ತ್ರಿವ್ಯಾ, ತ್ರಿಮೋಕ್ಷಿ.. ಲವ್ ಸ್ಟೇಟಸ್ ಏನು? – ದೊಡ್ಮನೆಯಲ್ಲಿ ಟ್ರಯಾಂಗಲ್ ಲವ್
ತ್ರಿವಿಕ್ರಮ್ ಪ್ರೀತಿ ಯಾರಿಗೆ?

ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿ ಜೋರಾಗೇ ಸೌಂಡ್ ಮಾಡ್ತಾ ಇದೆ.. ದುಷ್ಮನ್ ಗಳು ಆಗಿದ್ದವರು ಫ್ರೆಂಡ್ಸ್ ಆಗ್ತಿದ್ದಾರೆ.. ಫ್ರೆಂಡ್ಸ್ ಆಗಿದ್ದವರು ಪರಸ್ಪರ ಕಿತ್ತಾಡ್ತಾ ಇದ್ದಾರೆ.. ಇವೆಲ್ಲದ್ರ ಮಧ್ಯೆ ದೊಡ್ಮನೆಯಲ್ಲಿ ಮತ್ತೊಂದು ಟ್ರಯಾಂಗಲ್ ಲವ್ ಸ್ಟೋರಿ ಶುರುವಾಯ್ತಾ ಅನ್ನೋ ಅನುಮಾನ ಮೂಡಿದೆ.. ವೀಕ್ಷಕರು ಕೂಡ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಮಾಡ್ತಾ ಇದ್ದಾರೆ.. ಅಷ್ಟಕ್ಕೂ ಆ ಟ್ರಯಾಂಗಲ್ ಸ್ಟೋರಿ ಬೇರೆ ಯಾರದ್ದೂ ಅಲ್ಲ.. ಭವ್ಯ, ತ್ರಿವಿಕ್ರಮ್, ಮೋಕ್ಷಿತಾ.. ದೊಡ್ಮನೆಯಲ್ಲಿ ಫೈಟ್ ಗಳ ಮಧ್ಯೆಯೂ ಲವ್ ಹುಟ್ಟಿದ್ದು ಹೇಗೆ? ಹಾಗಾದ್ರೆ ಇಲ್ಲಿ ಕ್ರಶ್ ಯಾರು? ಯಾರ ಮೇಲೆ ಲವ್? ವೀಕ್ಷಕರು ಹೇಳ್ತಿರೋದು ಏನು? ಇವೆಲ್ಲದ್ರ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಫಡ್ನವಿಸ್ ಪ್ಲ್ಯಾನ್.. BJPಗೆ ಸಿಎಂ ಪಟ್ಟ! – ಶಿಂಧೆ ‘ಪವಾರ್’ ಸೈಲೆಂಟ್ ಆಗಿದ್ದೇಕೆ?
ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್, ಜಗಳ ಎಷ್ಟು ಕಾಮನೋ, ಲವ್ ಕ್ರಶ್ ಕೂಡ ಈಗೀಗ ಕಾಮನ್ ಆಗಿದೆ. ಈ ಸೀಸನ್ ನಲ್ಲಿ ಕೆಲ ಸ್ಪರ್ಧಿಗಳು ಲವ್ ಮೂಲಕ ಜೋರಾಗಿ ಸದ್ದು ಮಾಡ್ತಾ ಇದ್ದಾರೆ. ಅದ್ರಲ್ಲೂ ಟ್ರಯಾಂಗಲ್ ಲವ್ ಸ್ಟೋರಿಗಳು ಈಗ ಭಾರಿ ಕುತೂಹಲ ಮೂಡಿಸಿದೆ.. ಹೌದು, ಆರಂಭದಲ್ಲಿ ಧರ್ಮಕೀರ್ತಿ ರಾಜ್ ಹಾಗೂ ಐಶ್ವರ್ಯ ಮಧ್ಯೆ something something ಇದೆ ಅಂತಾ ಹೇಳ್ತಾ ಇದ್ರು.. ಅದಾದ್ಮೇಲೆ ಅನುಷಾ ಹಾಗೂ ಧರ್ಮ ಲವ್ ಬ್ರೇಕ್ ಅಪ್ ಚರ್ಚೆ ಆಗಿತ್ತು. ಹೀಗಾಗಿ ಐಶ್ವರ್ಯ ಧರ್ಮನಿಂದ ಗ್ಯಾಪ್ ತೆಗೆದುಕೊಂಡಿದ್ರು.. ಈ ಮಧ್ಯೆ ಐಶ್ವರ್ಯ ಶಿಶಿರ್ ಜೊತೆ ತುಂಬಾ ಕ್ಲೋಸ್ ಆಗಿದ್ದಾರೆ.. ಇದೀಗ ಮತ್ತೊಂದು ಲವ್ ಸ್ಟೋರಿ ಶುರು ಆಯ್ತಾ ಅನ್ನೋ ಪ್ರಶ್ನೆ ವೀಕ್ಷಕರು ಕೇಳ್ತಾ ಇದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲೂ ಭವ್ಯ ಗೌಡ ತ್ರಿವಿಕ್ರಮ್ ಗೆ ತುಂಬಾ ಕ್ಲೋಸ್ ಆಗೋದಿಕ್ಕೆ ಟ್ರೈ ಮಾಡ್ತಾ ಇದ್ರು.. ಟಾಸ್ಕ್ ನಲ್ಲೂ ತ್ರಿವಿಕ್ರಮ್ ಜೊತೆ ಆಡಲು ಭಯಸ್ತಾ ಇದ್ರು.. ತ್ರಿವಿಕ್ರಮ್ ಭವ್ಯಗೆ ತುಂಬಾ ಕ್ಲೋಸ್ ಏನೋ ಆದ್ರೂ.. ಆದ್ರೆ ತ್ರಿವಿಕ್ರಮ್ ಮನಸ್ಸು ಮಾತ್ರ ಬೇರೆ ಕಡೆ ವಾಲ್ತಾ ಇದೆ. ವಿಕ್ರಂ ಮೋಕ್ಷಿತಾ ಹಿಂದೆ ಸುತ್ತಾಡಲು ಶುರು ಮಾಡಿದ್ದಾರೆ. ಹೌದು, ಮೋಕ್ಷಿತಾ ತ್ರಿವಿಕ್ರಮ್ ಅನ್ನ ಎಷ್ಟೇ ದೂರ ಮಾಡಲು ಪ್ರಯತ್ನಿಸಿದ್ರು ತ್ರಿವಿಕ್ರಮ್ ಮಾತ್ರ ಹತ್ತಿರ ಆಗಲು ಪ್ರಯತ್ನಿಸ್ರಿದ್ದಾರೆ.. ಮೋಕ್ಷಿತಾ ನಾಮಿನೇಟ್ ಮಾಡಲಿ, ಬಾಯಿಗೆ ಬಂದಂತೆ ಬೈಲಿ.. ಇದಕ್ಕೆಲ್ಲ ಒಂಚೂರು ತಲೆಕೆಡಿಸಿಕೊಳ್ಳದೇ ತ್ರಿವಿಕ್ರಮ್ ಮೋಕ್ಷಿನ ಕಣ್ ಕಣ್ ಸಲಿಗೆಯಲ್ಲೇ ನೋಡ್ತಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲೂ ಈ ಬಗ್ಗೆ ಫುಲ್ ಚರ್ಚೆಯಾಗ್ತಾ ಇದೆ.
ಹೌದು, ಮೋಕ್ಷಿತಾ ಎಲ್ಲಿ ಹೋದ್ರೂ ತ್ರಿವಿಕ್ರಮ್ ಹಿಂದೇನೇ ಇರ್ತಾರೆ.. ಏನ್ ಬೈದ್ರೂ ತ್ರಿವಿಕ್ರಮ್ ರಿಯಾಕ್ಟ್ ಮಾಡೋದೇ ಇಲ್ಲ.. ಮೋಕ್ಷಿತಾರನ್ನೇ ವಹಿಸಿಕೊಂಡು ಮಾತಾಡ್ತಾ ಇದ್ದಾರೆ.. ಮೋಕ್ಷಿತಾ ಜೊತೆಗೆ ಆದಷ್ಟು ಪ್ಯಾಚಪ್ ಮಾಡಿಕೊಳ್ಳೋಕೆ ಟ್ರೈ ಮಾಡ್ತಾ ಇದ್ದಾರೆ.. ಇನ್ನು ವೀಕೆಂಡ್ ನಲ್ಲಿ ಸುದೀಪ್ ತ್ರಿವಿಕ್ರಮ್ ಬಳಿ ನೀವು ಯಾರ ಜೊತೆ ಆಟ ಆಡಲು ಇಷ್ಟ ಪಡ್ತೀರಾ ಅಂತಾ ಕೇಳಿದಾಗ ಮೋಕ್ಷಿತರನ್ನೇ ಆಯ್ಕೆ ಮಾಡಿದ್ರು.. ಇವೆಲ್ಲವನ್ನ ನೋಡಿದ್ರೆ ಏನೋ ಇದೆ ಅನ್ನೋದು ಪಕ್ಕಾ ಆಗುತ್ತೆ.. ಆದ್ರೆ ತ್ರಿವಿಕ್ರಮ್ ಮೋಕ್ಷಿತಾ ಕಡೆ ವಾಲ್ತಾ ಇರೋದು ನೋಡಿ ಭವ್ಯ ಗೌಡಗೆ ನಿರಾಸೆ ಆಗಿದ್ದಂತೂ ಪಕ್ಕಾ.
ಇನ್ನು ಸೋಶಿಯಲ್ ಮೀಡಿಯಾದಲ್ಲೂ ತ್ರಿಮೋಕ್ಷಿ ಲವ್ ಫುಲ್ ಟ್ರೆಂಡಿಂಗ್ ನಲ್ಲಿದೆ. ತ್ರಿವಿಕ್ರಮ್ ಮೋಕ್ಷಿತಾ ಹಿಂದೆಯೇ ಸುತ್ತಾಡ್ತಿರೋದು.. ಒಟ್ಟಿಗೆ ಕುಳಿತು ಮಾತಾಡ್ತಾ ಇರೋದು.. ಡ್ಯಾನ್ಸ್ ಮಾಡ್ತಾ ಇರೋದು, ಜಗಳ ಆಡ್ತಾ ಇರೋದು, ಟಾಸ್ಕ್ ಪೋಟೋ, ವಿಡಿಯೋಸ್ ಇಟ್ಕೊಂಡು ರೀಲ್ಸ್ ಮಾಡ್ತಾ ಇದ್ದಾರೆ ಫ್ಯಾನ್ಸ್.. ಅಷ್ಟೇ ಅಲ್ಲ ಸಾಕಷ್ಟು ಲವ್ ಸಾಂಗ್ಸ್ ಎಡಿಟ್ ಮಾಡಿ ಹಾಕಿ ವಿಡಿಯೋ ಶೇರ್ ಮಾಡ್ತಾ ಇದ್ದಾರೆ.