ಮೂರು ತಿಂಗಳು ದೂರ ಇದ್ದ ಅಕ್ಕನನ್ನ ಮರೆತ ತಮ್ಮ – ಬಿಕ್ಕಿ ಬಿಕ್ಕಿ ಅತ್ತ ಮೋಕ್ಷಿತಾ ಪೈ

ಬಿಗ್ ಬಾಸ್ ಕನ್ನಡ ಸೀಸನ್ 11, 100ನೇ ದಿನದತ್ತ ಕಾಲಿಡುತ್ತಿದೆ. ಗ್ಯಾಂಡ್ ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನ ಬಾಕಿ ಉಳಿಸಿದೆ. ನಿನ್ನೆಯ ಎಪಿಸೋಡ್‌ನಿಂದ ಫ್ಯಾಮಿಲಿ ರೌಂಡ್ ಶುರುವಾಗಿದೆ. ಸ್ಪರ್ಧಿಗಳ ಮನೆಯವರು ಬಿಗ್ ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಇಂದಿನ ಎಪಿಸೋಡ್ ನಲ್ಲಿ ಮೋಕ್ಷಿತಾ ಪೈ ಫಾಮಿಲಿ ದೊಡ್ಮನೆಗೆ ಬಂದಿದೆ. ಇದೀಗ ಅಕ್ಕ – ತಮ್ಮನ ಭಾಂದವ್ಯ ನೋಡಿ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ- ಅಫ್ಘಾನಿಸ್ತಾನ ಯುದ್ಧ – ಗಡಿಯಲ್ಲಿ ನೆತ್ತರು! ಪಾಕ್ ಇಬ್ಭಾಗ?
ಬಿಗ್ ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭವಾಗಿದೆ. ಮೆನೆಯಲ್ಲಿ ಟಫ್ ಟಾಸ್ಕ್ಗಳನ್ನು ಕೊಡಲಾಗುತ್ತಿದೆ. ಇದರ ಜೊತೆಗೆ ಸ್ಪರ್ಧಿಗಳ, ಕುಟುಂಬಸ್ಥರು ಬಿಗ್ಬಾಸ್ ಮನೆಗೆ ಬಂದು ಹೋಗುತ್ತಿದ್ದಾರೆ. ಹೊಸ ವರ್ಷದಂದೇ ಮೋಕ್ಷಿತಾ ಫ್ಯಾಮಿಲಿ ಬಂದಿದೆ. ತಂದೆ, ತಾಯಿ ಹಾಗೂ ಸಹೋದರನ ನೋಡಿ ಮೋಕ್ಷಿತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಸಹೋದರನನ್ನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಹಾಕಿದ್ದಾರೆ.
ಅಕ್ಕ ತಮ್ಮ ಒಂದಾಗೋ ಭಾವನಾತ್ಮಕ ಘಟಳಿಗೆಯಲ್ಲಿ ಇಡೀ ಮನೆ ಸದಸ್ಯರು ಕಣ್ಣೀರಿಟ್ಟಿದ್ದಾರೆ. ಸಹೋದರನನ್ನು ನೋಡಿದ ತಕ್ಷಣ ಮೋಕ್ಷಿತಾ, ಖುಷಿ ಬಂದಿದ್ದಾನೆಂದು ಅಳುತ್ತಲೇ ಓಡೋಡಿ ಬಂದರು. ಇಷ್ಟು ದಿನ ಬಿಟ್ಟು ಇದ್ದೆ. ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೆ. ನನ್ನನ್ನು ಮರೆತು ಹೋಗಿಬಿಟ್ಟಿದ್ದಾನೆ ಎಂದು ತಮ್ಮನ ತಬ್ಬಿಕೊಂಡು ಮೋಕ್ಷಿತಾ ಕಣ್ಣೀರು ಸುರಿಸಿದ್ದಾರೆ.
ಅಕ್ಕ-ತಮ್ಮನ ಬಾಂಧವ್ಯ ನೋಡಿ ತಂದೆ, ತಾಯಿ ಕೂಡ ಅತ್ತಿದ್ದಾರೆ. ಈ ಚಿಕ್ಕ ಕುಟುಂಬವನ್ನು ನೋಡಿದ ರಜತ್, ಹನುಮಂತು, ಮಂಜು, ಚೈತ್ರಾ, ಗೌತಮಿ, ತ್ರಿವಿಕ್ರಮ್, ಭವ್ಯ ಎಲ್ಲರೂ ಫುಲ್ ಸೈಲೆಂಟ್ ಆಗಿದ್ದರು. ಮೋಕ್ಷಿತಾ ಅಳುವುದನ್ನು ನೋಡಿ ತಡೆಯಲಾಗದೇ ಗೌತಮಿ ಕೂಡ ಅತ್ತಿದ್ದಾರೆ. ಅಕ್ಕ-ತಮ್ಮನ ಭಾವನಾತ್ಮಕ ಕ್ಷಣಗಳಿಗೆ ಇಡೀ ಮನೆಯೇ ದುಃಖದಲ್ಲಿ ಮುಳುಗಿದೆ.