ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್ ಸ್ಟೋರಿ
ಭವ್ಯ ಕಾಳು ಹಾಕಿದ್ದೇ ಬಂತಾ?

ಬಿಗ್ ಬಾಸ್ ಕನ್ನಡ ಸೀಸನ್ 11 ಈ ಬಾರಿ ಬರೀ ಜಗಳ, ಕೂಗಾಟ, ರಂಪಾಟದಿಂದೇ ಸದ್ದು ಮಾಡ್ತಾ ಇದೆ.. ಒಂದು ಟಾಸ್ಕ್ ಜಗಳವಿಲ್ಲದೇ ಮುಗಿಯೋದೇ ಇಲ್ಲ ಅಂದ್ರೆ ತಪ್ಪಾಗಲ್ಲ.. ಸದಾ ಸೈಲೆಂಟ್ ಆಗಿ ಇರ್ತಿದ್ದ ಮೋಕ್ಷಿತಾ ಅದ್ಯಾಕೋ ರೌದ್ರಾವತಾರ ತಾಳಿದ್ರು.. ಕಳೆದ ಎರಡು ವಾರದಿಂದ ತ್ರಿವಿಕ್ರಮ್ ವಿರುದ್ದ ಕೆಂಡ ಕಾರ್ತಾ ಇದ್ರು.. ಮಾತು ಮಾತಿಗೂ ಜಗಳ ಆಡ್ತಾ ಇದ್ರು.. ದೊಡ್ಮನೆಯಲ್ಲಿ ಇವರಿಬ್ಬರು ಕಿತ್ತಾಡ್ತಾ ಇದ್ರೆ.. ವೀಕ್ಷಕರು ಮಾತ್ರಾ ಕಿತ್ತಾಡ್ತಿರೋರ್ನೇ ಜೋಡಿ ಮಾಡಲು ಹೊರಟಿದ್ದಾರೆ.. ಮತ್ತೊಂದ್ಕಡೆ ಮೋಕ್ಷಿತಾನೂ ತ್ರಿವಿಕ್ರಮ್ ಜೊತೆ ಪ್ಯಾಚಪ್ ಮಾಡ್ಕೊಂಡಿದ್ದಾರೆ.. ಅಷ್ಟಕ್ಕೂ ಏನಿದು ಹೊಸ ಸಮಚಾರ.. ತ್ರಿಮೋಕ್ಷಿ ಲವ್ ಶುರುವಾಗಿದ್ದು ಎಲ್ಲಿಂದ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಸಿಎಂ ತಲುಪಲು EDಗೆ ಎರಡೇ ಹೆಜ್ಜೆ! – ಸರದಿಯಲ್ಲಿ ಮೊದಲು ಸಿಗೋದ್ಯಾರು?
ಬಿಗ್ ಬಾಸ್ ಕನ್ನಡ ಈ ಬಾರಿ ಸೌಂಡ್ ಮಾಡ್ತಿರೋದು ಬರೀ ಜಗಳದಿಂದಲೇ.. ಪ್ರತಿದಿನ ಜಗಳ, ಪ್ರತಿವಾರ ಯುದ್ಧವೇ ನಡೆಯುತ್ತೆ, ಅದರಲ್ಲೂ ಮೋಕ್ಷಿತಾ ಮತ್ತು ತ್ರಿವಿಕ್ರಮ್ ನಡುವೆ ಕಳೆದ ಎರಡು ವಾರ ಕಿಚ್ಚು ಹೊತ್ತಿಕೊಂಡಿತ್ತು.. ಮೋಕ್ಷಿತಾ ಪೈ 10 ವಾರ ಬಿಗ್ ಬಾಸ್ ನಲ್ಲಿ ಇರುವ ಬಗ್ಗೆ ತ್ರಿವಿಕ್ರಮ್ ಗೆ ಸವಾಲು ಎಸೆದು, ನೀನು ಗೋಮುಖ ವ್ಯಾಘ್ರ ಅಂತ ಹೇಳಿದ್ರು. ಅದೇ ಜಗಳ, ಮುನಿಸು ಇಬ್ಬರ ನಡುವೆ ಪದೇ ಪದೆ ಆಗ್ತಾ ಇತ್ತು.. ಮತ್ತೊಂದು ವಾರದಲ್ಲಿ ಅವರ ಜಗಳಕ್ಕೆ ಬೆಂಕಿ ಹಚ್ಚೋ ಕೆಲಸ ಮಾಡಿದ್ದು ಬಿಗ್ ಬಾಸ್.
ಹೌದು, ಬಿಗ್ ಬಾಸ್ ಕಳೆದ ವಾರ ಯಾರು ಯಾರ ಬಗ್ಗೆ ಹಿಂದಿನಿಂದ ಏನೆಲ್ಲಾ ಹೇಳಿದ್ದಾರೆ ಎನ್ನುವ ಬಗ್ಗೆ ವಿಡಿಯೋ ಕ್ಲಿಪ್ ಪ್ಲೇ ಮಾಡಿದ್ರು. ಅದರಲ್ಲಿ ತ್ರಿವಿಕ್ರಮ್ ಉಳಿದವರ ಬಳಿ ಒಂದು ಹಕ್ಕಿ ಜೊತೆ ಇನ್ನೊಂದು ಹಕ್ಕಿ ಫ್ರೀ ಅಂದಿದ್ದಾರೆ. ಇದು ಗೌತಮಿ, ಮೋಕ್ಷಿತಾ ಮತ್ತು ಮಂಜು ಬಗ್ಗೆ ಹೇಳಿರುವ ಮಾತುಗಳಾಗಿತ್ತು. ಇದನ್ನ ಕೇಳಿ ಮೋಕ್ಷಿತಾ ತ್ರಿವಿಕ್ರಂ ಮೇಲೆ ಸಿಕ್ಕಾಪಟ್ಟೆ ಕಿಡಿ ಕಾರಿದ್ರು.
ಅಕ್ಕ ತಂಗಿಯರ ಜೊತೆ ಬೆಳೆದೋರು ಹಕ್ಕಿ ಅಂತ ಮಾತಾಡ್ತಾರ ಯಾರಾದ್ರೂ? ಇದು ಅವರ ತನ ಏನು ಅನ್ನೋದನ್ನು ತೋರಿಸುತ್ತೆ ಎಂದಿದ್ದಾರೆ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ.. ಇದು ಅದೇ ಆಗಿದ್ದು ಅಂತಾನೂ ಹೇಳಿದ್ರು ಮೋಕ್ಷಿತಾ. ಅಷ್ಟೇ ಅಲ್ಲ ನಾಮಿನೇಶನ್ ಪ್ರಕ್ರಿಯೆಯಲ್ಲೂ ಸಹ ತ್ರಿವಿಕ್ರಮ್ ಹೆಸರನ್ನು ತೆಗೆದುಕೊಂಡಿದ್ರು..
ದೊಡ್ಮನೆಯಲ್ಲಿ ಇಷ್ಟೆಲ್ಲಾ ಆಗೋವಾಗ ಅದನ್ನ ನೋಡ್ತಿರೋ ವೀಕ್ಷಕರು ಮಾತ್ರ ಇವರಿಬ್ಬರನ್ನು ಜೋಡಿ ಮಾಡೋದಕ್ಕೆ ಹೊರಟಿದ್ದಾರೆ. ಅವರಿಬ್ಬರು ಯಾವಾಗ ಜೋಡಿಯಾಗ್ತಾರೆ ಅಂತ ನೋಡೋದಕ್ಕೆ ಕಾಯ್ತಿದ್ದಾರೆ. ಆದ್ರೆ ಇಬ್ಬರ ಮಧ್ಯೆ ದ್ವೇಷ ಮರೆತು ಪ್ರೀತಿ ಯಾವಾಗ ಬೆಳೆಯುತ್ತೋ ಗೊತ್ತಿಲ್ಲ.
ಬಿಗ್ ಬಾಸ್ ಮನೆ ಅಂದಮೇಲೆ ಅಲ್ಲಿ ಜೋಡಿಯಾಗೋದು ಸಾಮಾನ್ಯ. ಅಲ್ಲಿದ್ದವರನ್ನು ಜೋಡಿ ಮಾಡಿ, ಫ್ಯಾನ್ಸ್ ಗಳು ಫ್ಯಾನ್ ಪೇಜ್ ಕ್ರಿಯೇಟ್ ಮಾಡೋದು ಸಾಮಾನ್ಯ. ಅದ್ರೆ ದೊಡ್ಮನೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡ್ತಿದ್ದ ತ್ರಿವಿಕ್ರಮ್ ಮತ್ತು ಮೋಕ್ಷಿತಾ ಪೈ ಜೋಡಿಯಾಗ್ಬೇಕು ಅಂತ ಮಾತ್ರ ಜನ ಯಾಕೆ ಬಯಸ್ತಿದ್ದಾರೆ ಗೊತ್ತಿಲ್ಲ.
ವಿಕ್ಕಿ ಮೋಕ್ಷಿ ಜೋಡಿಯಾಗಬೇಕು ಅಂತ ಕನಸು ಕಾಣ್ತಾ ಇದ್ದೇವೆ, ಆ ಕನಸು ಯಾವಾಗ ನನಸಾಗುತ್ತೋ.. ವಿಕ್ಕಿಗೆ ಮೋಕ್ಷಿತಾ ಮೇಲಿರುವ ಆ ಸಾಫ್ಟ್ ಕಾರ್ನರ್ ನೋಡೊದಕ್ಕೆ ಚೆಂದ.. ತ್ರಿವಿಕ್ರಮ್ ಮತ್ತು ಮೋಕ್ಷಿತಾರನ್ನು ಜೋಡಿ ಟಾಸ್ಕ್ ನಲ್ಲಿ ಒಂದು ಮಾಡಿ.. ಅವರಿಬ್ಬರು ಆನ್ ಸ್ಕ್ರೀನ್ ನಲ್ಲಿ ಜೊತೆಯಾಗಿದ್ರೇನೆ ನೋಡೋದಕ್ಕೆ ಚೆಂದ ಅಂತಾನೂ ಹೇಳಿದ್ದಾರೆ. ಮತ್ತೆ ಕೆಲವರು ಭವ್ಯ ತ್ರಿವಿಕ್ರಮ್ ಗೆ ಕಾಳು ಹಾಕಿದ್ದೇ ಬಂತಾ? ಭವ್ಯ ಕತೆ ಏನು ಅಂತಾ ಕಾಮೆಂಟ್ ಮಾಡ್ತಾ ಇದ್ದಾರೆ..
ಇದೀಗ ಇಷ್ಟು ದಿನ ದುಷ್ಮನ್ ಗಳಾಗಿದ್ದ ಮೋಕ್ಷಿತಾ ಹಾಗೂ ತ್ರಿವಿಕ್ರಮ್ ಮುಂದೆ ಎಂದೂ ಒಳ್ಳೆ ದೋಸ್ತ್ ಆಗ್ತಾರೆ ಅನ್ನುವ ನಂಬಿಕೆನೇ ಇರಲಿಲ್ಲ. ಆದರೆ, ಈಗೀನ ಬೆಳವಣಿಗೆ ನೋಡಿದ್ರೆ, ತ್ರಿವಿಕ್ರಮ್ ಹಾಗೂ ಮೋಕ್ಷಿತಾ ನಡುವೆ ಒಳ್ಳೆ ಸ್ನೇಹ ಆಗುವ ಲಕ್ಷಣಗಳು ಕಾಣಿಸುತ್ತಿವೆ. ತ್ರಿವಿಕ್ರಮ್ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ. ಮೋಕ್ಷಿತಾ ಅದನ್ನ ಕೇಳಿಸಿಕೊಂಡಿದ್ದಾರೆ.
ತ್ರಿವಿಕ್ರಮ್ ನೀವು ಎಂತಹ ಮನುಷ್ಯ ಅನ್ನೋದೇ ಅರ್ಥ ಆಗುತ್ತಿಲ್ಲ. ಒಳ್ಳೆಯವರಾ? ಕೆಟ್ಟವರಾ? ಅನ್ನೋದೇ ಗೊತ್ತಾಗ್ತಿಲ್ಲ ಅಂತಾ ಮೋಕ್ಷಿತಾ ಹೇಳಿದ್ದಾರೆ. ಆಗ ತ್ರಿವಿಕ್ರಮ್ ನಾನು ಯಾವುದನ್ನೂ ಎಕ್ಸಪ್ರೆಸ್ ಮಾಡೋದಿಲ್ಲ. ಮತ್ಯಾವುದನ್ನೂ ಕ್ಯಾರಿ ಮಾಡೋದಿಲ್ಲ ಅಂತಲೇ ತಮ್ಮ ಬಗ್ಗೆ ತಾವೇ ಹೇಳಿಕೊಂಡಿದ್ದಾರೆ. ಒಟ್ಟಾರೆ, ಸದ್ಯ ತ್ರಿವಿಕ್ರಮ್ ಮತ್ತು ಮೋಕ್ಷಿತಾ ನಡೆ ಇಂಟ್ರಸ್ಟಿಂಗ್ ಆಗಿಯೇ ಕಾಣಿಸುತ್ತಿದೆ ಹೇಳಬಹುದು. ಮುಂದೆ ತ್ರಿವಿಕ್ರಮ್ ಹಾಗೂ ಮೋಕ್ಷಿತಾ ಒಳ್ಳೆ ಫ್ರೆಂಡ್ಸ್ ಆಗ್ತಾರಾ ಅಂತಾ ಕಾದು ನೋಡ್ಬೇಕು.