ಏನಾಗಬಾರದಿತ್ತೋ ಅದೇ ಆಯ್ತಾ? – ‘ಮೊನಾಲಿಸಾ’ ಹೆಸರಲ್ಲಿ ಫೇಕ್ ಅಕೌಂಟ್?
ಸೌಂದರ್ಯವೇ ಸುಂದರಿಗೆ ಮುಳುವಾಯ್ತಾ?

ಏನಾಗಬಾರದಿತ್ತೋ ಅದೇ ಆಯ್ತಾ? – ‘ಮೊನಾಲಿಸಾ’ ಹೆಸರಲ್ಲಿ ಫೇಕ್ ಅಕೌಂಟ್?ಸೌಂದರ್ಯವೇ ಸುಂದರಿಗೆ ಮುಳುವಾಯ್ತಾ?

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಆಗಮಿಸಿರುವ ಲಕ್ಷಾಂತರ ಮಂದಿಯ ನಡುವೆ, ಕೆಲ ಜನರು ವಿಶೇಷ ಕಾರಣಕ್ಕಾಗಿ ಸುದ್ದಿಯಾಗುತ್ತಿದ್ದಾರೆ. ಈಗಾಗಲೇ ಕೆಲ ಸಾಧು ಸಂತರು ತಮ್ಮ ಪೂರ್ವಾಶ್ರಮದ ಕಥೆ ಹೇಳಿ ಎಲ್ಲರನ್ನು ಆಶ್ಚರ್ಯಗೊಳಿಸಿದ್ದಾರೆ. ನಾಗ ಸಾಧುಗಳು, ಅಘೋರಿಗಳು ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇದೀಗ ಕುಂಭಮೇಳದಲ್ಲಿ ರುದ್ರಾಕ್ಷಿ ಸರ ಮಾರಾಟ ಮಾಡುತ್ತಿದ್ದ 16 ವರ್ಷದ ಹುಡುಗಿಯೊಬ್ಬಳು ತನ್ನ ಕಣ್ಣುಗಳ ಮೂಲಕ ದೇಶದ ಜನರು ಗಮನ ಸೆಳೆದಿದ್ದಾಳೆ. ಈಕೆಯ ಫೋಟೋ, ರೀಲ್ಸ್‌ಗಳು ಒಂದರ ಹಿಂದೆ ಒಂದರಂತೆ ಬಂದು ರಾತ್ರೋರಾತ್ರಿ ಸ್ಟಾರ್ ಆಗಿದ್ದಾಳೆ. ಆದ್ರೆ ಅದೇ ಅವಳ ಪಾಲಿಗೆ ನರಕವಾಗಿದೆ.

ಇದನ್ನೂ ಓದಿ : ಕಾಂತಾರ ಏನೀ ಅವಾಂತರ? ಕಾಡಲ್ಲಿ ಬೆೆಂಕಿ ಅಸಲಿಯತ್ತೇನು?mona lisa 

ಮಧ್ಯಪ್ರದೇಶದ ಇಂದೋರ್‌ನ ಮೊನಾಲಿನಾ ಆಕರ್ಷಕ ಕಣ್ಣುಗಳು ಹಾಗೂ ನಿಷ್ಕಲ್ಮಶ ನಗುವಿನ ಮೂಲಕ ಎಲ್ಲರನ್ನು ಸೆಳೆಯುತ್ತಿದ್ದಳು. ಹೀಗಾಗಿ ಮೊನಾಲಿಸಾ ರಾತ್ರೋರಾತ್ರಿ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಳು. ಈಕೆಯ ಫೋಟೋ, ರೀಲ್ಸ್‌ಗಳು ಒಂದರ ಹಿಂದೆ ಒಂದರಂತೆ ಬರಲು ಆರಂಭವಾದವು. ದಿನ ಬೆಳಗಾಗುವುದರೊಳಗೆ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಸದ್ಯದ ಪರಿಸ್ಥಿತಿ ಯಾರಿಗೂ ಬೇಡ ಎಂಬಂತಾಗಿದೆ. ಮೊನಾಲಿಸಾ ಭೋಸ್ಲೆ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ, ಜಪಮಾಲೆ ಸೇರಿದಂತೆ ನಾನಾ ರೀತಿಯ ಸರಗಳನ್ನು ಮಾರುತ್ತಾಳೆ. ಡಿಜಿಟಲ್ ಕ್ರಿಯೇಟರ್ ಒಬ್ಬರು ಈಕೆಯ ರೀಲ್ಸ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊಗೆ ಮಿಲಿಯನ್ ಗಟ್ಟಲೇ ಲೈಕ್ಸ್, ವೀವ್ಲ್ ಬಂದಿದ್ದೇ ತಡ, ಸಾಮಾಜಿಕ ಜಾಲತಾಣದಲ್ಲಿ ಈಕೆಯ ಸೌಂದರ್ಯದ ಬಗ್ಗೆ ಚರ್ಚೆಗಳು ಹುಟ್ಟಿಕೊಂಡವು. ನೆಟ್ಟಿಗರು ‘ಮಹಾ ಕುಂಭಮೇಳದ ಮೊನಲಿಸಾ’ ಎಂದು ಕರೆಯಲು ಆರಂಭಿಸಿದರು. ಎಲ್ಲಾರ ಅವಳ ಹಿಂದೆ ಬಿದ್ದಿದ್ದಾರೆ.  ಕುಂಭಮೇಳದಲ್ಲಿ ತನ್ನ ಪಾಡಿಗೆ ಸರಗಳನ್ನು ಮಾರಾಟ ಮಾಡುತ್ತಿದ್ದ ಮೊನಾಲಿಸ ಪರಿಸ್ಥಿತಿ ಬದಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಖ್ಯಾತಿ ಪಡೆಯುತ್ತಿದ್ದಂತೆ ಎಲ್ಲಿಗೂ ಹೋಗುವಂತಿಲ್ಲ ಎಂಬ ಪರಿಸ್ಥಿತಿ ಬಂದೊದಗಿದೆ. ಮನೆಯಲ್ಲೂ ಇರಲಾಗದೆ, ಪೋಷಕರು, ಸಹೋದರಿಯರೂ ಸಮಸ್ಯೆ ಅನುಭವಿಸುವಂತಾಗಿದೆ.

 ಬೆನ್ನುಬಿದ್ದ ಡಿಜಿಟಲ್ ಕ್ರಿಯೇಟರ್ಸ್!

ಇಂಟರ್ನೆಂಟ್‌ನಲ್ಲಿ ಸುದ್ದಿಯಾಗುತ್ತಿದ್ದಂತೆ ಮಹಾ ಕುಂಭಮೇಳದಲ್ಲಿ ಭಾಗವಹಿಸಿದ್ದ ಮಾಧ್ಯಮದವರು, ಡಿಜಿಟಲ್ ಕ್ರಿಯೇಟರ್ಸ್ ಸೇರಿದಂತೆ ಎಲ್ಲರೂ ಸಂದರ್ಶನಕ್ಕಾಗಿ ಮೊನಾಲಿಸಾ ಹಿಂದೆ ಬಿದ್ದಿದ್ದಾರೆ. ಆಕೆಯನ್ನು ಹುಡುಕಿಕೊಂಡು ಇನ್ನಷ್ಟು ಯೂಟ್ಯೂಬರ್ಸ್ ಬರುತ್ತಿದ್ದಾರೆ. ಜತೆಗೆ ಸಾವಿರಾರು ಮಂದಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಪರಿಣಾಮ ವ್ಯಾಪಾರ ಮಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಅಲ್ಲದೆ ಕೆಲವರು ಎಲ್ಲೆ ಮೀರಿ ನಡೆದುಕೊಳ್ಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬಂತಾಗಿದೆ ಮೊನಾಲಿಸಾ ಸ್ಥಿತಿ. ತನ್ನ ಪಾಡಿಗೆ ಸರಗಳನ್ನು ಮಾರಾಟ ಮಾಡಿಕೊಂಡಿದ್ದ ಮೊನಾಲಿಸಾ, ಇದೀಗ ಯಾರಿಗೂ ಗುರುತು ಸಿಗದಂತೆ ಮುಖ ಮುಚ್ಚಿಕೊಂಡು ತೆರಳುವಂತಾಗಿದೆ. ಮೊನಾಲಿಸಾ, ಮುಖಕ್ಕೆ ಮಾಸ್ಕ್, ತಲೆ ಕವರ್ ಮಾಡಿ ಗುರುತು ಸಿಗದಂತೆ ತೆರಳುತ್ತಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಊರಿಗೆ ವಾಪಾಸ್ ಹೋದ ಮೊನಾಲಿಸಾ? 

ಮೊನಾಲಿಸಾ ಮಧ್ಯಪ್ರದೇಶದ ಇಂದೋರ್‌ನ ಬಡ ಕುಟುಂಬದ ಹೆಣ್ಣು ಮಗಳು. ತಂದೆ-ತಾಯಿಗೆ ಆರ್ಥಿಕವಾಗಿ ನೆರವಾಗುವ ಉದ್ದೇಶದಿಂದ ಮೊನಾಲಿಸಾ ಹಾಗೂ ಆಕೆಯ ತಂಗಿ ಕೂಡ ಹಗಲು ರಾತ್ರಿ ಎನ್ನದೇ ಜನದಟ್ಟಣೆ ಇರುವ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಹೂವು, ಮಣಿ ಸರಗಳನ್ನು ಮಾರಾಟ ಮಾಡುತ್ತಿದ್ದರು. ತಾವಾಯಿತು ತಮ್ಮ ಹೊಟ್ಟೆಪಾಡಾಯಿತು ಎಂದುಕೊಂಡಿದ್ದ ಕುಂಟುಂಬಕ್ಕೆ ಸಂಕಷ್ಟ ಎದುರಾಗಿದೆ.  ಯಾವಾಗ ಮೊನಾಲಿಸಾ ವಿಡಿಯೋಗಳು ವೈರಲ್‌ ಆದವೋ ಅಂದಿನಿಂದ ಆಕೆಗೆ ವ್ಯಾಪಾರ ಮಾಡಲು ಸಹ ಸಾಧ್ಯವಾಗಲಿಲ್ಲ. ಬಂದವರೆಲ್ಲಾ ಫೋಟೋ ವಿಡಿಯೋ ಅಂತಾ ಆಕೆಯ ಹಿಂದೆ ಬಿದ್ದರು. ಇದರಿಂದ ಬೇಸತ್ತ ಆಕೆಯ ತಂದೆ ನೀನು ಇಲ್ಲಿ ಇರುವುದೇ ಬೇಡ ಎಂದು ಆಕೆಯನ್ನು ಮಹಾ ಕುಂಭ ಮೇಳದಿಂದ ಕರೆದುಕೊಂಡು ಊರಿಗೆ ಹೋಗಿದ್ದಾರೆ. ವ್ಯಾಪಾರವೂ ಇಲ್ಲದೇ ಕಂಗೆಟ್ಟ ಕುಟುಂಬ ಈಗ ಮೊನಾಲಿಸಾಳನ್ನು ತಮ್ಮ ಊರಿಗೆ ವಾಪಸ್‌ ಕಳುಹಿಸಿದ್ದಾರೆ. ಈ ವಿಚಾರಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆಗುತ್ತಿದೆ.

 

ಮೊನಾಲಿಸಾ ಹೆಸರಲ್ಲಿ ಫೇಕ್ ಅಕೌಂಟ್‌ಗಳು

 

ಮೊನಾಲಿಸಾ ವಿಡಿಯೋಗಳು ಯಾವಾಗ ವೈರಲ್ ಆದ್ವೋ, ಯಾವಾಗ ಹೆಚ್ಚು ಹೆಚ್ಚು ಲೈಕ್ಸ್ ಬಂದ್ವೋ. ಆಗಲೇ ಸಾಕಷ್ಟು ಜನ ಆಕೆ ಹೆಸರಲ್ಲಿ ಫೇಕ್ ಅಕೌಂಟ್‌ಗಳನ್ನ ತೆೆರೆಯೋಕೆ ಶುರು ಮಾಡಿದ್ರು.. ಆಕೆಯ ಹೆಸರಲ್ಲಿ ಹಣ ಮಾಡೋಕೆ ಇಳಿದ್ರು..  ಇನ್ಸ್ಟಾಗ್ರಾಮ್ ಗ್ರಾಮನಲ್ಲಿ ಈಕೆಯ ಹೆಸರಲ್ಲಿ ಸಾಕಷ್ಟು ಅಕೌಂಟ್ ಕ್ರಿಯೆಟ್ ಆಗಿವೆ.. ಮೊನಾಲಿಸಾ ಕುಂಬ, ಮೊನಾಲಿಸಾ.. ಅನ್ನೋ ಹೆಸರಲ್ಲಿ ಅಂದ್ರೆ ಈಕೆಯ ಡಿಪಿ ಹಾಕಿ ಸಾಕಷ್ಟು ಅಕೌಂಟ್ ಕ್ರಿಯೆಟ್ ಮಾಡುತ್ತಿದ್ದಾರೆ..ಹಾಗೇ ವೈರಲ್ ಆಗಿರೋ ವಿಡಿಯೋವನ್ನ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿ ಲಕ್ಷಾಂತರ ವೀವ್ಸ್ ಪಡೆಯುತ್ತಿದ್ದಾರೆ.

ಮೊನಾಲಿಸಾಳಿಗೆ ಸಂಕಷ್ಟ ಎದುರಾಗುತ್ತಿದ್ದಂತೆ ಪೋಷಕರು ಮನೆಯಲ್ಲೇ ಇರುವಂತೆ ಸೂಚಿಸಿದ್ದರು. ಮನೆಯಿಂದ ಹೊರಬರದಂತೆ ಸೂಚಿಸಿದ್ದರು. ಆದರೆ ಸಾವಿರಾರು ಮಂದಿ ಮನೆ ಹುಡುಕಿಕೊಂಡು ತೆರಳುತ್ತಿದ್ದಾರೆ. ಮನೆಗೆ ತೆರಳಿ ಕಾಟ ಕೊಡುತ್ತಿದ್ದಾರೆ. ಇಷ್ಟೇ ಅಲ್ಲ ಮೊನಾಲಿಸಾ ಹಾಗೂ ಅವರ ಕುಟುಂಬಕ್ಕೆ ಸುರಕ್ಷತೆಯ ಸಮಸ್ಯೆಯೂ ಎದುರಾಗಿದೆ.  ಅಷ್ಟೇ ಅಲ್ಲಿ ವ್ಯಾಪಾರ ಮಾಡೋರ ಬಳಿ ಮೊನಾಲಿಸಾ ಎಲ್ಲಿ ಅಂತ ಕೇಳುತ್ತಿದ್ದಾರೆ.. ನಾಗಸಾಧುಗಳು ಸಾಧನೆ ಬಗ್ಗೆ ತೋರಿಸುತ್ತಿದ್ದ ಮೀಡಿಯಾಗಳು ಮತ್ತು ಯ್ಯೂಟಬರ್ಸ್ ಮೊನಾಲಿಸಾ ಹಿಂದೆ ಬಿದ್ದಿದ್ದಾರೆ.

ಮೊನಾಲಿಸಾಳ ಭವಿಷ್ಯ ಹಾಳಾಗದಿರಲಿ

ಒಂದಮ್ಮೆ ಈಕೆ ಕೂಡ ಬಣ್ಣದ ಲೋಕಕ್ಕೆ ಮನಸೋತು ಸಿನಿಮಾ ಇಂಟಸ್ಟ್ರಿಗೆ ಬರಬಹುದು..ಯಾರದ್ರೂ ಡೈರೆಕ್ಟರ್ ಈಕೆಯನ್ನ ಇಟ್ಟುಕೊಂಡು ಸಿನಿಮಾ ಮಾಡಿ. ನಂತ್ರ ನಡು ನೀರಲ್ಲಿ ಕೈ ಬಿಡಬಹುದು. ರಾನು ಮಂಡಲ್ ಎಂಬಾಕೆ ಕೂಡು ಒಂದು ಹಾಡು ಹೇಳಿ ರಾತ್ರೋರಾತ್ರಿ ಸ್ಟಾರ್ ಆಗಿದ್ಲು.. ಆಮೇಲೆ ಆಕೆಯಗೆ ಒಂದಿಷ್ಟು ಹಣ ಸಿಕ್ಕಿತ್ತು. ಆದ್ರೆ ಆಮೇಲೆ ಆಕೆ ಮತ್ತೆ ಬೀದಿಗೆ ಬಂದ್ಲು.. ಅಷ್ಟೇ ಯಾಕೆ ಹಳ್ಳಿ ಹೈದ ಕಾಡಿಗೆ ಬಂದ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದು ಎಲ್ಲರ ಗಮನ ಸೆಳೆದ ರಾಜೇಶ್ ಕಲರ್‌ ಫುಲ್‌ ಜೀವನಕ್ಕೆ ಹೊಂದಿಕೊಳ್ಳಲಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದ.. ಹೀಗಾಗಿ ಮೊನಾಲಿಸಾ ಕೂಡ ಇಷ್ಟು ದಿನ ತನ್ನದೇ ಪ್ರಪಂಚದಲ್ಲಿ ಇದ್ಲು.. ಸರ ಮಾರಿ ಬಂದಷ್ಟು ಲಾಭದಲ್ಲಿ ಸುಖ ಜೀವನ ನಡೆೆಸುತ್ತಿದ್ದಳು. ಆದ್ರೆ ಈ ವೈರಲ್ ಆಗಿರೋದ್ರಿಂದ ಎಲ್ಲಿಗೂ ವ್ಯಾಪಾರಕ್ಕೆ ಹೋಗದೇ, ಮುಖ ಮುಚ್ಚಿಕೊಂಡು ಹೋಗುವಂತಾಗಿದೆ..ಎಲ್ಲಾ ಒಂದ್ಕಡೆ ತನ್ನ ಸೌಂದರ್ಯವೇ ಇವಳಿಗೆ ಮುಳುವಾಯ್ತಾ ಅನ್ನೋ ಪ್ರಶ್ನೆ ಹುಟ್ಟುಕೊಂಡಿದೆ.

 ಈ ಜನಾಂಗದ ಎಲ್ಲರ ಕಣ್ಣುಗಳೇ ಹೀಗೆ

ಅಷ್ಟಕ್ಕೂ ಈಗ ಎಲ್ಲರ ಗಮನ ಬಾಲಕಿಯ ಮೇಲೆ ಇರುವುದರಿಂದ ಈಕೆ ಕಣ್ಣುಗಳ ಕುರಿತಾಗಿಯೇ ಬಹುತೇಕರು ಮಾತನಾಡುತ್ತಿದ್ದಾರೆ. ಈಕೆ ಕೋಬ್ರಾ ಜಿಪ್ಸಿ ಜನಾಂಗದ ಹುಡುಗಿ. ಆಲ್ಮೋಸ್ಟ್ ಈ ಜನಾಂಗದ ಎಲ್ಲರಿಗೂ ಇದೇ ರೀತಿಯ ಕಣ್ಣುಗಳು ಇರುತ್ತವೆ. ಈ ಜನಾಂಗದ ಕುರಿತಾಗಿ ಕೋಬ್ರಾ ಜಿಪ್ಸಿ ಹೆಸರಿನಲ್ಲಿ 2015 ರಲ್ಲಿ ಒಂದು ಸಾಕ್ಷ್ಯಚಿತ್ರವನ್ನು ಕೂಡ ಮಾಡಲಾಗಿದೆ.  ಬಹಳ ಹಿಂದೂಳಿದ ಜನಾಂಗವಾಗಿದ್ದು, ಅರಣ್ಯ ಪ್ರದೇಶದಲ್ಲಿ ಹೆಚ್ಚಾಗಿ ವಾಸ ಮಾಡುತ್ತಾರೆ. ಭಾರತೀಯ ಸಂಸ್ಕೃತಿ ಉಳಿಯುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಹಾವಿನ ಜೊತೆ ಇವರು ಹೆಚ್ಚು ಕಾಲ ಕಳೆಯುತ್ತಾರೆ. ಆವುಗಳನ್ನ ಆಟ ಆಡಿಸುತ್ತಾ  ಅದರ ವಿಷವನ್ನ ಮಾರುತ್ತಾ ಜೀವನ ನಡೆಸುತ್ತಾರೆ.. ಅಲ್ಲದೇ ಈ ಜನಾಂಗದ ಮಹಿಳೆಯರು ಕಣ್ಣಿನ ಕಾಡಿಗೆಗೆ ಹಾವಿನ ವಿಷವನ್ನ ಮಿಕ್ಸ್ ಮಾಡಿ ಹಂಚಿಕೊಳ್ಳುತ್ತಾರಂತೆ.. ರಾಜಸ್ಥಾನ , ಮಧ್ಯಪ್ರದೇಶ, ಉತ್ತರಪ್ರದೇಶದಲ್ಲಿ ಇವರು ಹೆಚ್ಚಾಗಿ ಕಾಣುತ್ತಾರೆ.

ಸೋಷಿಯಲ್ ಮೀಡಿಯಾದಿಂದ ಲಾಭ ಆಗಿದ್ದು ಯಾರಿಗೆ?

ಸಾಕಷ್ಟು ಜನ ಯ್ಯೂಟಬರ್ಸ್ ನಮ್ಮಿಂದ ಆಕೆ ಸ್ಟಾರ್ ಆಗಿದ್ದು, ನಾವು ಹಾಕೋ ವಿಡಿಯೋದಿಂದ ಸ್ಟಾರ್ ಆಗಿದ್ದಾಳೆ ಅನ್ನೋ ರೀತಿಯಲ್ಲಿದ್ದಾರೆ. ಆದ್ರೆ ಈಕೆಗೆ ಅದ್ರಿಂದ ಯಾವ ಲಾಭ ಕೂಡ ಇಲ್ಲ.. ಈಕೆ ವೈರಲ್ ಆಗುವ ಮುಂಚೆಯೇ ಚೆನ್ನಾಗಿ ಇದ್ಲು.. ಸಂತೋಷವಾಗಿದ್ಲು.. ವೈರಲ್ ಆದ ಮೇಲೆ ವ್ಯಾಪರವಿಲ್ಲ.. ಮೊದಲಿನಿಂದ ಎಲ್ಲಿ ಬೇಕಾದ್ರು ಅಲ್ಲಿ ಓಡಾಡೋ ಹಾಗಿಲ್ಲ.. ಹಣ ಕೂಡ ಬರುತ್ತಿಲ್ಲ.. ಆದ್ರೆ ಕೆಲ ಸೋಷಿಯಲ್ ಮೀಡಿಯಾ ಸ್ಟಾರ್ಸ್ ಈಕೆಯ ವಿಡಿಯೋ ಪೋಸ್ಟ್ ಮಾಡಿ ಲಕ್ಷ ಲಕ್ಷ ವೀವ್ಸ್‌, ಲೈಕ್ಸ್ ಪಡೆದು ಹಣ ಮಾಡುತ್ತಿದ್ದಾರೆ.  ಏನೇ ಆಗಲಿ ಈಕೆಯ ಜೀವನ ಚೆನ್ನಾಗಿರಲಿ..ಕಲರ್‌ಫುಲ್ ಲೈಫ್‌ಗೆ ಮನಸೋತು ಜೀವನ ಹಾಳಾಗದಿರಲಿ.. ನಮಸ್ಕಾರ..

Kishor KV

Leave a Reply

Your email address will not be published. Required fields are marked *