DSP ಸಿರಾಜ್‌ ಕೋಟಿ ಸಂಪತ್ತು.. ಇಷ್ಟೊಂದು ಹಣದ ಮೂಲ ಇದಾ? – ಬಡಹುಡುಗನ ಐಷಾರಾಮಿ ಜರ್ನಿ!

DSP ಸಿರಾಜ್‌ ಕೋಟಿ ಸಂಪತ್ತು.. ಇಷ್ಟೊಂದು ಹಣದ ಮೂಲ ಇದಾ? – ಬಡಹುಡುಗನ ಐಷಾರಾಮಿ ಜರ್ನಿ!

ಮೊಹಮ್ಮದ್‌ ಸಿರಾಜ್‌.. ಟೀಮ್‌ ಇಂಡಿಯಾದ ವೇಗದ ಬೌಲರ್..‌ ಇಂಡಿಯಾ Vs  ಇಂಗ್ಲೆಂಡ್‌ ನಡುವಿನ ಟೆಸ್ಟ್‌ ಸರಣಿಯಲ್ಲಿ ಸಿರಾಜ್‌ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ರು. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ 5 ಮ್ಯಾಚ್​ಗಳ ಮೂಲಕ 23 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದೀಗ ಸಿರಾಜ್‌ ಮೈದಾನದಲ್ಲಿ ಸೌಂಡ್‌ ಮಾಡ್ತಿದ್ದಂತೆ ಅವ್ರ ಇನ್‌ಕಮ್‌ ಕೂಡ ಹೆಚ್ಚಾಗ್ತಾನೇ ಇದೆ.. ಸ್ಲಮ್‌ನಲ್ಲಿ ಬೆಳೆದ ಆಟೋ ಡ್ರೈವರ್‌ ಮಗ ಈಗ ಕೋಟ್ಯಾಧಿಪತಿ ಆಗಿದ್ದಾರೆ.. ಅಷ್ಟಕ್ಕೂ ಮೊಹಮ್ಮದ್‌ ಸಿರಾಜ್‌ ಆದಾಯ ಎಷ್ಟು? ಸಣ್ಣ ವಯಸ್ಸಲ್ಲೇ ಕೋಟಿಗಳ ಅಧಿಪತಿ ಆಗಿದ್ಹೇಗೆ? ಕ್ರಿಕೆಟ್‌ ಮಾತ್ರವಲ್ಲದೇ ಸಿರಾಜ್‌ ಯಾವ್ಯಾವ ಮೂಲಗಳಿಂದ ಆದಾಯ ಗಳಿಸ್ತಾ ಇದ್ದಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬೆಂಚ್ ನಲ್ಲೇ ಬಂಧಿಯಾದ ಅಭಿಮನ್ಯು – ಡೆಬ್ಯೂ ಚಕ್ರವ್ಯೂಹ ಭೇದಿಸೋದೇ ಕಷ್ಟನಾ?

ಪ್ರತಿಭೆಯ ಜೊತೆ ಛಲ ಇದ್ರೆ ಹಣ ಮ್ಯಾಟರ್‌ ಆಗೋದಿಲ್ಲ ಅನ್ನೋದಿಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಮೊಹ್ಹಮ್ಮದ್‌ ಸಿರಾಜ್‌.. ತಂದೆ ಆಟೋ ಡ್ರೈವರ್..‌ ಮನೆಯಲ್ಲಿ ಬಡತನ.. ಸ್ಲಮ್‌ನಲ್ಲೇ ಜೀವನ.. ಸಿರಾಜ್‌ ಗುರಿ.. ಕ್ರಿಕೆಟ್‌ ಮೇಲೆ ಇರೋ ಹುಚ್ಚು ಪ್ರೀತಿಯ ಮುಂದೆ ಬಡತನ ಮ್ಯಾಟರ್‌ ಆಗಿಲ್ಲ.. ಹೈದ್ರಾಬಾದ್‌ನ ಗಲ್ಲಿಗಳಲ್ಲಿ ಆಟವಾಡ್ತಿದ್ದ ಸಿರಾಜ್‌ ಈಗ ಟೀಮ್‌ ಇಂಡಿಯಾದ ಸ್ಟಾರ್‌ ಬೌಲರ್‌ ಆಗಿದ್ದಾರೆ.. ಇಂಗ್ಲೆಂಡ್‌ ವಿರುದ್ಧ ಸರಣಿಯಲ್ಲಿ ಸಿರಾಜ್‌ ಪ್ರಮುಖ ಪಾತ್ರ ವಹಿಸಿದ್ರು.. ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿರುವ ಟೀಮ್‌ ಇಂಡಿಯಾದ ವೇಗಿ ಮೊಹಮ್ಮದ್‌ ಸಿರಾಜ್‌ ಈಗಾಗಲೇ ದಿಗ್ಗಜರ ಜತೆ ವಿಶೇಷ ಎಲೈಟ್‌ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಭಾರತದ ಪರ ವಿದೇಶಿ ಪಿಚ್‌ಗಳಲ್ಲಿ 100 ಕ್ಕೂ ವಿಕೆಟ್‌ ಕಬಳಿಸೋ ಮೂಲಕ ಸಾಧನೆ ಮಾಡಿದ 7ನೇ ವೇಗದ ಬೌಲರ್‌ ಎನಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಿರಾಜ್‌ 5 ಮ್ಯಾಚ್​ಗಳಲ್ಲಿ 23 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಇದೀಗ ಕ್ರಿಕೆಟ್‌ನಿಂದಲೇ ಸಿರಾಜ್‌ ಕೋಟಿ ಕೋಟಿ ಸಂಪಾದನೆ ಮಾಡ್ತಿದ್ದಾರೆ.. ವರ್ಷದಿಂದ ವರ್ಷಕ್ಕೆ ಸಿರಾಜ್‌ ಆದಾಯ ಡಬಲ್‌ ಆಗ್ತಾನೆ ಇದೆ..

ಅಂದ್ಹಾಗೆ 2025ರಲ್ಲಿ ಸಿರಾಜ್‌ ವಾಷಿಕ ಆದಾಯ ಆದಾಯ 57 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇಷ್ಟೊಂದು ಆದಾಯ ಗಳಿಸ್ತಿರೋದು ಐಪಿಎಲ್ ಒಪ್ಪಂದ, ಬಿಸಿಸಿಐ ಸಂಬಳ  ಮತ್ತು ವಿವಿಧ  ಬ್ರ್ಯಾಂಡ್‌ ಎಂಡೋರ್ಸ್‌ ಮೆಂಟ್‌ಗಳಿಂದ. ಇತ್ತೀಚಿನ ವರ್ಷಗಳಲ್ಲಿ, ಅವರ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾನೇ ಇದೆ. ಹೌದು ಮೊಹಮ್ಮದ್‌ ಸಿರಾಜ್‌ ಬಿಸಿಸಿಐ ಒಪ್ಪಂದದಡಿಯಲ್ಲಿ ಗ್ರೇಡ್ ಎ ಆಟಗಾರನಾಗಿದ್ದಾರೆ. ಸಿರಾಜ್ ಬಿಸಿಸಿಐ ವಾರ್ಷಿಕವಾಗಿ 5 ಕೋಟಿ ರೂ ನೀಡ್ತಾ ಇದೆ. ಅಷ್ಟೇ ಅಲ್ಲ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ. ಮತ್ತು ಪ್ರತಿ ಟಿ 20ಐಗೆ 3 ಲಕ್ಷ ರೂ. ಪಂದ್ಯ ಶುಲ್ಕವನ್ನು ಪಡೆಯುತ್ತಾರೆ. ಇದು ಕೂಡ ಸಿರಾಜ್‌ ಆದಾಯ ಹೆಚ್ಚಾಗಲು ಕಾರಣ.. ಇನ್ನು ಸಿರಾಜ್‌ ಆದಾಯದ ಇನ್ನೊಂದು ಮೂಲ ಅಂದ್ರೆ ಅದು ಐಪಿಎಲ್‌.. ಸಿರಾಜ್‌ 2017 ರಲ್ಲಿ ಎಸ್‌ಆರ್‌ ಹೆಚ್‌ ತಂಡ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡ್ತಾರೆ.. ಮೊದಲ ಹೈದ್ರಾಬಾದ್‌ ತಂಡ 2.6 ಕೋಟಿಗೆ ಖರೀಸಿತ್ತು.. ಬಳಿಕ ಅಂದ್ರೆ 2018ರಿಂದ ಸಿರಾಜ್‌ ಆರ್‌ಸಿಬಿ ತಂಡದ ಭಾಗವಾಗಿದ್ರು.. ಆದ್ರೆ 2025 ರಲ್ಲಿ ಸಿರಾಜ್‌ ಅನ್ನ ಆರ್‌ಸಿಬಿ ತಂಡದಿಂದ ಕೈಬಿಡಲಾಯ್ತು. ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗೆ ಸಿರಾಜ್‌ ಅವ್ರನ್ನ ಖರೀದಿಸಿತ್ತು..

ಇನ್ನು ಸಿರಾಜ್‌ ಈಗಾಗಲೇ ಕೆಲ ಬ್ರ್ಯಾಂಡ್‌ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ಮೈ11 ಸರ್ಕಲ್, ಥಂಬ್ಸ್‌ಅಪ್, ಕಾಯಿನ್‌ಸ್ವಿಚ್‌ಕುಬೇರ್, ಎಸ್‌ಜಿ ಕ್ರಿಕೆಟ್, ನಿಪ್ಪಾನ್ ಪಾಯಿಂಟ್, ಮತ್ತು ಮೈಫಿಟ್‌ನೆಸ್‌ನಂತಹ ಹಲವಾರು ಬ್ರ್ಯಾಂಡ್‌ಗಳ ಜೊತೆ ಸಿರಾಜ್‌ ಟೈಅಪ್ ಆಗಿದ್ದಾರೆ.. ಬ್ರ್ಯಾಂಡ್‌ ಎಂಡೋರ್ಸ್‌ಮೆಂಟ್‌ಗಳ ಮೂಲಕವೂ ಸಿರಾಜ್‌ ಕೋಟ್ಯಾಂತರ ರೂಪಾಯಿ ಗಳಿಸ್ತಾ ಇದ್ದಾರೆ.  ಅಷ್ಟೇ ಅಲ್ಲ ಸಿರಾಜ್‌ ಸಿರಾಜ್ ರಿಯಲ್ ಎಸ್ಟೇಟ್‌ನಲ್ಲೂ ಹೂಡಿಕೆ ಮಾಡಿದ್ದಾರೆ.

ಇನ್ನು ಬಾಲ್ಯದಲ್ಲಿ ಸಣ್ಣ ಮನೆಯಲ್ಲಿ ಬೆಳೆದ ಸಿರಾಜ್‌ ಈಗ ಐಶರಾಮಿ ಜೀವನ ನಡೆಸ್ತಿದ್ದಾರೆ.. ಇದಕ್ಕೆ ಸಾಕ್ಷಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಇರೋ ಅವ್ರ ಐಶಾರಾಮಿ ಮನೆ.. ಜುಬಿಲಿ ಹಿಲ್ಸ್‌ನಲ್ಲಿ 13 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಸಿರಾಜ್.‌ ಅಷ್ಟೇ ಅಲ್ಲ ಸಿರಾಜ್‌ ಬಳಿ ಈಗಾಗಲೇ ಐಶಾರಾಮಿ ಕಾರುಗಳಿವೆ. ರೇಂಜ್ ರೋವರ್ ವೋಗ್, ಮರ್ಸಿಡಿಸ್-ಬೆನ್ಜ್ ಎಸ್-ಕ್ಲಾಸ್, ಬಿಎಂಡಬ್ಲ್ಯು 5-ಸೀರೀಸ್, ಟೊಯೋಟಾ ಕೊರೊಲ್ಲಾ ಮತ್ತು ಆನಂದ್ ಮಹೀಂದ್ರಾ ಉಡುಗೊರೆಯಾಗಿ ನೀಡಿದ ಮಹೀಂದ್ರಾ ಥಾರ್,  ನಂತಹ  ಐಷಾರಾಮಿ  ವಾಹನಗಳು ಸೇರಿವೆ.

Shwetha M