ವಿಶ್ವಕಪ್ ನಲ್ಲಿ DSP ಚಾರ್ಜ್ – ಲಕ್ಕಿ ಸ್ಟಾರ್ ಮೊಹಮ್ಮದ್ ಸಿರಾಜ್

ಅದೃಷ್ಟ ಅನ್ನೋದು ಯಾರಿಗೆ ಯಾವಾಗ್ ಬೇಕಾದ್ರೂ ಕೈಹಿಡೀಬಹುದು. ಈಗ ಟೀಂ ಇಂಡಿಯಾನೇ ತಗೊಳ್ಳಿ. ಸಂಜು ಸ್ಯಾಮ್ಸನ್ ಫಸ್ಟ್ ಪ್ರಿಯಾರಿಟಿ ವಿಕೆಟ್ ಕೀಪರ್ ಬ್ಯಾಟರ್ ಆದ್ರೂ ಲಾಸ್ಟ್ ಮೂಮೆಂಟ್ನಲ್ಲಿ ಇಶಾನ್ ಕಿಶನ್ಗೆ ಲಕ್ ಖುಲಾಯಿಸಿತು. ಟೀಮ್ನಲ್ಲೇ ಇಲ್ಲದ ಮೊಹಮ್ಮದ್ ಸಿರಾಜ್ ಫಸ್ಟ್ ಮ್ಯಾಚಲ್ಲಿ ಗೇಮ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.
ಇದನ್ನೂ ಓದಿ : ಕ್ವಾಂಟರ್ ಫೈನಲ್‌ನಲ್ಲಿ ಗೆದ್ದು ಸೆಮಿ ಫೈನಲ್‌ಗೆ ಕಾಲಿಟ್ಟ ಕರ್ನಾಟಕ
ಅಮೆರಿಕ ವಿರುದ್ಧ ಬ್ಯಾಟಿಂಗ್ನಲ್ಲಿ ಕಂಪ್ಲೀಟ್ ಥಂಡಾ ಹೊಡೆದಿದ್ದ ಟೀಂ ಇಂಡಿಯಾ ಸೂರ್ಯಕುಮಾರ್ ಯಾದವ್ ಇನ್ನಿಂಗ್ಸ್ನಿಂದಾಗಿ ಹಾಗೇ ಬೌಲಿಂಗ್ ಎಫರ್ಟ್ನಿಂದಾಗಿ ಮ್ಯಾಚ್ ವಿನ್ ಆದ್ರು. ಈ ಪಂದ್ಯದಲ್ಲಿ ಸೂರ್ಯನ ಪರ್ಫಾಮೆನ್ಸ್ ಹೇಗೆ ಹೈಲೆಟ್ ಆಯ್ತೋ ಮೊಹಮ್ಮದ್ ಸಿರಾಜ್ ಸ್ಪೆಲ್ ಕೂಡ ಇಂಪಾರ್ಟೆಂಟ್ ಆಯ್ತು. ಕಳೆದ ಒಂದೂವರೆ ವರ್ಷದಿಂದ ಟೀಂ ಇಂಡಿಯಾ ಟಿ-20ಐ ಟೀಮ್ನಿಂದ ಹೊರಗಿದ್ದ ಸಿರಾಜ್ ಜಸ್ಟ್ 24 ಹವರ್ಸ್ನಲ್ಲೇ ಲಕ್ಕಿ ಮ್ಯಾನ್ ಆಗಿದ್ದಾರೆ.
ಸ್ಪೇನ್ ಗೆ ಹೊರಟಿದ್ದ ಸಿರಾಜ್ ಈಗ ಬೌಲಿಂಗ್ ಆಪತ್ಬಾಂಧವ!
ಶುಕ್ರವಾರದವರೆಗೆ ಟೀಂ ಇಂಡಿಯಾದಲ್ಲಿ ಮೊಹಮ್ಮದ್ ಸಿರಾಜ್ ಹೆಸ್ರೇ ಇರಲಿಲ್ಲ. ಹೀಗಾಗಿ ಸ್ಪೇನ್‌ಗೆ ಹೊರಡಲು ಸಜ್ಜಾಗಿದ್ದ ಸಿರಾಜ್ಗೆ ಸೂರ್ಯಕುಮಾರ್ ಯಾದವ್ ಕಡೆಯಿಂದ ಫೋನ್ ಬಂದಿದೆ. ಸಂಜೆ ಅಷ್ಟ್ರಲ್ಲಿ ಹರ್ಷಿತ್ ರಾಣಾ ರೂಲ್ಡ್ ಔಟ್ ಆಗಿ ಟೀಂ ಸೇರಿದ ಸಿರಾಜ್ ನೆಕ್ಸ್ಟ್ ಡೇನೇ ಫೀಲ್ಡಿಗಿಳಿದಿದ್ರು. ಜಸ್ಪ್ರೀತ್ ಬುಮ್ರಾ ಜ್ವರದಿಂದಾಗಿ ರೆಸ್ಟ್ ಮಾಡಿದ ಕಾರಣಕ್ಕೆ ಸಿರಾಜ್ ಪ್ಲೇಯಿಂಗ್ 11 ಸೇರಿದ್ರು. ಸಿಕ್ಕ ಅವಕಾಶವನ್ನ ಬಳಸಿಕೊಂಡ ಸಿರಾಜ್ ನೀವು ನನ್ನ ಟಿ-20ಐ ತಂಡದಿಂದ ಹೊರಗಿಟ್ಟಿದ್ದೇ ತಪ್ಪು ಅನ್ನೋ ಥರ ಪರ್ಫಾಮ್ ಮಾಡಿದ್ರು. ಅಮೆರಿಕದ ಇಬ್ಬರು ಓಪನರ್ಗಳಿಗೆ ಆರಂಭದಲ್ಲೇ ಪೆವಿಲಿಯನ್ ದಾರಿ ತೋರಿಸಿದ್ರು. ಹಾಗೇ ಇನ್ನಿಂಗ್ಸ್ನ ಕೊನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದ್ರು.
ಒಂದೂವರೆ ವರ್ಷದಿಂದ ಟಿ-20 ತಂಡದಲ್ಲಿ ಆಡಿರಲಿಲ್ಲ ಸಿರಾಜ್!
ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಕಂಟಿನ್ಯುಯಸ್ ಆಗಿ ಚಾನ್ಸ್ ಪಡೆಯೋ ಸಿರಾಜ್ರನ್ನು ಟಿ-20ಐ ಫಾರ್ಮೆಟ್ನಿಂದ ದೂರನೇ ಇಡಲಾಗಿತ್ತು. ಟೀಮ್ ಇಂಡಿಯಾ ಪರ 30 ಜುಲೈ 2024ರಲ್ಲಿ ಕೊನೆಯ ಟಿ20 ಪಂದ್ಯವನ್ನು ಆಡಿದ್ದರು. ಅಲ್ಲಿಂದ ಟಿ20 ಫಾರ್ಮೆಟ್‌ಗೆ ಕಂ ಬ್ಯಾಕ್ ಮಾಡಲು ಸಾಧ್ಯನೇ ಆಗಿರಲಿಲ್ಲ. ಕಳೆದ ಬಾರಿ ಟಿ-20 ವಿಶ್ವಕಪ್ ತಂಡದಲ್ಲಿದ್ರೂ ಪ್ಲೇಯಿಂಗ್ 11ನಲ್ಲಿ ಆಡಿರಲಿಲ್ಲ. ಆದ್ರೆ ಆ ಕನಸಿಗೆ ಟಿ20 ವಿಶ್ವಕಪ್ ಈಗ ಒಳ್ಳೇ ಅವಕಾಶ ಕೊಟ್ಟಿದೆ. ಸಿಕ್ಕ ಅವಕಾಶವನ್ನು ಚೆನ್ನಾಗೇ ಬಳಸಿಕೊಳ್ತಿರೋ ಸಿರಾಜ್ 557 ದಿನಗಳ ಬಳಿಕ ಟೀಮ್ ಇಂಡಿಯಾದ ಪರ ಮೊದಲ ಟಿ20 ಪಂದ್ಯವನ್ನು ಆಡಿದ್ದಾರೆ. ಗೇಮ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಸಿರಾಜ್ ಇದೊಂದು ಮ್ಯಾಜಿಕ್ ಎಂದಿದ್ದಾರೆ. ಫೆಬ್ರುವರಿ 15 ರಂದು ರಿಯಾಲ್ ಮ್ಯಾಡ್ರಿಡ್ ಪಂದ್ಯವನ್ನು ನೋಡಲು ಸ್ಪೇನ್‌ಗೆ ಹೋಗುತ್ತಿದ್ದೆ. ಬಳಿಕ ರಮ್ಜಾನ್ ಇದೆ. ಆದರೆ ದೇವರು ಬರೆದಿದ್ದೇ ಬೇರೆ. T20 ವಿಶ್ವಕಪ್‌ನ ಭಾರತ ತಂಡದ ಪ್ಲೇಯಿಂಗ್- 11 ನಲ್ಲಿ ಸ್ಥಾನ ಪಡೆಯುತ್ತೇನೆ ಎನ್ನುವ ಆಲೋಚನೆಯೇ ಇರಲಿಲ್ಲ. ಕಳೆದ ಒಂದು ವರ್ಷದಿಂದ ಭಾರತ ತಂಡದಲ್ಲಿ ಆಡಿದ ಆಟಗಾರರಿಗೆ ಮಾತ್ರ ಅವಕಾಶ ಇತ್ತು. ನಾನು ಪಂದ್ಯ ಆಡಿರೋದು ದೇವರ ಇಚ್ಛೆ ಎಂದಿದ್ದಾರೆ. ಒಟ್ನಲ್ಲಿ ಡಿಎಸ್ಪಿ ಸಿರಾಜ್ ಲಕ್ನಿಂದ ತಂಡಕ್ಕೆ ಬಂದ್ರೂ ಆನ್ಫೀಲ್ಡ್ನಲ್ಲಿ ತಮ್ಮ ಸಾಮರ್ಥ್ಯದಿಂದಲೇ ವಿಕೆಟ್ಗಳನ್ನ ಬೇಟೆಯಾಡಿದ್ದಾರೆ. ದೂರ ಇಟ್ಟವರಿಗೆಲ್ಲಾ ಚಾರ್ಜ್ ತಗೊಂಡಿದ್ದಾರೆ.

ನೋಡಿರಿ

