ಚಾನ್ಸ್ ಸಿಗದೆ ಶಮಿ ನಿವೃತ್ತಿ – ಸೂರ್ಯವಂಶಿಗೆ ಕ್ಯಾಪ್ಟನ್ ಪಟ್ಟ

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು
ಟೀಮ್ ಇಂಡಿಯಾದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. 13 ವರ್ಷಗಳ ಸುದೀರ್ಘ ಟೆಸ್ಟ್ ವೃತ್ತಿಜೀವನಕ್ಕೆ ತೆರೆ ಎಳೆದಿರುವ ಶಮಿ, 64 ಪಂದ್ಯಗಳಲ್ಲಿ 229 ವಿಕೆಟ್ ಕಬಳಿಸಿದ್ದಾರೆ. ಗಾಯದ ಸಮಸ್ಯೆಗಳಿಂದಾಗಿ ಹಲವು ಬಾರಿ ತಂಡದಿಂದ ಹೊರಗುಳಿದಿದ್ದ ಶಮಿ, ಇನ್ನು ಮುಂದೆ ಏಕದಿನ ಮತ್ತು ಟಿ20 ಕ್ರಿಕೆಟ್ನಲ್ಲಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.
ಶಮಿ ಅವರ ನಿವೃತ್ತಿ ನಿರ್ಧಾರದ ಬೆನ್ನಲ್ಲೇ ಆಯ್ಕೆ ಸಮಿತಿಯ ಕಾರ್ಯವೈಖರಿ ಬಗ್ಗೆ ಮಾಜಿ ಕೋಚ್ ರವಿಶಾಸ್ತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ಅತ್ಯುತ್ತಮವಾಗಿ ಆಡಿರುವ ಆಟಗಾರನೊಬ್ಬ ವಿದಾಯ ಹೇಳುತ್ತಿರುವುದು ಬೇಸರದ ಸಂಗತಿ. ಅವರಿಂದ ಇನ್ನೂ 30ರಿಂದ 40 ವಿಕೆಟ್ಗಳನ್ನು ನಿರೀಕ್ಷಿಸಬಹುದಿತ್ತು. ಫಿಟ್ನೆಸ್ ಸರಿಯಿಲ್ಲ ಎಂಬ ವರದಿಗಳನ್ನು ಕೇಳಿದ್ದೇನೆ. ಆದರೆ ಅವರು ಬಂಗಾಳ ಪರ ಪ್ರತಿ ಪಂದ್ಯವನ್ನೂ ಆಡುತ್ತಿದ್ದರು. 15ರಿಂದ 20 ಓವರ್ಗಳನ್ನು ಬೌಲಿಂಗ್ ಮಾಡುತ್ತಿದ್ದರು. ತಮ್ಮ ಫಿಟ್ನೆಸ್ ಸಾಬೀತುಪಡಿಸಲು ಆಟಗಾರ ಇನ್ನೇನು ಮಾಡಬೇಕು? ಎಂದು ರವಿಶಾಸ್ತ್ರಿ, ಆಯ್ಕೆ ಸಮಿತಿ ಮೇಲೆ ಕಿಡಿಕಾರಿದ್ದಾರೆ.
ಭಾರತೀಯ ಕ್ರಿಕೆಟ್ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿಗೆ ಬಿಹಾರ ತಂಡದ ನಾಯಕತ್ವ ನೀಡಲಾಗಿದೆ. ಕೇವಲ 15ನೇ ವಯಸ್ಸಿನಲ್ಲೇ ಹಿರಿಯರ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿರುವುದು ವಿಶೇಷ. ಮುಂಬರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆರಂಭಿಕ ಎರಡು ಪಂದ್ಯಗಳಿಗೆ ಬಿಹಾರ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ಗಮನ ಸೆಳೆದಿದ್ದ ವೈಭವ್ ಇದೀಗ ನಾಯಕತ್ವದಲ್ಲೂ ತಮ್ಮ ಸಾಮರ್ಥ್ಯ ತೋರಿಸಲು ಸಜ್ಜಾಗಿದ್ದಾರೆ.
ಅಂಡರ್-19 ಏಷ್ಯಾಕಪ್ನಲ್ಲಿ ನೇಪಾಳ ವಿರುದ್ಧ ಭಾರತ ತಂಡ ಭರ್ಜರಿ ಜಯ ದಾಖಲಿಸಿದೆ. ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅಜೇಯ 70 ರನ್ ಸಿಡಿಸಿದರೆ, ಲಕ್ಷ್ಯ ರೈಚಂದಾನಿ 53 ರನ್ ಗಳಿಸಿದರು. ನೇಪಾಳ ನೀಡಿದ್ದ 129 ರನ್ಗಳ ಗುರಿಯನ್ನು ಭಾರತ ಕೇವಲ 19.1 ಓವರ್ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ತಲುಪಿತು.
ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ವೈಷ್ಣವಿ ಶರ್ಮಾ ದೇಶಿ ಕ್ರಿಕೆಟ್ನಲ್ಲಿ ನಂಬಲಾಗದ ಅದ್ಭುತ ದಾಖಲೆಯೊಂದನ್ನು ಬರೆದಿದ್ದಾರೆ. ಬಿಸಿಸಿಯ ಸೀನಿಯರ್ ವುಮೆನ್ ಟಿ20 ಟ್ರೋಫಿಯಲ್ಲಿ ಮಧ್ಯಪ್ರದೇಶ ತಂಡದ ಪರ ಆಡುತ್ತಿರುವ ವೈಷ್ಣವಿ, ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಟಿ20 ಇತಿಹಾಸದಲ್ಲಿ ಸತತ 4 ವಿಕೆಟ್ ಪಡೆದ 2ನೇ ಬೌಲರ್ ಎಂಬ ದಾಖಲೆಗೆ ವೈಷ್ಣವಿ ಪಾತ್ರರಾಗಿದ್ದಾರೆ.
ಭಾರತೀಯ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ತಂಡದಲ್ಲಿನ ಪಾತ್ರದ ಕುರಿತು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತನಾಡಿದ್ದಾರೆ. ಹಾರ್ದಿಕ್ ಅವರ ಸಾಮರ್ಥ್ಯವನ್ನು ಮೆಚ್ಚಿಕೊಂಡರೂ, ಅವರ ಅನುಪಸ್ಥಿತಿಯನ್ನು ತಂಡ ಇತರ ಆಟಗಾರರ ಮೂಲಕ ನಿಭಾಯಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹೇಳಿಕೆ ಇದೀಗ ಕ್ರಿಕೆಟ್ ಅಭಿಮಾನಿಗಳ ನಡುವೆ ಚರ್ಚೆಗೆ ಕಾರಣವಾಗಿದೆ.
ನ್ಯೂಝಿಲೆಂಡ್ ಎ ವಿರುದ್ಧದ 3ನೇ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಯಶಸ್ವಿ ಜೈಸ್ವಾಲ್ ಕೇವಲ 127 ಎಸೆತಗಳಲ್ಲಿ ಶತಕ ಪೂರೈಸಿದರು. ಆದರೆ ಶತಕದ ಬೆನ್ನಲ್ಲೇ ಭರ್ಜರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಹೀಗೆ ವಿಕೆಟ್ ಒಪ್ಪಿಸುವ ಮುನ್ನ ಜೈಸ್ವಾಲ್ 138 ಎಸೆತಗಳಲ್ಲಿ 2 ಭರ್ಜರಿ ಸಿಕ್ಸರ್ ಹಾಗೂ 16 ಫೋರ್ಗಳೊಂದಿಗೆ 102 ರನ್ ಬಾರಿಸಿದ್ದಾರೆ.
ಆರ್ಸಿಬಿ ಬ್ಯಾಟರ್ ವೆಂಕಟೇಶ್ ಅಯ್ಯರ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ತಂಡ ಬಿಟ್ಟರು ಕೆಕೆಆರ್ ಅಭಿಮಾನಿಗಳ ಟೀಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಟ್ರೋಲ್ಗಳು ನಿಂತಿಲ್ಲ. ಗಿಲ್ ಶತಕ ಹೊಡೆದಾಗೆಲ್ಲಾ ನನ್ನ ಟ್ರೋಲ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಹಾಗೇ ಆರ್ಸಿಬಿ ಬಗ್ಗೆ ಹೊಗಳಿದ ಅಯ್ಯರ್ ‘ನಾನು ಹೇಳಿದರೆ ನೀವು ನಂಬುವುದಿಲ್ಲ. ಪಂದ್ಯ ಆರಂಭಕ್ಕೂ ಮುನ್ನ ಕೆಲವರು ಆರ್ಸಿಬಿ ಜೆರ್ಸಿಯನ್ನು ಪೂಜೆ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ. ಆರ್ಸಿಬಿ ಫ್ಯಾನ್ಸ್ ಅಭಿಮಾನಕ್ಕೆ ನಾನು ಫಿದಾ ಆಗಿದ್ದಾನೆ ಎಂದಿದ್ದಾರೆ.
ಸೂರ್ಯಕುಮಾರ್ ಯಾದವ್ ಕುಟುಂಬ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಪುಟ್ಟ ಬಾಲಕಿ ಮೋದಿ ಮುಂದೆ ಕನ್ನಡದಲ್ಲಿ ಗಣಪತಿ ಭಜನೆ ಹಾಡಿ ಗಮನಸೆಳೆದಿದ್ದಾರೆ. ಬಾಲಕಿ ಭಜನೆಗೆ ಮೋದಿ ತಾಳ ತಟ್ಟಿ ಪ್ರೋತ್ಸಾಹಿಸಿದ್ದಾರೆ. ಈ ವಿಡಿಯೋವನ್ನು ಖುದ್ದು ಮೋದಿ ಹಂಚಿಕೊಂಡಿದ್ದಾರೆ. ಈ ಬಾಲಕ ಸೂರ್ಯಕುಮಾರ್ ಯಾದವ್ ಅವರ ಹೆಂಡತಿಯ ಸಂಬಂಧಿ ಆಗಿದ್ದಾರೆ.
2018ರ ಆಸ್ಟ್ರೇಲಿಯಾ ತಂಡದ ಬಾಲ್ ಟ್ಯಾಂಪರಿಂಗ್ ವಿವಾದ ಮತ್ತೆ ಸುದ್ದಿಯಾಗಿದೆ. ಮಾಜಿ ಆಟಗಾರ ಉಸ್ಮಾನ್ ಖವಾಜಾ ತಮ್ಮ ಆತ್ಮಕಥನದಲ್ಲಿ ಈ ಪ್ರಕರಣದ ಬಗ್ಗೆ ಹೊಸ ಆರೋಪ ಮಾಡಿದ್ದಾರೆ. ಆ ವಿವಾದದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೆವು. ಬ್ಯಾಟರ್ಗಳಲ್ಲ, ಬೌಲರ್ಗಳಲ್ಲ, ಸಿಬ್ಬಂದಿಗಳೂ ಅಲ್ಲ ನಮ್ಮ ಇಡೀ ತಂಡವೇ ಅದರಲ್ಲಿ ಶಾಮೀಲಾಗಿತ್ತು ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.

ನೋಡಿರಿ

