ಧಿಮಾಕು ತೋರಿದ ಮೋಕ್ಷಿತಾಗೆ ಭಾರಿ ಮುಖಭಂಗ – ಈ ವಾರ ಗೌತಮಿ ಕ್ಯಾಪ್ಟನ್ QUEEN!
ಬಿಗ್ ಬಾಸ್ ಕನ್ನಡ ಸೀಸನ್ 11 ಈಗ ಭಾರಿ ಕುತೂಹಲ ಮೂಡಿಸಿದೆ.. ಆರಂಭದಲ್ಲಿ ದೋಸ್ತಿಗಳಾಗಿದ್ದವರೆಲ್ಲಾ ಈಗ ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದಾರೆ. ಇದೀಗ ಮೋಕ್ಷಿತಾ, ಗೌತಮಿ ಹಾಗೂ ಉಗ್ರಂ ಮಂಜು ಕಿತ್ತಾಟ ತಾರಕ್ಕೇರಿದೆ.. ಗೌತಮಿ ಮೇಲೆ ಸದಾ ಕೆಂಡಕಾರುತ್ತಿದ್ದ ಮೋಕ್ಷಿತಾಗೆ ಈಗ ಭಾರಿ ಮುಖಭಂಗ ಆಗಿದೆ.
ಇದನ್ನೂ ಓದಿ: ಕನ್ನಡ ದ್ರೋಹಿ ಆದ್ರಾ ರಿಷಭ್? – ‘ಶಿವಾಜಿ’ ಸಿನಿಮಾ ಒಪ್ಪಿದ್ದೇ ತಪ್ಪಾ?
ಗೌತಮಿ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಆರಂಭದಲ್ಲಿ ತುಂಬಾ ಕ್ಲೋಸ್ ಆಗಿದ್ರು.. ಅದಾದ್ಮೇಲೆ ಮೋಕ್ಷಿತಾ ಫ್ರೆಂಡ್ಶಿಪ್ ಎಂಡ್ ಮಾಡಿ ಅವರ ಗ್ರೂಪ್ ನಿಂದ ಹೊರ ಬಂದಿದ್ರು.. ಫ್ರೆಂಡ್ ಶಿಪ್ ಎಂಡ್ ಆಗಿ ಹಲವು ದಿನಗಳೇ ಕಳೆದ್ರು, ಗೌತಮಿ, ಮಂಜು ಜೊತೆಗಿನ ಕಿತ್ತಾಟದಿಂದ ಇನ್ನೂ ಹೊರ ಬಾರದ ಮೋಕ್ಷಿತಾ, ಆಟದಲ್ಲಿ ತುಂಬಾ ಹಿಂದೆ ಬಿದ್ದಿದ್ದಾರೆ. ಇದೀಗ ಕ್ಯಾಪ್ಟನ್ಸಿ ವಿಚಾರದಲ್ಲಿ ಭಾರೀ ಮುಜುಗರ ಎದುರಿಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಈ ವಾರ ಬಿಗ್ಬಾಸ್ ನೀಡಿದ ಟಾಸ್ಕ್ನಲ್ಲಿ ಮೋಕ್ಷಿತಾ ಅವರಿದ್ದ ತಂಡವು ಹೆಚ್ಚು ಅಂಕಗಳನ್ನು ಗಳಿಸಿ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿತ್ತು. ಮುಂದಿನ ವಾರಕ್ಕೆ ನಾಯಕರಾಗಲು ಬಿಗ್ಬಾಸ್ ಟಾಸ್ಕ್ ನೀಡುವ ಮೊದಲು ರೂಲ್ಸ್ ಹೇಳಿದ್ದರು. ಅದೆನಂದರೆ, ಕ್ಯಾಪ್ಟನ್ಸಿ ಟಾಸ್ಕ್ ಸ್ಪರ್ಧಿಗಳು ಎದುರಾಳಿ ತಂಡದ ಸದಸ್ಯರ ಸಹಾಯ ಪಡೆದು ಟಾಸ್ಕ್ ಆಡಬೇಕು. ಸ್ಪರ್ಧಿಗಳು ಇತರೆ ಸದಸ್ಯರನ್ನು ಮನವೊಲಿಸುವ ಮೂಲಕ ಅವರ ಸಹಾಯ ಪಡೆದು ಕ್ಯಾಪ್ಟನ್ ರೇಸ್ಗೆ ಇಳಿಯಬೇಕು ಎಂದಿದ್ದರು. ಅದರಂತೆಯೇ, ಉಳಿದ ಸ್ಪರ್ಧಿಗಳು ತಮಗೆ ಬೇಕಾದ ಸದಸ್ಯರನ್ನು ಆಯ್ಕೆ ಮಾಡಿಕೊಳ್ತಾರೆ. ಆಗ ಮೋಕ್ಷಿತಾ, ಗೌತಮಿ ಜಾಧವ್ ಅವರನ್ನು ಮನವೊಲಿಸುವ ಸಂದಿಗ್ಧತೆ ಬರುತ್ತದೆ.
ಅದಕ್ಕೆ ಮೋಕ್ಷಿತಾ ಒಪ್ಪುವುದಿಲ್ಲ. ನನಗೆ ಆತ್ಮಗೌರವ ಮುಖ್ಯ. ನಾನು ಕ್ಯಾಪ್ಟನ್ ಆಗಲು ಅವಳ (ಗೌತಮಿ) ಸಹಾಯ ಪಡೆಯುವ ಅಗತ್ಯತೆ ನನಗೆ ಇಲ್ಲ. ಅಂತಹ ಸಂದರ್ಭ ಬಂದರೆ ನಾನು ಕ್ಯಾಪ್ಟನ್ಸಿ ರೇಸ್ನಿಂದ ಹೊರ ಇರ್ತೇನೆ. ಬೇಕಿದ್ದರೆ ಬಿಗ್ಬಾಸ್ ಇವತ್ತೇ ನನ್ನನ್ನು ಮನೆಯಿಂದ ಕಳುಹಿಸಿದ್ದರೂ ಹೊರ ಹೋಗ್ತೇನೆ ಎಂದಿದ್ದರು. ಆದರೂ ಬಿಗ್ಬಾಸ್ ಮೋಕ್ಷಿತಾಗೆ ಎಚ್ಚರಿಕೆಯನ್ನು ನೀಡಿ, ಕ್ಯಾಪ್ಟನ್ಸಿ ಟಾಸ್ಕ್ಗೆ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಿದ್ದರು. ಮೋಕ್ಷಿತಾ ತಮ್ಮ ಒಂಟಿ ಹಿಡಿತವನ್ನು ಬಿಡಲಿಲ್ಲ. ಪರಿಣಾಮ ಮೋಕ್ಷಿತಾ ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರ ಬೀಳಬೇಕಾಯಿತು.
ಮೋಕ್ಷಿತಾರ ನಿರ್ಧಾರದ ಫಲವಾಗಿ ಗೌತಮಿ ಜಾಧವ್ಗೆ ಬಂಗಾರದಂಥ ಅವಕಾಶ ಸಿಕ್ಕಿತ್ತು. ಇದನ್ನೂ ಎರಡೂ ಕೈಗಳಿಂದ ಬಾಚಿಕೊಂಡ ಗೌತಮಿ ಮುಂದಿನ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಮೋಕ್ಷಿತಾಗೆ ಕಪಾಳಮೋಕ್ಷ ಆದಂತೆ ಆಗಿದೆ. ಇನ್ನು, ಈ ಎಪಿಸೋಡ್ ಇಂದು ರಾತ್ರಿ ಪ್ರಸಾರ ಆಗಲಿದೆ. ಗೌತಮಿ ಅವರು ಕ್ಯಾಪ್ಟನ್ ಆಗಿ ನಾಯಕನ ರೂಮ್ಗೆ ಎಂಟ್ರಿ ನೀಡುವ ದೃಶ್ಯವನ್ನು ಪ್ರೊಮೋದಲ್ಲಿ ತೋರಿಸಲಾಗಿದೆ.