ಶಿವಲಿಂಗಕ್ಕೆ ತುಪ್ಪ ಅರ್ಪಿಸಿದರೆ ಏನಾಗುತ್ತೆ? – ಮಹಾದೇವನ ಕೃಪೆ ಪಡೆಯಲು ಈ ಪೂಜೆ ಮಾಡಿ!

ಶಿವಲಿಂಗಕ್ಕೆ ತುಪ್ಪ ಅರ್ಪಿಸಿದರೆ ಏನಾಗುತ್ತೆ? –  ಮಹಾದೇವನ ಕೃಪೆ ಪಡೆಯಲು ಈ ಪೂಜೆ ಮಾಡಿ!

ಭಗವಾನ್ ಶಿವನ ಆರಾಧನೆಗೆ ಹಿಂದೂ ಧಾರ್ಮಿಕ ಪರಂಪರೆಯಲ್ಲಿ ವಿಶೇಷ ಸ್ಥಾನವಿದೆ. ಆಡಂಬರದ ಪೂಜೆಗಿಂತ ನಿಷ್ಕಲ್ಮಶ ಭಕ್ತಿ ಮತ್ತು ಶ್ರದ್ಧೆಯಿಂದ ಸಲ್ಲಿಸುವ ಪ್ರಾರ್ಥನೆಗೆ ಮಹತ್ವ ನೀಡಲಾಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಅದರಲ್ಲೂ ಶಿವನಿಗೆ ಮೀಸಲಾದ ಸೋಮವಾರದಂದು ಮಹಾದೇವನನ್ನು ಪೂಜಿಸುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ.

ಸೋಮವಾರದಂದು ಅನೇಕ ಭಕ್ತರು ಶಿವಲಿಂಗಕ್ಕೆ ಜಲಾಭಿಷೇಕ ಮಾಡಿ, ಬಿಲ್ವಪತ್ರೆ ಅರ್ಪಿಸಿ, ಶಿವನ ಮಂತ್ರಗಳನ್ನು ಜಪಿಸುತ್ತಾರೆ. ಇದೇ ವೇಳೆ ಶಿವಲಿಂಗಕ್ಕೆ ತುಪ್ಪವನ್ನು ಅರ್ಪಿಸುವ ಪದ್ಧತಿಯೂ ಇದೆ. ಹಾಗಾದರೆ ಶಿವಪೂಜೆಯಲ್ಲಿ ತುಪ್ಪಕ್ಕೆ ಏಕೆ ಇಷ್ಟೊಂದು ಮಹತ್ವ ನೀಡಲಾಗುತ್ತದೆ ಅನ್ನೋದ್ದನ್ನ ನೋಡೋಣ.

ಇದನ್ನೂ ಓದಿ: ನವರಾತ್ರಿಯಲ್ಲಿ ಯಾಕೆ ಆಯುಧ ಪೂಜೆ ಮಾಡುತ್ತಾರೆ? – ಇದರ ಉದ್ದೇಶ ಏನು ಗೊತ್ತಾ?

ಧಾರ್ಮಿಕ ನಂಬಿಕೆಗಳ ಪ್ರಕಾರ, ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆಯನ್ನು ಒಳಗೊಂಡ ಪಂಚಾಮೃತದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುವುದು ಶುಭಕರವಾಗಿದೆ. ಈ ಆಚರಣೆಯಲ್ಲಿ ತುಪ್ಪವೂ ಪ್ರಮುಖ ಸ್ಥಾನ ಪಡೆದಿದೆ. ಶಿವಲಿಂಗಕ್ಕೆ ತುಪ್ಪ ಅರ್ಪಿಸುವುದರಿಂದ ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ.

ಇನ್ನು ಶಿವನ ನಾಮಸ್ಮರಣೆ ಹಾಗೂ ಮಂತ್ರಜಪವು ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ ಎಂದು ಭಕ್ತರು ನಂಬುತ್ತಾರೆ. ಪೂಜೆಯ ಸಂದರ್ಭದಲ್ಲಿ ಭಕ್ತಿಯಿಂದ ಪ್ರಾರ್ಥಿಸಿ, ತಮ್ಮ ಇಷ್ಟಾರ್ಥಗಳನ್ನು ಮಹಾದೇವನ ಮುಂದೆ ಸಲ್ಲಿಸುತ್ತಾರೆ.
ಆದರೆ ಇವೆಲ್ಲವೂ ಧಾರ್ಮಿಕ ನಂಬಿಕೆಗಳಾಗಿದ್ದು, ಫಲಗಳು ಖಚಿತವಾಗಿ ದೊರೆಯುತ್ತವೆ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ. ಒಟ್ಟಿನಲ್ಲಿ, ಶ್ರದ್ಧೆ ಮತ್ತು ಭಕ್ತಿಯಿಂದ ಶಿವನನ್ನು ಆರಾಧಿಸುವುದು ಈ ಪೂಜೆಯ ಮುಖ್ಯ ಉದ್ದೇಶವಾಗಿದೆ.

Kishor KV

Leave a Reply

Your email address will not be published. Required fields are marked *