ ಕಾಣುವ ತೇಪೆಗಳು ಮತ್ತು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಇವು ಆಲಿವ್ ಹಸಿರು ಬಣ್ಣದ ಕಾಲುಗಳ ಮೇಲೆ ಹಲವಾರು ಕಪ್ಪು ಚುಕ್ಕೆಗಳನ್ನು ಹೊಂದಿರುತ್ತವೆ. ಈಗ ಸದ್ಯಕ್ಕೆ ಕಂಡುಬಂದಿರುವ ಜೇಡಗಳು ಎಂಟು ಕಪ್ಪು ಕಣ್ಣುಗಳನ್ನು ಎರಡು ಸಾಲುಗಳಲ್ಲಿ ಜೋಡಿಸಿದಂತೆ ಹೊಂದಿದೆ ಎಂದು ಆವಿಷ್ಕಾರ ತಂಡವು ಮಾಹಿತಿ ನೀಡಿದೆ.

ಹೆಣ್ಣು ಮನಿ ಸ್ಪೈಡರ್ ಒಣ ಮರದ ಕೊಂಬೆಗಳ ನಡುವೆ ತ್ರಿಕೋನಾಕಾರದ ಜಾಲಗಳನ್ನು ನಿರ್ಮಿಸುತ್ತವೆ ಮತ್ತು ಸಣ್ಣ ಕೀಟಗಳನ್ನು ತಿನ್ನುತ್ತವೆ. ಆದರೆ ಗಂಡು ಜೇಡಗಳು ಒಣ ಎಲೆಗಳ ಕೆಳಗೆ ಬಚ್ಚಿಟ್ಟುಕೊಳ್ಳಲು ಬಯಸುತ್ತವೆ. ಒಂದೇ ಹೆಣ್ಣಿನ ಬಲೆಯಲ್ಲಿ ಎರಡು ಅಥವಾ ಹೆಚ್ಚು ಗಂಡು ಜೇಡಗಳನ್ನು ಕಾಣಬಹುದಾಗಿದೆ. ಈ ಜಾತಿಯ ಜೇಡ ಇರುವೆಯನ್ನು ಹೋಲುತ್ತಿದ್ದು, ಟಾಕ್ಸಿಯಸ್ ಅಲ್ಬೋಕ್ಲಾವಸ್ ಎಂದು ಹೆಸರಿಸಲಾಗಿದೆ.

ಸಂಶೋಧಕರು ಈ ಜಾತಿಯ ಜಿಗಿತದ ಜೇಡಗಳನ್ನು ಎಲೆಯ ಕಸದಿಂದ ಸಂಗ್ರಹಿಸಿದರು. ಸಂಭಾವ್ಯ ಪರಭಕ್ಷಕಗಳಿಂದ ತಪ್ಪಿಸಿಕೊಂಡು ಹೋಗುವಾಗ ಈ ಜೇಡಗಳು ತಮ್ಮ ಮುಂಭಾಗದ ಜೋಡಿ ಕಾಲುಗಳನ್ನು ಎತ್ತುವ ಮೂಲಕ ಇರುವೆಗಳನ್ನು ಸಂಪೂರ್ಣವಾಗಿ ಅನುಕರಿಸುತ್ತವೆ. ಈ ಜಾತಿಯ ಮೂರು ಪ್ರಭೇದಗಳು ಭಾರತದಲ್ಲಿ ಮಾತ್ರ ವರದಿಯಾಗಿವೆ ಮತ್ತು ಇದು ಪಶ್ಚಿಮ ಘಟ್ಟಗಳಿಂದ ವರದಿಯಾದ ಮೊದಲ ಜಾತಿಯ ಜೇಡ ಎಂದು ಡಾ. ಸುಧಿಕುಮಾರ್ ತಿಳಿಸಿದ್ದಾರೆ.

ಈ ಜಾತಿಯ ಗಂಡು ಮತ್ತು ಹೆಣ್ಣು ಜೇಡಗಳು ಕ್ರಮವಾಗಿ 4 ಮಿಮೀ ಮತ್ತು 6 ಮಿಮೀ ಉದ್ದದವರೆಗೆ ಬೆಳೆಯುತ್ತವೆ. ಹೆಣ್ಣುಗಳ ಕಡು ಕಂದು ಹೊಟ್ಟೆಯ ಮೇಲೆ ಒಂದು ಜೋಡಿ ಬಿಳಿ ಪಟ್ಟೆಗಳನ್ನು ಹೊಂದಿದ್ದು, ಈ ಗುಂಪಿನ ಇತರ ಜೇಡಗಳಿಂದ ಭಿನ್ನವಾಗಿರುತ್ತವೆ. ಈ ಜಾತಿಯ ಗಂಡು ಕಂದು ಬಣ್ಣದ ಸೆಫಾಲಿಕ್ ಪ್ರದೇಶ ಮತ್ತು ಬಿಳಿ ಕೂದಲಿನೊಂದಿಗೆ ಕಪ್ಪು ಎದೆಯನ್ನು ಹೊಂದಿದೆ. ಫಾರ್ವರ್ಡ್-ಪ್ರೊಜೆಕ್ಟಿಂಗ್ ಕೋರೆಹಲ್ಲುಗಳು ಕೊಂಬಿನ ವಿಶಿಷ್ಟ ಆಕಾರವನ್ನು ಹೊಂದಿವೆ.

ಇದನ್ನೂ ಓದಿ:ಕೇವಲ 20 ನಿಮಿಷದಲ್ಲಿ ಸೈಕಲ್, ಎಲೆಕ್ಟ್ರಿಕಲ್ ಸೈಕಲ್ ಆಗಿ ಕನ್ವರ್ಟ್ ಆಗುತ್ತೆ!

ಭಾರತದಲ್ಲಿ ಕಂಡು ಬಂದ ಮೊಟ್ಟ ಮೊದಲ ತಳಿ ಈ ಪ್ರಬೇಧಕ್ಕೆ ಸೇರಿದ ಆರು ಜಾತಿಯ ಜೇಡಗಳನ್ನು ಮಾತ್ರ ಪ್ರಪಂಚದಾದ್ಯಂತ ಗುರುತಿಸಲಾಗಿದೆ. ಇದು ಭಾರತದಲ್ಲಿ ಈ ತಳಿಯ ಮೊದಲ ವರದಿಯಾಗಿದ್ದು, ದೇಶದಲ್ಲಿ ಈ ಜಾತಿಯ ಜೇಡಗಳ ಬಗ್ಗೆ ವ್ಯಾಪಕವಾದ ಅಧ್ಯಯನಗಳು ನಡೆದಿಲ್ಲ ಎಂದು ಕ್ರೈಸ್ಟ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಸುಧಿಕುಮಾರ್ ಎ.ವಿ. ತಿಳಿಸಿದ್ದಾರೆ.

ಸಂಶೋಧನಾ ತಂಡದಲ್ಲಿ ಅನಿಮಲ್ ಟ್ಯಾಕ್ಸೋನಾಮಿ ಮತ್ತು ಪರಿಸರ ವಿಜ್ಞಾನ ಕೇಂದ್ರ, ಕ್ರೈಸ್ಟ್ ಕಾಲೇಜಿನ ಸಂಶೋಧನಾ ವಿದ್ವಾಂಸರಾದ ಅತಿರಾ ಜೋಸ್ ಮತ್ತು ವಿಷ್ಣು ಹರಿದಾಸ್ ಸಹ ಭಾಗಿಯಾಗಿದ್ದರು. ಸಂಶೊಧನೆಯಲ್ಲಿ ಮಾನಂತವಾಡಿ ವ್ಯಾಪ್ತಿಯಲ್ಲಿ ಜಿಗಿಯುವ ಜೇಡಗಳ ಗುಂಪಿಗೆ ಸೇರಿದ ಇರುವೆಗಳನ್ನು ಅನುಕರಿಸುವ ಜೇಡಗಳನ್ನು ಸಹ ಅವರು ಪತ್ತೆ ಮಾಡಿದ್ದಾರೆ. ಇವು ಸಾಲ್ಟಿಸಿಡೆ ಕುಟುಂಬಕ್ಕೆ ಸೇರಿದವು ಎಂದು ಪತ್ತೆಯಾದ ಜೀವಿಗಳ ಬಗ್ಗೆ ಹೇಳಿದ್ದಾರೆ.

ಈ ಅಧ್ಯಯನಕ್ಕೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್‌ಟಿ) ಮತ್ತು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಧನಸಹಾಯ ನೀಡಿದೆ. ಸಂಶೋಧನೆಗಳನ್ನು ಬ್ರಿಟಿಷ್ ವೈಜ್ಞಾನಿಕ ನಿಯತಕಾಲಿಕೆಗಳಾದ ಪೆಕ್ಹಮಿಯಾ ಮತ್ತು ಅರಾಕ್ನಾಲಜಿಯಲ್ಲಿ ಪ್ರಕಟಿಸಲಾಗಿದೆ.

suddiyaana