790 ದಿನ.. ಶಮಿ ಈಸ್ ಬ್ಯಾಕ್ – ಭಾರತಕ್ಕೆ ಸ್ವಿಂಗ್ ಬೌಲಿಂಗ್ ಬ್ರಹ್ಮಾಸ್ತ್ರ

790 ದಿನ.. ಶಮಿ ಈಸ್ ಬ್ಯಾಕ್ – ಭಾರತಕ್ಕೆ ಸ್ವಿಂಗ್ ಬೌಲಿಂಗ್ ಬ್ರಹ್ಮಾಸ್ತ್ರ

ಟೀಮ್ ಇಂಡಿಯಾದಿಂದ ಸುಮಾರು 430 ದಿನ ದೂರ ಉಳಿದ ಬಳಿಕ ಮತ್ತೆ ಸ್ವಿಂಗ್ ಬೌಲರ್‌ ಬ್ಲ್ಯೂ ಜೆರ್ಸಿ ತೊಡಲು ರೆಡಿ ಆಗಿದ್ದಾರೆ. ಇಂಗ್ಲೆಂಡ್ ಸರಣಿ ಮೂಲಕ ಶಮಿ ಮತ್ತೆ ಅಂತಾರಾಷ್ಟ್ರೀಯ ಮೈದಾನಕ್ಕೆ ಇಳಿಯಲಿದ್ದಾರೆ. ಶಮಿ ರೀ ಎಂಟ್ರಿ ಹತ್ತಾರು ಲೆಕ್ಕಾಚಾರಗಳಿಗೂ ಕಾರಣವಾಗಿದೆ.

ಇದನ್ನೂ ಓದಿ : RCB ಬಿಟ್ಟ ಮೇಲೆ ಮ್ಯಾಕ್ಸಿ WELL  – ಪಂಜಾಬ್ ಖುಷ್ ಆಗಿದ್ದೇಕೆ?  

ಇದೇ ತಿಂಗಳಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು 5 ಪಂದ್ಯಗಳ ಟಿ-20 ಸರಣಿ ಹಾಗೇ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಸದ್ಯ ಟೀಂ ಇಂಡಿಯಾ ಟಿ-20ಐ ಪಂದ್ಯಗಳಿಗೆ ಟೀಂ ಅನೌನ್ಸ್ ಮಾಡಿದೆ. 15 ಸದಸ್ಯರ ಈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಅಕ್ಷರ್ ಪಟೇಲ್ ಇದ್ರೆ ಪ್ರಮುಖ ವೇಗಿಯಾಗಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಲಾಗಿದೆ. ಭಾರತ ಟಿ20 ತಂಡಕ್ಕೆ ಮೊಹಮ್ಮದ್ ಶಮಿ ಕಂಬ್ಯಾಕ್ ಮಾಡಿದ್ದಾರೆ. ಅದು ಕೂಡ ಬರೋಬ್ಬರಿ 790 ದಿನಗಳ ದಿನಗಳ ಬಳಿಕ ಎಂಬುದೇ ಅಚ್ಚರಿ. ಮೊಹಮ್ಮದ್ ಶಮಿ ಕೊನೆಯ ಬಾರಿ ಟೀಮ್ ಇಂಡಿಯಾ ಪರ ಟಿ20 ಪಂದ್ಯವಾಡಿದ್ದು 2022 ರಲ್ಲಿ. ಇದೀಗ 2 ವರ್ಷಗಳ ಬಳಿಕ ಮತ್ತೆ ಅವರಿಗೆ ಭಾರತ ಟಿ20 ತಂಡದಲ್ಲಿ ಸ್ಥಾನ ನೀಡಿರುವುದೇ ಅಚ್ಚರಿ. ಮೊಹಮ್ಮದ್ ಶಮಿ ಅವರು 2022 ರ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದ ಬಳಿಕ ಟೀಮ್ ಇಂಡಿಯಾ ಪರ ಒಂದೇ ಒಂದು ಟಿ20 ಪಂದ್ಯವಾಡಿಲ್ಲ. ಅಡಿಲೇಡ್​ನಲ್ಲಿ ನಡೆದ ಟಿ20 ವಿಶ್ವಕಪ್​ನ ಸೆಮಿಫೈನಲ್​ನಲ್ಲಿ 3 ಓವರ್​ಗಳನ್ನು ಎಸೆದಿದ್ದ ಶಮಿ 39 ರನ್ ನೀಡಿ ದುಬಾರಿಯಾಗಿದ್ದರು. ಈ ಕಳಪೆ ಪ್ರದರ್ಶನದ ಬಳಿಕ ಅವರನ್ನು ಟಿ20 ತಂಡದ ಆಯ್ಕೆಗೆ ಪರಿಗಣಿಸಿರಲಿಲ್ಲ. ಅಲ್ಲದೆ ಏಕದಿನ ಮತ್ತು ಟೆಸ್ಟ್​ ತಂಡಗಳಲ್ಲಿ ಮಾತ್ರ ಸ್ಥಾನ ನೀಡಲಾಗುತ್ತಿತ್ತು. ಆದರೀಗ 790 ದಿನಗಳ ಬಳಿಕ ಮೊಹಮ್ಮದ್ ಶಮಿ ಅವರನ್ನು ಟಿ20 ತಂಡಕ್ಕೆ ಕರೆತರಲಾಗಿದೆ.

2023ರ ಏಕದಿನ ವಿಶ್ವಕಪ್‌ ನಲ್ಲಿ ಶಮಿ ಪಾದದ ಗಾಯಕ್ಕೆ ತುತ್ತಾಗಿದ್ರು. ಆ ಬಳಿಕ ಶಸ್ತ್ರ ಚಿಕತ್ಸೆಗೆ ಒಳಗಾಗಿದ್ರು. ಬಳಿಕ ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ರು. ಕೊನೆಗೆ ಬಿಸಿಸಿಐ ನೀಡಿದ್ದ ಟಾಸ್ಕ್ ಕಂಪ್ಲೀಟ್ ಮಾಡಿ ಟಿ20 ತಂಡ ಸೇರಿಕೊಂಡಿದ್ದಾರೆ. ಹೇಳಿ ಕೇಳಿ ಶಮಿ ಒಬ್ಬ ಶಿಸ್ತು ಬದ್ಧ ವೇಗದ ಬೌಲರ್‌. ಅಷ್ಟೇ ಅಲ್ಲ ಹಲವು ವೇರಿಯೇಷನ್‌ ಗಳಲ್ಲಿ ಬೌಲಿಂಗ್ ಮಾಡ್ತಾರೆ. ಸ್ವಿಂಗ್ ಬೌಲಿಂಗ್ ಮಾಡುವುದರಲ್ಲಿ ಎಕ್ಸ್​ಪರ್ಟ್. ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಅನ್ನೋದನ್ನ ಯುವ ಆಟಗಾರರಿಗೆ ಸಾಕಷ್ಟು ಸಲ ತೋರಿಸಿಕೊಟ್ಟಿದ್ದಾರೆ. ಇತ್ತೀಚಿಗೆ ಡೊಮೆಸ್ಟಿಕ್ ಕ್ರಿಕೆಟ್​ ಅಂಗಳಕ್ಕೆ ಇಳಿದಿದ್ದ ಶಮಿ ರಣಜಿ ಟ್ರೋಫಿ, ಸೈಯದ್ ಮುಷ್ತಾಕ್ ಅಲಿ ಟೂರ್ನಿ ಹಾಗೇ ವಿಜಯ್ ಹಜಾರೆಯಲ್ಲೂ ವಿಕೆಟ್​ಗಳನ್ನ ಬೇಟೆಯಾಡಿ ಭರ್ಜರಿ ಫಾರ್ಮ್​ಗೆ ಬಂದಿದ್ರು.

34 ವರ್ಷದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಜನವರಿ 22ರಿಂದ ಈಡನ್ ಗಾರ್ಡನ್ಸ್ ನಲ್ಲಿ ನಡೆಯಲಿರುವ ಮೊದಲನೇ ಟಿ-20 ಪಂದ್ಯದ ಮೂಲಕ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಶಮಿಯನ್ನ ಬಿಸಿಸಿಐ ಟಿ-20ಐ  ತಂಡಕ್ಕೆ ಸೆಲೆಕ್ಟ್ ಮಾಡಿರೋದು ಚಾಂಪಿಯನ್ಸ್ ಟ್ರೋಫಿ ಪೂರ್ವತಯಾರಿಗಾಗಿ ಅನ್ನೋ  ಚರ್ಚೆ ನಡೀತಿದೆ. ಏಕದಿನ ಸರಣಿಗೆ ಸೆಟಪ್ ಆಗ್ಲಿಕ್ಕೆ ಅಖಾಡಕ್ಕೆ ಇಳಿಸಲಾಗಿದೆ. ಈಗಾಗ್ಲೇ ಶಮಿ ಯಾರ್ಕರ್, ಸ್ಲೋವರ್ ಬಾಲ್ಸ್ ಹಾಗೇ ವೇರಿಯೇಷನ್ ಬೌಲಿಂಗ್​ನಲ್ಲೂ ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ. ಪವರ್ ಪ್ಲೇನಲ್ಲಿ ಅವ್ರ ಸ್ವಿಂಗ್ ಬೌಲಿಂಗ್ ತಂಡಕ್ಕೆ ತುಂಬಾನೇ ಪ್ಲಸ್ ಆಗುತ್ತೆ. ಶಮಿ ಕಮ್ ಬ್ಯಾಕ್​ನಿಂದಾಗಿ ಯಂಗ್ ಪೇಸರ್ಸ್ ಗೆ ಇನ್​ಸ್ಪಿರೇಷನ್ ನೀಡಲಿದೆ. ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾನಂತಹ ಆಟಗಾರರು ಶಮಿ ಗೈಡೆನ್ಸ್ ಪಡೆಯುವ ಮೂಲಕ ಕ್ಯೂಷಿಯಲ್ ಟೈಮ್​ನಲ್ಲಿ ಬೆಟರ್ ಪರ್ಫಾಮೆನ್ಸ್ ನೀಡಲು ಸಾಧ್ಯವಾಗುತ್ತೆ.

ಇನ್ನು ಶಮಿ ಈವರೆಗೆ 64 ಟೆಸ್ಟ್​, 101 ಏಕದಿನ, 23 ಟಿ20 ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ, ಟೆಸ್ಟ್​ ನಲ್ಲಿ 229 ವಿಕೆಟ್​, ಏಕದಿನದಲ್ಲಿ 195, ಟಿ20ಯಲ್ಲಿ 24 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಇದಷ್ಟೇ ಅಲ್ಲದೇ 110 ಐಪಿಎಲ್​ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಶಮಿ 127 ವಿಕೆಟ್​ ಉರುಳಿಸಿದ್ದಾರೆ. 11 ರನ್​ಗಳಿಗೆ 4 ವಿಕೆಟ್​ ಪಡೆದಿರುವುದು ಅವರ ಬೆಸ್ಟ್​ ಇನ್ನಿಂಗ್ಸ್​ ಆಗಿದೆ.

Shantha Kumari

Leave a Reply

Your email address will not be published. Required fields are marked *