BBK ಬ್ಯೂಟಿಗೆ ಸಿರಾಜ್‌ ಬೋಲ್ಡ್‌.. ಮಹಿರಾ ಜೊತೆ ಕದ್ದುಮುಚ್ಚಿ ಡೇಟಿಂಗ್! – DSP ಮದ್ವೆಗೆ ಮುಹೂರ್ತ ಫಿಕ್ಸ್?‌  

BBK ಬ್ಯೂಟಿಗೆ ಸಿರಾಜ್‌ ಬೋಲ್ಡ್‌.. ಮಹಿರಾ ಜೊತೆ ಕದ್ದುಮುಚ್ಚಿ ಡೇಟಿಂಗ್! – DSP ಮದ್ವೆಗೆ ಮುಹೂರ್ತ ಫಿಕ್ಸ್?‌  

ಮೊಹಮ್ಮದ್ ಸಿರಾಜ್.. ಟೀಮ್‌ ಇಂಡಿಯಾದ ವೇಗದ ಬೌಲರ್‌ ಈಗ ಐಎಪಿಎಲ್‌ನಲ್ಲೂ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ನೀಡಲು ಸಜ್ಜಾಗಿದ್ದಾರೆ.. 7 ವರ್ಷಗಳ ಕಾಲ RCB ಭಾಗವಾಗಿದ್ದ ಸಿರಾಜ್‌ ಕಳೆದ ವರ್ಷದಿಂದ ಜಿಟಿ ತಂಡದ ಭಾಗವಾಗಿದ್ದಾರೆ. ಐಪಿಎಲ್‌ ಆರಂಭವಾಗ್ತಿದ್ದಂತೆ ಸಿರಾಜ್‌ ಬೇರೆ ವಿಚಾರಕ್ಕೆ ಸದ್ದು ಮಾಡ್ತಿದ್ದಾರೆ. ಇದೀಗ DSP ಸಿರಾಜ್‌ ಪ್ರೀತಿ, ಮದುವೆ ವಿಚಾರ ಮುನ್ನಲೆಗೆ ಬಂದಿದೆ. ಸಿರಾಜ್‌ ಬಿಗ್‌ಬಾಸ್‌ ಬ್ಯೂಟಿ ಜೊತೆ ಕದ್ದು ಮುಚ್ಚಿ ಡೇಟಿಂಗ್‌ ಮಾಡ್ತಿದ್ದಾರೆ ಎನ್ನಲಾಗ್ತಿದೆ.

ಇದನ್ನೂ ಓದಿ: ದೇಗುಲದಲ್ಲಿ ಭೀಕರ ಕಾಲ್ತುಳಿತ! – 8 ಮಹಿಳೆಯರು ಸಾವು.. ಹಲವರ ಸ್ಥಿತಿ ಗಂಭೀರ

ಬಾಲಿವುಡ್ ಮತ್ತು ಕ್ರಿಕೆಟ್‌ಗೆ ಮೊದಲಿನಿಂದಲೂ ಅವಿನಾಭಾವ ಸಂಬಂಧ ಇದೆ. ಬಾಲಿವುಡ್‌ ಬೆಡಗಿಯರು, ಕ್ರಿಕೆಟರ್ಸ್‌ ಮೀಟಿಂಗ್‌, ಡೇಟಿಂಗ್‌ ನಡೆಸೋದು ಕಾಮನ್‌ ಆಗ್ಬಿಟ್ಟಿದೆ. ಆದ್ರೆ ಮದುವೆವರೆಗೂ ಬಂದಿದ್ದು ತೀರಾ ವಿರಳ. ಈಗಾಗಲೇ ಹಲವು ಬಾಲಿವುಡ್‌ ಬ್ಯೂಟಿಗಳ ಜೊತೆ ಕ್ರಿಕೆಟರ್ಸ್‌ ಹೆಸರು ತಳುಕು ಹಾಕಿಕೊಂಡಿರುವುದು ನಿಮ್ಗೆಲ್ಲಾ ಗೊತ್ತೇ ಇದೆ.. ಇದೀಗ ಅಂಥದೇ ಕತೆ ಮೊಹಮ್ಮದ್ ಸಿರಾಜ್ ಅವರದು. ಡಿಎಸ್‌ಪಿ ಸಿರಾಜ್‌ ಜೊತೆ ಬಾಲಿವುಡ್‌ ನಟಿಗೆ ಕ್ಲೀನ್‌ ಬೋಲ್ಡ್‌ ಆಗಿದ್ದಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.

ಅಂದ್ಹಾಗೆ ಸಿರಾಜ್‌ ಮನ ಗೆದ್ದ ಬ್ಯೂಟಿ ಬೇರೆ ಯಾರು ಅಲ್ಲ.. ಮಹಿರಾ ಶರ್ಮಾ.. ಬಿಗ್‌ಬಾಸ್‌ ಸೀಸನ್‌ 13 ಸ್ಪರ್ಧಿ ಮಹಿರಾ ಶರ್ಮಾ ಜೊತೆ ಸಿರಾಜ್‌ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಸಿರಾಜ್ ಮತ್ತು ನಟಿ ಮಹಿರಾ ಶರ್ಮಾ ಮುಂಬೈನ ಒಂದೇ ರೆಸ್ಟೋರೆಂಟ್‌ ನಲ್ಲಿ ಕಾಣಿಸಿಕೊಂಡಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಿರಾಜ್ ರೆಸ್ಟೋರೆಂಟ್‌ ಹೊರಗೆ ಪ್ಯಾನ್ಸ್‌ ಜೊತೆ ಮಾತನಾಡುತ್ತಿರುವಾಗ, ಮಹಿರಾ ಶರ್ಮಾ ಅದೇ ಟೈಮ್‌ನಲ್ಲಿ ರೆಸ್ಟೋರೆಂಟ್‌ನಿಂದ ಹೊರಬಂದು ತನ್ನ ಕಾರಿನ ಕಡೆಗೆ ಹೋಗಿದ್ದಾರೆ. ಈ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇವರಿಬ್ಬರು ಮದುವೆ ಆಗೋದು ಫಿಕ್ಸ್.‌ ಐಪಿಎಲ್‌ ಮುಗಿತಾ ಇದ್ದಂತೆ ಸಿರಾಜ್‌ ಭಾಯ್‌ ಮದುವೆ ಸುದ್ದಿ ಕೊಡ್ತಾರೆ ಅಂತ ಫ್ಯಾನ್ಸ್‌ ಕಮೆಂಟ್‌ ಮಾಡ್ತಿದ್ದಾರೆ.

ಅಂದ್ಹಾಗೆ ಮಹಿರಾ ಶರ್ಮಾ ಜಮ್ಮು ಮತ್ತು ಕಾಶ್ಮೀರವರು.. ಮಹಿರಾ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ.. ಮಹಿರಾ ಈಗಾಗಲೇ ಹಲವು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ. ಆಲ್ಬಮ್ ಹಾಡುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ನಾಗಿನ್, ಬೇಪಾನ ಪ್ಯಾರ್, ಕುಂಡಲಿ ಭಾಗ್ಯ ದಂತಹ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ. ಇನ್ನು ಹಿಂದಿ ಬಿಗ್ ಬಾಸ್ ಸೀಸನ್ 13 ರಲ್ಲಿ ಮಹಿರಾ ಭಾಗವಹಿಸಿದ್ರು.. ಇದೇ ಟೈಮ್‌ನಲ್ಲಿ ಮಹಿರಾಗೆ ಹೆಚ್ಚಿನ ಜನಪ್ರೀಯತೆ ಸಿಕ್ಕಿತು.. ಬಿಗ್‌ ಬಾಸ್‌ ಮನೆಯಲ್ಲಿ ಮಹಿರಾ ಶರ್ಮಾಗೆ ನಟ – ಮಾಡೆಲ್ ಪರಾಸ್ ಛಬ್ರಾ ಪರಿಚಯವಾದ್ರು.. ಅಲ್ಲಿಂದ ಅವರಿಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಿತು.. ಬಿಗ್‌ ಬಾಸ್‌ ನಿಂದ ಬಂದ ಬಳಿಕ ಇವರಿಬ್ಬರು ಡೇಟಿಂಗ್​ನಲ್ಲಿದ್ರು ಎಂದು ಈ ಹಿಂದೆ ವರದಿ ಆಗಿತ್ತು. ಆದ್ರೂ ಕೆಲ ಕಾರಣಗಳಿಂದ ಇಬ್ಬರೂ 2023ರಲ್ಲಿ ಬೇರೆಯಾದರು. ಅದಾದ ಬಳಿಕ  ಮೊಹಮ್ಮದ್‌ ಸಿರಾಜ್‌ ಜೊತೆ ಮಹಿರಾ ಹೆಸರು ತಳುಕು ಹಾಕಿಕೊಂಡಿದೆ.. ಕಳೆದ ಎರಡು ವರ್ಷಗಳಿಂದ ಸಿರಾಜ್ ಮತ್ತು ಮಹಿರಾ ಲವ್‌ ಮಾಡ್ತಿದ್ದಾರೆ ಎನ್ನಲಾಗ್ತಿದೆ.  ಕಳೆದ ವರ್ಷವೂ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಪರಸ್ಪರರ ಪೋಸ್ಟ್‌ಗಳಿಗೆ ಲೈಕ್ ಕೊಡುವುದು ಅಭಿಮಾನಿಗಳ ಗಮನ ಸೆಳೆದಿತ್ತು. ಆ ಸಮಯದಲ್ಲಿ, ಮಹಿರಾ ಶರ್ಮಾ ಈ ವರದಿಗಳಿಗೆ ಪ್ರತಿಕ್ರಿಯಿಸಿ, ತಾನು ಯಾರೊಂದಿಗೂ ಡೇಟಿಂಗ್ ಮಾಡುತ್ತಿಲ್ಲ ಮತ್ತು ಯಾರು ವದಂತಿಗಳನ್ನು ಹರಡಬಾರದು ಎಂದು ಮನವಿ ಮಾಡಿದ್ದರು. ಹಾಗೆಯೇ ಮೊಹಮ್ಮದ್ ಸಿರಾಜ್ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಈ ವದಂತಿ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸಂಪೂರ್ಣವಾಗಿ ಆಧಾರರಹಿತವಾಗಿದೆ ಎಂದು ಪೋಸ್ಟ್ ಮಾಡಿದ್ದರು. ಆದರೆ,  ಈ ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ ಸಿರಾಜ್‌  ಡಿಲೀಟ್ ಮಾಡಿದ್ದರು. ಇದು ಅಭಿಮಾನಿಗಳಲ್ಲಿನ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಸಿರಾಜ್‌ ಮತ್ತು ಮಹಿರಾ ಈ ಬಗ್ಗೆ ಸ್ಪಷ್ಟನೆ ನೀಡ್ತಾರಾ ಅಂತಾ ಕಾದು ನೋಡ್ಬೇಕು.

Shwetha M