ಟಿ-20ಐ ತಂಡದಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್ – 3 ವರ್ಷಗಳ ಬಳಿಕ ಟೀಂ ಸೇರಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ಟಿ-20ಐ ತಂಡದಿಂದ ಹೊರಬಿದ್ದ ಮೊಹಮ್ಮದ್ ಸಿರಾಜ್ – 3 ವರ್ಷಗಳ ಬಳಿಕ ಟೀಂ ಸೇರಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ

ಭಾರತ ಟಿ-20 ತಂಡ ಅನೌನ್ಸ್ ಆದ ಮೇಲೆ ಸಾಕಷ್ಟು ಚರ್ಚೆಗಳಾಗಿವೆ. ಆಟಗಾರರ ಆಯ್ಕೆ, ಕೈಬಿಟ್ಟವರ ಬಗ್ಗೆಯೂ ಕೆಲವು ಪ್ರಶ್ನೆಗಳನ್ನ ಮಾಡುತ್ತಿದ್ದಾರೆ. ಆದ್ರೀಗ ತಂಡದಿಂದ ಮೊಹಮ್ಮದ್ ಸಿರಾಜ್ ರನ್ನ ಕೈಬಿಟ್ಟು ಪ್ರಸಿದ್ಧ್ ಕೃಷ್ಣಗೆ ಅವಕಾಶ ನೀಡಲಾಗಿದೆ. ಸರಣಿ ಆರಂಭಕ್ಕೂ ಮೊದಲೇ ತಂಡದಲ್ಲಿ ಸರ್ಜರಿ ಮಾಡಿರೋದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ODIನಲ್ಲಿ ಸೂರ್ಯವಂಶಿ ಫ್ಲಾಪ್ -ಲಂಕಾದಲ್ಲಿ ಗಾಯಕ್ವಾಡ್ ಸೆಂಚುರಿ

ಮುಂಬರುವ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಗೆ ಭಾರತದ ತಂಡಗಳಿಂದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಹೊರಗಿಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಒತ್ತಡ ನಿವಾರಣೆ. ಬಿಸಿಸಿಐ ವೈದ್ಯಕೀಯ ತಂಡ ಮತ್ತು ತಂಡದ ಆಡಳಿತ ಮಂಡಳಿಯ ನಡುವಿನ ಚರ್ಚೆಯ ನಂತರ, ಸಿರಾಜ್ ಅವರ ಕೆಲಸದ ಹೊರೆ ನಿರ್ವಹಣಾ ಕಾರ್ಯಕ್ರಮದ ಭಾಗವಾಗಿ ವಿಶ್ರಾಂತಿ ನೀಡಲಾಗಿದೆ ಎಂದು ಬಿಸಿಸಿಐ  ತಿಳಿಸಿದೆ. ವೈದ್ಯಕೀಯ ತಂಡ ಮತ್ತು ತಂಡದ ನಿರ್ವಹಣೆಯೊಂದಿಗೆ ಸಮಾಲೋಚಿಸಲಾಗಿದೆ. ದೀರ್ಘ ಅಂತರರಾಷ್ಟ್ರೀಯ ಋತುವಿಗೆ ಮುಂಚಿತವಾಗಿ ಸಿರಾಜ್‌ಗೆ ಸಾಕಷ್ಟು ವಿಶ್ರಾಂತಿ ಮತ್ತು ಚೇತರಿಕೆಗೆ ಸಮಯವನ್ನು ನೀಡಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ತಿಳಿಸಿದೆ. ಮುಂಬರುವ ನಿರ್ಣಾಯಕ ಪಂದ್ಯಗಳಿಗೆ ಅವರು ಸಂಪೂರ್ಣವಾಗಿ ಫಿಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಲು ಸದ್ಯ ಅವರಿಗೆ ವಿಶ್ರಾಂತಿ ನೀಡಲಾಗುತ್ತಿದೆ ಎಂದಿದ್ದಾರೆ.

ಮೊಹಮ್ಮದ್ ಸಿರಾಜ್ ಎರಡು ಸರಣಿಗಳಿಂದ ಅಂದ್ರೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿಯುತ್ತಿದ್ದಂತೆ ಅವರ ಬದಲಿಗೆ ಕನ್ನಡಿಗ ಪ್ರಸಿದ್ಧ್ ಕೃಷ್ಣಾರನ್ನು ತಂಡಕ್ಕೆ ಆಯ್ಕೆ ಮಾಲಾಗಿದೆ. ಇದರೊಂದಿಗೆ 2023ರ ನಂತರ ಪ್ರಸಿಧ್ಧ್ ಕೃಷ್ಣ ಭಾರತೀಯ ಟಿ20 ತಂಡಕ್ಕೆ ಮರಳಿದ್ದಾರೆ. ಈ ಹಿಂದೆ ಅವರು 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಿದ್ದರು. ಪ್ರಸಿದ್ಧ್ ಕೃಷ್ಣ, T20I ಗಳಲ್ಲಿ ಇದುವರೆಗೆ ಐದು ಪಂದ್ಯಗಳನ್ನು ಆಡಿ ಎಂಟು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಭಾರತ ಕ್ರಿಕೆಟ್ ತಂಡವು ಪ್ರಸ್ತುತ ಅಫ್ಘಾನಿಸ್ತಾನ ವಿರುದ್ಧ ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನು ಒಳಗೊಂಡ ಸರಣಿಯನ್ನು ಆಡುತ್ತಿದೆ. ಇತ್ತೀಚೆಗೆ ಮುಕ್ತಾಯಗೊಂಡ ಟೆಸ್ಟ್ ಪಂದ್ಯದಲ್ಲಿ, ಭಾರತ ತಂಡವು ಅಫ್ಘಾನ್ ತಂಡವನ್ನು 300 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಭಾರಿ ಗೆಲುವು ಸಾಧಿಸಿತು. ಈ ಪರಿಸ್ಥಿತಿಯಲ್ಲಿ, ಉಭಯ ತಂಡಗಳ ನಡುವಿನ ಏಕದಿನ ಸರಣಿಯು ಜೂನ್ 13 ರಿಂದ ನಡೆಯಲಿದೆ. ಇದರ ನಂತರ, ಭಾರತ ತಂಡವು ಟಿ20 ಕ್ರಿಕೆಟ್ ಸರಣಿಯನ್ನು ಆಡಲು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಬಳಿಕ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳು ಮತ್ತು ಇಂಗ್ಲೆಂಡ್ ವಿರುದ್ಧ 5 ಟಿ20 ಪಂದ್ಯಗಳನ್ನು ಆಡಲಿದೆ. ಐರ್ಲೆಂಡ್ ಪ್ರವಾಸ ಜೂನ್ 26 ರಂದು ಪ್ರಾರಂಭಗೊಂಡು ಜೂ.28ಕ್ಕೆ ಕೊನೆಗೊಳ್ಳಲಿದೆ. ಇಲ್ಲಿಂದ ಟೀಮ್ ಇಂಡಿಯಾ ನೇರವಾಗಿ ಇಂಗ್ಲೆಂಡ್ಗೆ ಪ್ರವಾಸ ಕೈಗೊಳ್ಳಲಿದೆ. ಜು.1 ರಿಂದ ಟಿ20 ಸರಣಿಯನ್ನು ಆಡಲಿದೆ.

ಭಾರತದ ಐರ್ಲೆಂಡ್ ಪ್ರವಾಸ ವೇಳಾಪಟ್ಟಿ

ಮೊದಲ ಪಂದ್ಯ: ಜೂನ್ 26, ಬೆಲ್‌ಫಾಸ್ಟ್

ಎರಡನೇ ಪಂದ್ಯ: ಜೂನ್ 28, ಬೆಲ್‌ಫಾಸ್ಟ್

 

ಭಾರತ ಇಂಗ್ಲೆಂಡ್ ಪ್ರವಾಸ ವೇಳಾಪಟ್ಟಿ

ಮೊದಲ ಪಂದ್ಯ – ಜುಲೈ 1, ಚೆಸ್ಟರ್-ಲೆ-ಸ್ಟ್ರೀಟ್

ಎರಡನೇ ಪಂದ್ಯ – ಜುಲೈ 4, ಮ್ಯಾಂಚೆಸ್ಟರ್

ಮೂರನೇ ಪಂದ್ಯ – ಜುಲೈ 7, ನಾಟಿಂಗ್ಹ್ಯಾಮ್

ನಾಲ್ಕನೇ ಪಂದ್ಯ – ಜುಲೈ 9, ಬ್ರಿಸ್ಟಲ್

ಐದನೇ ಪಂದ್ಯ – ಜುಲೈ 11, ಸೌತಾಂಪ್ಟನ್

Shantha Kumari

Leave a Reply

Your email address will not be published. Required fields are marked *