ನೀವು ಶಿವನ ಭಕ್ತರೇ – ಸೋಮವಾರ ಈ 5 ಆಹಾರವನ್ನ ಯಾವುದೇ ಕಾರಣಕ್ಕೂ ಸೇವಿಸಬೇಡಿ

ಹಿಂದೂ ಧರ್ಮದಲ್ಲಿಸೋಮವಾರವು ಪರಮೇಶ್ವರನಾದ ಶಿವನಿಗೆ ಮತ್ತು ಈ ವಾರದ ಅಧಿಪತಿಯಾದ ಚಂದ್ರ ಗ್ರಹಕ್ಕೆ ಅರ್ಪಿತವಾದ ಪವಿತ್ರ ದಿನವಾಗಿದೆ. ಜ್ಯೋತಿಷ್ಯದ ಪ್ರಕಾರ, ಚಂದ್ರನು ನಮ್ಮ ಮನಸ್ಸು, ಭಾವನಾತ್ಮಕ ಸ್ಥಿರತೆ, ಶಾಂತಿ ಮತ್ತು ಸಮತೋಲನವನ್ನು ನಿಯಂತ್ರಿಸುತ್ತಾನೆ. ಈ ದಿನದಂದು ನಾವು ವ್ರತ ನಿಯಮಗಳನ್ನು ಪಾಲಿಸುವುದರಿಂದ, ಜಾತಕದಲ್ಲಿ ಚಂದ್ರನ ಸ್ಥಾನ ಬಲಗೊಂಡು ಜೀವನದಲ್ಲಿ ನೆಮ್ಮದಿ ದೊರೆಯುತ್ತದೆ. ಆದರೆ, ಸೋಮವಾರದಂದು ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಚಂದ್ರನ ಶಕ್ತಿ ದುರ್ಬಲಗೊಂಡು, ಶಿವನ ಕೃಪೆಗೆ ದೂರವಾಗಬೇಕಾಗುತ್ತದೆ. ಹಾಗಿದ್ರೆ ಯಾವೆಲ್ಲಾ ಆಹಾರನ್ನ ಸೇವಿಸಬಾರದು ಅನ್ನೋದ್ದನ್ನ ನೋಡೋಣ..
ಈರುಳ್ಳಿ ಮತ್ತು ಬೆಳ್ಳುಳ್ಳಿ
ಇವು ಕೂಡ ತಾಮಸಿಕ ವರ್ಗಕ್ಕೆ ಸೇರಿವೆ. ಶಿವನು ಧ್ಯಾನಪ್ರಿಯನಾಗಿದ್ದಾನೆ. ಈ ಆಹಾರಗಳು ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರಿ, ಏಕಾಗ್ರತೆಯನ್ನು ಕುಗ್ಗಿಸುತ್ತವೆ. ಇದು ಶಿವನ ಆರಾಧನೆಗೆ ಅಡ್ಡಿಯುಂಟುಮಾಡುತ್ತದೆ.
ಕಹಿ ಆಹಾರಗಳು
ಹಾಗಲಕಾಯಿ ಅಥವಾ ಬೇವಿನಂತಹ ಅತಿಯಾದ ಕಹಿ ಆಹಾರಗಳು ದೇಹದಲ್ಲಿ ಪಿತ್ತ ಮತ್ತು ಕಫವನ್ನು ಹೆಚ್ಚಿಸುತ್ತವೆ. ಇದು ಮನಸ್ಸಿನಲ್ಲಿ ಕಿರಿಕಿರಿಯನ್ನು ಸೃಷ್ಟಿಸಿ, ಸಕಾರಾತ್ಮಕ ಚಿಂತನೆಗೆ ಅಡ್ಡಿಯುಂಟುಮಾಡುತ್ತದೆ.
ಬದನೆಕಾಯಿ
ಇದನ್ನು ತಾಮಸಿಕ ಆಹಾರದ ಸಾಲಿನಲ್ಲಿ ಸೇರಿಸಲಾಗಿದೆ. ಸೋಮವಾರ ಇದನ್ನು ಸೇವಿಸುವುದರಿಂದ ಮನಸ್ಸಿನಲ್ಲಿ ಆಕ್ರಮಣಶೀಲತೆ ಹೆಚ್ಚಾಗುತ್ತದೆ. ಇದು ಮಂಗಳ ಗ್ರಹದ ಅಶುಭ ಪ್ರಭಾವವನ್ನು ಹೆಚ್ಚಿಸಿದಂತೆ ಆಗಿ, ಚಂದ್ರನ ಶಾಂತ ಗುಣಕ್ಕೆ ಧಕ್ಕೆಯಾಗುತ್ತದೆ.
ಕಪ್ಪು ಎಳ್ಳು
ಕಪ್ಪು ಎಳ್ಳು ಶನಿ ಗ್ರಹದ ಸಂಕೇತ. ಶನಿಯು ಶಿವನ ಆರಾಧಕನಾದರೂ, ಚಂದ್ರನ ದಿನದಂದು ಎಳ್ಳು ಸೇವಿಸುವುದು ದೇಹದಲ್ಲಿ ವಿಭಿನ್ನ ಗ್ರಹಗಳ ಶಕ್ತಿಯನ್ನು ಮಿಶ್ರಣಗೊಳಿಸಿದಂತೆ. ಇದರಿಂದ ಮನಸ್ಸು ಭಾರವಾಗಿ, ಕಾರ್ಯಗಳಲ್ಲಿ ಉದಾಸೀನತೆ ಮತ್ತು ಆಸಕ್ತಿ ಕೊರತೆ ಉಂಟಾಗಬಹುದು.
ಮಾಂಸ ಮತ್ತು ಮದ್ಯ
ಇವು ಅತ್ಯಂತ ತಾಮಸಿಕವಾಗಿದ್ದು, ಮನಸ್ಸಿನ ಏಕಾಗ್ರತೆಯನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಇದರಿಂದ ಧ್ಯಾನ, ಪೂಜೆಯ ಕಡೆ ಆಸಕ್ತಿ ಕಡಿಮೆಯಾಗಿ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉಂಟಾಗುತ್ತವೆ. ಜಾತಕದಲ್ಲಿ ದುರ್ಬಲ ಚಂದ್ರ ಇರುವವರು ಇದನ್ನು ಸೇವಿಸುವುದರಿಂದ ದಾಂಪತ್ಯ ಕಲಹ ಹೆಚ್ಚಾಗಬಹುದು.

ನೋಡಿರಿ

