ಸೋಮವಾರದಂದು ಶಿವನ ಜೊತೆ ಈ ದೇವರಗಳನ್ನ ಪೂಜಿಸಿ

ಸೋಮವಾರದ ದಿನದಂದು ಶಿವನನ್ನು ಮಾತ್ರವಲ್ಲ ಶಿವನೊಂದಿಗೆ ನಾವು ಹಲವು ದೇವರನ್ನು ಕೂಡ ಪೂಜಿಸಿದ್ರೆ ಜೀವನದಲ್ಲಿ ನೆಮ್ಮದಿ ಸಿಗುತ್ತೆ. ಹಾಗಿದ್ರೆ ಶಿವನೊಂದಿಗೆ ನಾವು ಯಾವ ದೇವರನ್ನು ಪೂಜಿಸಬೇಕು ಅನ್ನೋದ್ದನ್ನ ನೋಡೋಣ.
ಚಂದ್ರದೇವ
ಚಂದ್ರದೇವನು ಶಿವನ ಶಿರದ ಮೇಲೆ ಆಶ್ರಯವನ್ನು ಪಡೆದುಕೊಂಡವನು. ಚಂದ್ರನು ಮನಸ್ಸಿನ ಸಂಕೇತವಾಗಿದ್ದಾನೆ. ಸೋಮವಾರದ ದಿನದಂದು ನಾವು ಶಿವನನ್ನು ಪೂಜಿಸುವುದರ ಜೊತೆಗೆ ಚಂದ್ರದೇವನನ್ನು ಕೂಡ ಪೂಜಿಸಬೇಕಾಗುತ್ತದೆ. ಯಾವ ವ್ಯಕ್ತಿ ಸೋಮವಾರದ ದಿನದಂದು ಶಿವನೊಂದಿಗೆ ಚಂದ್ರ ದೇವನನ್ನು ಕೂಡ ಪೂಜಿಸುತ್ತಾನೋ ಆ ವ್ಯಕ್ತಿ ತನ್ನ ಜೀವನದುದ್ದಕ್ಕೂ ಮಾನಸಿಕ ಶಾಂತಿಯೊಂದಿಗೆ ತಾಳ್ಮೆಯನ್ನು ಕೂಡ ಕಲಿತುಕೊಳ್ಳುತ್ತಾನೆ. ಸೋಮವಾರದ ದಿನದಂದು ಶಿವನೊಂದಿಗೆ ಚಂದ್ರನನ್ನು ಪೂಜಿಸುವುದರಿಂದ ವ್ಯಕ್ತಿಯ ಜಾತಕದಲ್ಲಿನ ಚಂದ್ರನ ಸ್ಥಾನವೂ ಕೂಡ ಬಲಗೊಳ್ಳುತ್ತದೆ
ಗಂಗಾ ಮಾತೆ
ಶಿವನ ಜಟೆಯಲ್ಲಿ ನೆಲೆಸಿದವಳು. ಗಂಗೆಯ ಅಹಂಕಾರವನ್ನು ಮುರಿದವನು ಶಿವ. ಗಂಗೆ ಸಂಪೂರ್ಣ ಸೃಷ್ಟಿಯನ್ನು ನಾಶ ಮಾಡಲು ಹೊರಟಾಗ ಶಿವನು ಆಕೆಯನ್ನು ತನ್ನ ಜಟೆಯ ಮೂಲಕ ಹಿಡಿದಿಟ್ಟುಕೊಳ್ಳುತ್ತಾನೆ.ಅಷ್ಟು ಮಾತ್ರವಲ್ಲ ಭೂಮಿಯಲ್ಲಿ ಶಿವನು ಗಂಗೆಗೆ ಪೂಜನೀಯ ಸ್ಥಾನವನ್ನು ಕೂಡ ನೀಡಿದ್ದಾನೆ. ಸೋಮವಾರದ ದಿನದಂದು ನಾವು ಶಿವನನ್ನು ಪೂಜಿಸುವುದು ಎಷ್ಟು ಶುಭವೋ ಗಂಗೆಯನ್ನು ಕೂಡ ಶಿವನೊಂದಿಗೆ ಪೂಜಿಸುವುದು ಅಷ್ಟೇ ಶುಭವಾಗಿದೆ. ಸೋಮವಾರದ ದಿನ ಶಿವಲಿಂಗದ ಮೇಲೆ ಗಂಗಾಜಲವನ್ನು ಅರ್ಪಿಸಿ ಅಭಿಷೇಕವನ್ನು ಮಾಡಬೇಕು.
ನಂದಿಯು ಶಿವನ ವಾಹನ
ಅಷ್ಟು ಮಾತ್ರವಲ್ಲ ನಂದಿ ಎಂದರೆ ಶಿವನಿಗೆ ಅತ್ಯಂತ ಪ್ರೀತಿ. ಸೋಮವಾರದ ದಿನದಂದು ಶಿವಭಕ್ತರು ದೇವಸ್ಥಾನಕ್ಕೆ ಹೋದಾಗ ಅಲ್ಲಿರುವ ಶಿವನನ್ನು ಪೂಜಿಸಿದ ನಂತರ ಶಿವನ ಮುಂದೇ ಕುಳಿತಿರುವ ನಂದಿಯನ್ನು ಕೂಡ ಪೂಜಿಸಬೇಕು. ನಂದಿಯ ಕಿವಿಯಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳಬೇಕು. ಈ ರೀತಿ ಬೇಡಿಕೊಳ್ಳುವುದರಿಂದ ನಂದಿಯು ಶಿವನಿಗೆ ನಿಮ್ಮ ಬೇಡಿಕೆಯನ್ನು ಹೇಳುತ್ತಾನೆ. ಇದು ಶಿವನಿಗೆ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಸುಲಭವಾಗುತ್ತದೆ

ನೋಡಿರಿ

