ಸೂರ್ಯಕುಮಾರ್ ಕರಿಯರ್ END? – ಆಡದ ರಿಂಕು ಟೀಂಗೆ ಬೇಕಾ?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಭಾರತ ಎ ತಂಡಕ್ಕೆ ಪಾಕಿಸ್ತಾನ ಎ ತಂಡ ಸೋಲುಣಿಸಿದೆ. ತಿಲಕ್ ವರ್ಮಾ ಶತಕ ಹಾಗೂ ಅಭಿಷೇಕ್ ಶರ್ಮಾ ಅವರ 70 ರನ್‌ಗಳ ಪ್ರದರ್ಶನದ ಹೊರತಾಗಿಯೂ ಭಾರತ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಪಾಕಿಸ್ತಾನ ಎ ತಂಡ 48 ರನ್‌ಗಳ ಅಂತರದಲ್ಲಿ ಗೆದ್ದು ಟೂರ್ನಿಯಲ್ಲಿ ಗಮನ ಸೆಳೆದಿದೆ.
ನ್ಯೂಜಿಲೆಂಡ್ ವಿರುದ್ಧ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಭಾರತದ ಮೊದಲ ಇನಿಂಗ್ಸ್‌ನ 720 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಹೋರಾಟ ನಡೆಸಿ ಪಂದ್ಯವನ್ನು ಉಳಿಸಿಕೊಂಡಿದೆ. ಕೊನೆಯ ದಿನ ಭಾರತ ಗೆಲುವಿಗೆ ಇನ್ನಷ್ಟು ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸಿದರೂ, ಕಿವೀಸ್ ಬ್ಯಾಟರ್‌ಗಳ ತಾಳ್ಮೆಯ ಆಟದಿಂದ ಪಂದ್ಯ ಡ್ರಾ ಆಯಿತು.
ವಿಕೆಟ್ ಕೀಪರ್ ರಿಷಭ್ ಪಂತ್ ಬೇಡ ಎಂದ್ರೂ ಬೌಲರ್ ಅನ್ಶುಲ್ ಕಂಬೋಜ್ ಮೇಲೆ ನಂಬಿಕೆಯಿಟ್ಟು ಗಿಲ್ ತೆಗೆದುಕೊಂಡ ಡಿಆರ್‌ಎಸ್ ಭಾರತಕ್ಕೆ ನಿರ್ಣಾಯಕ ವಿಕೆಟ್ ತಂದುಕೊಟ್ಟಿದೆ. ಈ ಯಶಸ್ಸಿನ ಬೆನ್ನಲ್ಲೇ ಗಿಲ್ ಮೈದಾನದ ಮಧ್ಯೆಯೇ ಭಾಂಗ್ರಾ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ. ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆಯೇ, ಬೃಹತ್ ಪರದೆಯ ಮೇಲೆ ಔಟ್ ಎಂಬ ಸಂದೇಶ ಕಾಣಿಸಿಕೊಂಡಿತು. ತಮ್ಮ ನಿರ್ಧಾರ ಸರಿಯಾಗಿದ್ದಕ್ಕೆ ಸಂತಸಗೊಂಡ ಶುಭ್‌ಮನ್ ಗಿಲ್ ಡ್ಯಾನ್ಸ್ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ರಿಷಭ್ ಪಂತ್ ಸಿಡಿಸಿದ 128 ರನ್ ಶತಕಕ್ಕೆ, ಹಿಂದೆ ಅವರನ್ನು ಕಟುವಾಗಿ ಟೀಕಿಸಿದ್ದ ಸುನಿಲ್ ಗವಾಸ್ಕರ್ ನಗುತ್ತಾ ಚಪ್ಪಾಳೆ ತಟ್ಟಿದ ದೃಶ್ಯ ಈಗ ಸಖತ್ ವೈರಲ್ ಆಗ್ತಿದೆ. 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ಪಂತ್‌ಗೆ ಗವಾಸ್ಕರ್ ಸ್ಟುಪಿಡ್, ಸ್ಟುಪಿಡ್’ ಎಂದು ಹೇಳಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದ್ರೆ ಈಗ ನ್ಯೂಜಿಲೆಂಡ್ ವಿರುದ್ಧ ಪಂತ್ ಶತಕ ಹೊಡೆಯುತ್ತಿದ್ದಂತೆ ಗವಾಸ್ಕರ್ ಎದ್ದು ನಿಂತು ನಗುತ್ತಾ ಚಪ್ಪಾಳೆ ಹೊಡೆದಿದ್ದಾರೆ.
ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮತ್ತೆ ಭಾರತ ತಂಡಕ್ಕೆ ಮರಳುವ ಅವಕಾಶವನ್ನು ಗಿಟ್ಟಿಸಿಕೊಳ್ಳಲು ರಿಂಕು ಸಿಂಗ್‌ಗೆ ಉತ್ತಮ ವೇದಿಕೆ ಸಿಕ್ಕಿತ್ತು. ಆದರೆ, ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ರಿಂಕು ವಿಫಲರಾಗಿದ್ದಾರೆ. ಆಡಿರುವ ಎರಡೂ ಪಂದ್ಯಗಳಲ್ಲೂ ನಿರೀಕ್ಷಿತ ಪ್ರದರ್ಶನ ನೀಡದೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ನೇಪಾಳ ವಿದುದ್ಧ 7 ಎಸೆತದಲ್ಲಿ 9 ರನ್‌ಗಳಿಸಿ ಔಟ್ ಆದ್ರೆ, ಪಾಕ್ ವಿರುದ್ಧ ಕೇವಲ 6ರನ್‌ಗೆ ಔಟ್ ಆಗಿದ್ದಾರೆ.
ಭಾರತ ಎ ತಂಡದ ವೇಗಿ ಹರಷಿತ್ ರಾಣಾ ಹಾಗೂ ಪಾಕಿಸ್ತಾನ ಎ ತಂಡದ ಆಟಗಾರರ ನಡುವಿನ ವಾಗ್ವಾದ ಇದೀಗ ಚರ್ಚೆಗೆ ಕಾರಣವಾಗಿದೆ. ವಿಕೆಟ್ ಪಡೆದ ಬಳಿಕ ಆಟಗಾರರು ನೀಡಿದ ಆಕ್ರಮಣಕಾರಿ ಸೆಂಡ್ ಆಫ್ ಮೈದಾನದಲ್ಲಿ ಉದ್ವಿಗ್ನತೆ ಹೆಚ್ಚಿಸಿತು. ಸಹ ಆಟಗಾರರು ಮಧ್ಯಪ್ರವೇಶಿಸಿದ ಘಟನೆ ಪಂದ್ಯದಲ್ಲಿ ಗಮನ ಸೆಳೆದಿದ್ದು, ಈ ಕುರಿತ ವಿಡಿಯೋಗಳು ಕ್ರಿಕೆಟ್ ಅಭಿಮಾನಿಗಳ ನಡುವೆ ಚರ್ಚೆಯಾಗುತ್ತಿವೆ.
ಇದನ್ನೂ ಓದಿ: ತಿಲಕ್ ತಿಣುಕಾಟಕ್ಕೆ ಸೋತ ಭಾರತ – PAK ಪ್ಲೇಯರ್ಸ್ & ಫ್ಯಾನ್ಸ್ ಹುಚ್ಚಾಟ
ಟೀಮ್ ಇಂಡಿಯಾ ಸ್ಟಾರ್ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬಿಜೆಪಿ ಸೇರ್ಪಡೆಯಾಗಿದ್ದು, ರಾಷ್ಟ್ರೀಯ ಒಬಿಸಿ ಮೋರ್ಚಾದ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತ ಸದಸ್ಯರಾಗಿ ಜವಾಬ್ದಾರಿ ನೀಡಲಾಗಿದೆ. ಚಾಹಲ್ ರಾಜಕೀಯ ಪ್ರವೇಶಕ್ಕೆ ಶಿವಸೇನೆ ಸಂಸದೆ ಪ್ರಿಯಾಂಕಾ ಚತುರ್ವೇದಿ ವ್ಯಂಗ್ಯವಾಡಿದ್ದಾರೆ. ಚಾಹಲ್‌ಗೆ ಕೊನೆಗೂ ತಮ್ಮದೇ ಶುಗರ್ ಡ್ಯಾಡಿ ಸಿಕ್ಕಂತಿದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಚ್ಛೇದನದ ಬಳಿಕ ಚಾಹಲ್ ಧರಿಸಿದ್ದ ಟೀ-ಶರ್ಟ್ ಬರಹವನ್ನು ನೆನಪಿಸಿ ಈ ಟೀಕೆ ಮಾಡಿದ್ದಾರೆ.
ಸೂರ್ಯಕುಮಾರ್ ಯಾದವ್ ಟೀಮ್ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವ ಕನಸು ಭಗ್ನವಾದಂತೆ ಕಾಣುತ್ತಿದೆ. ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆ ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಸೂರ್ಯ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಸದ್ಯ ತಂಡದ ಸಂಯೋಜನೆಯಲ್ಲಿ ಅವರಿಗೆ ಅವಕಾಶ ನೀಡುವುದು ಕಷ್ಟ ಎಂದು ಅಧಿಕಾರಿ ಹೇಳಿದ್ದಾರೆ. ಯಶಸ್ವಿ ಜೈಸ್ವಾಲ್ ಅವರಂತಹ ಯುವ ಆಟಗಾರರಿಗೂ ಸ್ಥಾನ ಸಿಗುತ್ತಿಲ್ಲ. ಹೀಗಾಗಿ ಸೂರ್ಯನನ್ನು ಮರಳಿ ಕರೆತರುವ ಯಾವುದೇ ಯೋಜನೆ ಸದ್ಯಕ್ಕೆ ಇಲ್ಲ ಎನ್ನಲಾಗಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಇದರಿಂದ ಶುಭ್‌ಮನ್ ಗಿಲ್ ನಾಯಕತ್ವದ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಕನಸಿಗೆ ಭಾರಿ ಹಿನ್ನಡೆಯಾಗಿದೆ. ಮುಂದಿನ 6 ಪಂದ್ಯಗಳಲ್ಲಿ ಗೆಲುವು ದಾಖಲಿಸುವುದರ ಜೊತೆಗೆ, ಇತರ ತಂಡಗಳ ಫಲಿತಾಂಶಗಳು ತಮ್ಮ ಪರವಾಗಿ ಬಂದರಷ್ಟೇ ಭಾರತ ತಂಡವು ವಿಶ್ವಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಲು ಸಾಧ್ಯವಾಗಲಿದೆ.
2018ರ ಆಸ್ಟ್ರೇಲಿಯಾ ತಂಡದ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಚರ್ಚೆಗೆ ಬಂದಿದೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, 2018ರ ಡರ್ಬನ್ ಟೆಸ್ಟ್ ಪಂದ್ಯದಲ್ಲಿಯೂ ಬಾಲ್ ಟ್ಯಾಂಪರಿಂಗ್ ನಡೆದಿರಬಹುದು ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಹಳೆಯ ವಿವಾದಕ್ಕೆ ಹೊಸ ತಿರುವು ನೀಡಿದ್ದು, ಆಸ್ಟ್ರೇಲಿಯಾ ಕ್ರಿಕೆಟ್‌ನ ಸ್ಯಾಂಡ್‌ಪೇಪರ್ ಪ್ರಕರಣದ ಚರ್ಚೆ ಮತ್ತೆ ಜೋರಾಗಿದೆ

ನೋಡಿರಿ

