ಶಮಿ T-20I ಕ್ರಿಕೆಟ್ ಜರ್ನಿ ಅಂತ್ಯ? – ಫಿಟ್ ನೆಸ್ ಬಗ್ಗೆ ಶಾಕಿಂಗ್ ಸ್ಟೇಟ್ ಮೆಂಟ್
ಮೊಹಮ್ಮದ್ ಬಗ್ಗೆ BCCI ಬಿಗ್ ಟ್ವಿಸ್ಟ್

ಭಾರತದ ವೇಗಿ ಮೊಹಮ್ಮದ್ ಶಮಿ ಅವ್ರಗೆ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಆದ್ರೆ ಟೀಂ ಇಂಡಿಯಾ ಪರ ಶಮಿಯವ್ರನ್ನ ನೋಡ್ಬೇಕು ಅನ್ನೋ ಆಸೆ ಮಾತ್ರ ಕೈಗೂಡ್ತಾನೇ ಇಲ್ಲ. ಇತ್ತೀಚೆಗೆ ಫಿಟ್ನೆಸ್ ಕಾರಣದಿಂದಲೇ ಶಮಿ ಅವರನ್ನು ಇಂಗ್ಲೆಂಡ್ ವಿರುದ್ಧದ ಭಾರತದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೆ ತಂಡವನ್ನು ಫೈನಲ್ ಮಾಡೋ ಮುನ್ನ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶಮಿ ಅವರನ್ನು ಸಂಪರ್ಕಿಸಿದೆ. ಆದ್ರೆ ಶಮಿಯೇ ಸ್ವತಃ ತಮ್ಮ ಫಿಟ್ನೆಸ್ ಬಗ್ಗೆ ಕಾನ್ಫಿಡೆನ್ಸ್ ಇರಲಿಲ್ವಂತೆ. ಇದೇ ಕಾರಣಕ್ಕೆ ಆಯ್ಕೆದಾರರು ಯಂಗ್ಸ್ಟರ್ಸ್ನ ಟಾರ್ಗೆಟ್ ಮಾಡಿದ್ರು ಅನ್ನೋ ರಿಪೊರ್ಟ್ ಹೊರಬಿದ್ದಿದೆ. ಇದೀಗ ಏಷ್ಯಾಕಪ್ಗೂ ಅದೇ ಕಥೆಯಾಗುವ ಲಕ್ಷಣಗಳಿವೆ.
ಇದನ್ನೂ ಓದಿ : ತಿರುಪತಿ ತಿಮ್ಮಪ್ಪ ಕೋಟಿ ಕೋಟಿ ಒಡೆಯ! – ಒಂದೇ ತಿಂಗಳಲ್ಲಿ 129.45 ಕೋಟಿ ಕಾಣಿಕೆ ಸಂಗ್ರಹ
ಭಾರತದ ಪರ ಮೊಹಮ್ಮದ್ ಶಮಿ ಕೊನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 9ರಂದು ಕಣಕ್ಕಿಳಿದಿದ್ರು. ಆ ಬಳಿಕ ಐಪಿಎಲ್ ನಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಪರ ಕಣಕ್ಕಿಳಿದಿದ್ರು. ಆದ್ರೆ ಐಪಿಎಲ್ ನಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆ ಬಳಿಕ ಇಂಗ್ಲೆಂಡ್ ಟೆಸ್ಟ್ ಪ್ರವಾಸದಿಂದಲೂ ಹೊರಗುಳಿದಿದ್ರು. ಇದೀಗ ಏಷ್ಯಾಕಪ್ ಗೂ ಕೂಡ ಶಮಿ ಹೆಸರು ರೇಸ್ ನಲ್ಲಿಲ್ಲ. ಆದ್ರೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಗ್ರ ಐದು ಸಕ್ರಿಯ ಬೌಲರ್ಗಳ ಪಟ್ಟಿಯಲ್ಲಿ ಶಮಿ ಹೆಸರೂ ಇದೆ. ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 108 ಪಂದ್ಯಗಳಲ್ಲಿ, ಅವರು 24.05 ಬೌಲಿಂಗ್ ಸರಾಸರಿಯಲ್ಲಿ 206 ವಿಕೆಟ್ಗಳನ್ನು ಪಡೆದಿದ್ದಾರೆ. ಆದ್ರೆ ಟಿ-20ಐ ಮಾದರಿಯಲ್ಲಿ ಮಾತ್ರ ಬಿಸಿಸಿಐ ಯಂಗ್ ಸ್ಟರ್ಸ್ ಮೇಲೆ ಕಣ್ಣಿಟ್ಟಿದೆ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಕಿರಿಯ ಆಟಗಾರರ ಮೇಲೆ ಕಣ್ಣಿಟ್ಟಿದೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಕಾಶ್ ದೀಪ್ ಮತ್ತು ಪ್ರಸಿದ್ಧ್ ಕೃಷ್ಣ ತಮ್ಮ ಸಾಮರ್ಥ್ಯವನ್ನು ಪ್ರೂವ್ ಮಾಡಿದ್ರು. ಇತ್ತೀಚಿನ ತಿಂಗಳುಗಳಲ್ಲಿ ಹರ್ಷಿತ್ ರಾಣಾ ಮತ್ತು ಅನ್ಶುಲ್ ಕಾಂಬೋಜ್ ಕೂಡ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ಅರ್ಶ್ದೀಪ್ ಸಿಂಗ್ ಕೂಡ ತಂಡದ ಭಾಗವಾಗಿದ್ದಾರೆ. ಇನ್ನು ಶಮಿ ತಂಡದಿಂದ ಕಂಪ್ಲೀಟ್ ಆಗಿ ಹೊರಗೆ ಉಳಿಯದೇ ಇದ್ರೂ ಆಗಸ್ಟ್ 28 ರಿಂದ ಪ್ರಾರಂಭವಾಗುವ ದುಲೀಪ್ ಟ್ರೋಫಿಯಲ್ಲಿ ಅವರ ಫಾರ್ಮ್ ಮತ್ತು ಫಿಟ್ನೆಸ್ ಅನ್ನು ಸಾಬೀತು ಪಡಿಸಬೇಕಾಗುತ್ತೆ. ಇನ್ನು ಶಮಿ ಪೂರ್ವ ವಲಯ ತಂಡದ ಭಾಗವಾಗುವ ನಿರೀಕ್ಷೆಯಿದೆ.
2023ರ ಏಕದಿನ ವಿಶ್ವಕಪ್ನಲ್ಲಿ ಭಾರತದ ಪರ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ನೀಡಿದ್ದ ಶಮಿ ಆ ಬಳಿಕ ಇಂಜುರಿಯಿಂದಾಗಿ ಸಾಕಷ್ಟು ಪಂದ್ಯಗಳನ್ನ ಮಿಸ್ ಮಾಡಿಕೊಂಡಿದ್ದಾರೆ. ತಂಡಕ್ಕೆ ಕಮ್ ಬ್ಯಾಕ್ ಮಾಡೋಕೆ ಸಾಕಷ್ಟು ಬೆವರಿಳಿಸ್ತಿದ್ದಾರೆ. ಬಟ್ ಟಿ-20ಐ ಮಾದರಿಗೆ ಸಾಕಷ್ಟು ಆಪ್ಶನ್ಸ್ ಇರೋದ್ರಿಂದ ಬಿಸಿಸಿಐ ಶಮಿ ಹೆಸ್ರನ್ನ ತಗೊಳ್ಳೋಕೆ ರೆಡಿ ಇಲ್ಲ.

ನೋಡಿರಿ

