ಕಾಂಗ್ರೆಸ್​ ಸಚಿವನ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ – ಕಂತೆ ಕಂತೆ ನೋಟು ಪತ್ತೆ

ಕಾಂಗ್ರೆಸ್​ ಸಚಿವನ ಆಪ್ತ ಕಾರ್ಯದರ್ಶಿ ಮನೆ ಮೇಲೆ ಇಡಿ ದಾಳಿ – ಕಂತೆ ಕಂತೆ ನೋಟು ಪತ್ತೆ

ಲೋಕಸಭೆ ಚುನಾವಣೆಯ ಮೂರನೇ ಹಂತದ ಮತದಾನಕ್ಕೆ ಕೌಂಟ್‌ಡೌನ್‌ ಶುರುವಾಗಿದೆ. ಈ ಹೊತ್ತಲ್ಲೇ ಜಾರಿ ನಿರ್ದೇಶನಾಲಯ ದೊಡ್ಡ ಬೇಟೆಯಾಡಿದೆ. ರಾಂಚಿಯ ಹಲವು ಸ್ಥಳಗಳಲ್ಲಿ ದಾಳಿ ನಡೆಸಿ ಕಂತೆ ಕಂತೆ ನೋಟುಗಳನ್ನು ಪತ್ತೆ ಮಾಡಿದೆ.

ಇದನ್ನೂ ಓದಿ: ಡಿಕೆ ಬ್ರದರ್ಸ್ ಗೆ ಶಾಕ್ ಕೊಟ್ರಾ ಡಾಕ್ಟರ್.. – ಸಮೀಕ್ಷೆ ನಿಜವಾಗುತ್ತಾ?

ಸೋಮವಾರ ಬೆಳ್ಳಂ ಬೆಳಗ್ಗೆ ​ ಜಾರ್ಖಂಡ್​ನ 6 ಸ್ಥಳಗಳಲ್ಲಿ ED ಅಧಿಕಾರಿಗಳು ರೇಡ್ ಮಾಡಿದ್ದಾರೆ.  ದಾಳಿ ವೇಳೆ ಜಾರ್ಖಂಡ್‌ ನ ಗ್ರಾಮೀಣಾಭಿವೃದ್ದಿ ಸಚಿವ ಅಲಂಗೀರ್ ಅಲಂ ಆಪ್ತ ಕಾರ್ಯದರ್ಶಿ ಮನೆ ಕಂತೆ ಕಂತೆ ಹಣ ಪತ್ತೆಯಾಗಿದೆ. ಸುಮಾರು  30 ಕೋಟಿಗೂ ಅಧಿಕ ನಗದನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಲಂಗೀರ್ ಅಲಂ ಆಪ್ತ ಸಂಜೀವ್​ ಲಾಲ್ ಎಂಬವರ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರೇಡ್​ ಮಾಡಿದ್ದಾರೆ. ಈ ವೇಳೆ ಕಂತೆ ಕಂತೆ ನೋಟುಗಳು ಸಿಕ್ಕಿವೆ. ಸುಮಾರು 30 ಕೋಟಿಗೂ ಅಧಿಕ ಹಣವನ್ನು ಗುಡ್ಡೆ ಹಾಕಿದ ದೃಶ್ಯ ಸಮೇತ ಘಟನೆ ಬಯಲಾಗಿದೆ.

ಸಂಜೀವಲಾಲ್ ಜೊತೆಗೆ​ ಗ್ರಾಮೀಣಾಭಿವೃದ್ದಿ ಇಲಾಖೆಯ ಇಂಜಿನಿಯರ್ ವೀರೇಂದ್ರ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ವೀರೇಂದ್ರ ಅವರನ್ನು ಅಕ್ರಮ ಹಣ ವರ್ಗಾವಣೆ ಕೇಸ್​​ನಲ್ಲಿ ಬಂಧಿಸಲಾಗಿದೆ.

Shwetha M