ಕೊಹ್ಲಿಯನ್ನು ಭೇಟಿ ಮಾಡಿದ RCB ಸ್ಟಾರ್ ಶ್ರೇಯಾಂಕಾ – ವಿರಾಟ್ ಬಗ್ಗೆ ಏನಂದ್ರು ಕನ್ನಡತಿ..?

2024ರ ಮಹಿಳಾ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ ಗೆದ್ದು ಬೀಗಿದೆ. ಕೊನೆಗೂ ಕಪ್ ಗೆಲ್ಲೋ ಮೂಲಕ ಆರ್ಸಿಬಿ ಇತಿಹಾಸ ನಿರ್ಮಿಸಿದೆ. ಈ ತಂಡದ ಭಾಗವಾಗಿದ್ದವರು ಕರ್ನಾಟಕದ ಶ್ರೇಯಾಂಕಾ ಪಾಟೀಲ್. ಶ್ರೇಯಾಂಕಾ ಪಾಟೀಲ್ ಆರ್ಸಿಬಿ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ್ದಾರೆ. ಕೊಹ್ಲಿ ಭೇಟಿ ಮಾಡಿದ ಬಳಿಕ ಈ ಬಗ್ಗೆ ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: IPLಗೂ ಮುನ್ನ ದೇವರ ಮೊರೆ ಹೋದ ಕೆ.ಎಲ್ ರಾಹುಲ್ – IPLನಲ್ಲಿ ಭಕ್ತನ ಕೈಹಿಡಿತಾನಾ ಮಹಾಕಾಳೇಶ್ವರ..?
ಹೌದು, ಕೊಹ್ಲಿ ನನ್ನ ರೋಲ್ ಮಾಡೆಲ್ ಎಂದು ಈ ಹಿಂದೆಯೇ ಶ್ರೇಯಾಂಕಾ ಹೇಳಿಕೊಂಡಿದ್ದರು. ಅವರ ಭೇಟಿಗಾಗಿ ಕಾಯುತ್ತಿದ್ದ ಕನ್ನಡತಿ, ಕೊನೆಗೂ ಚಿನ್ನಸ್ವಾಮಿ ಮೈದಾನದಲ್ಲಿ ತಮ್ಮ ಕನಸು ನನಸಾಗಿಸಿದ್ದಾರೆ. ತಮ್ಮ ಜೀವನದ ವಿಶೇಷ ಕ್ಷಣದ ಬಗ್ಗೆ ಖುದ್ದು ಶ್ರೇಯಾಂಕಾ ಸೋಷಿಯಲ್ ಮೀಡಿಯಾ ಪೋಸ್ಟ್ನಲ್ಲಿ ಹೇಳಿಕೊಂಡಿದ್ದಾರೆ. ಕೊಹ್ಲಿ ನಗು ನನಗೆ ಇಷ್ಟ. ಇವರನ್ನು ಭೇಟಿಯಾಗಿದ್ದು ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಕ್ರಿಕೆಟ್ ನೋಡುತ್ತಾ ಬೆಳೆದವಳು ನಾನು. ಅವರಂತೆ ಆಗಬೇಕೆಂದು ಕನಸು ಕಾಣುತ್ತಾ ಕ್ರಿಕೆಟ್ ಆಡುತ್ತಿದ್ದೇನೆ. ಕೊನೆಗೂ ನನ್ನ ಸ್ಫೂರ್ತಿಯನ್ನು ಭೇಟಿ ಮಾಡಿದ್ದೇನೆ. ಇಂದು ನನ್ನ ಅತ್ಯಂತ ಸಂತಸದ ದಿನ. ಹಾಯ್ ಶ್ರೇಯಾಂಕಾ, ಚೆನ್ನಾಗಿ ಬೌಲಿಂಗ್ ಮಾಡಿದ್ದೀಯಾ ಎಂದು ನನಗೆ ವಿರಾಟ್ ಹೇಳಿದ್ರು ಎಂದು ಶ್ರೇಯಾಂಕಾ ಟ್ವೀಟ್ ಮಾಡಿದ್ದಾರೆ.