ಶಮಿ ಕೆರಿಯರ್ ಮುಗಿಸಿತಾ BCCI? – ಚಾನ್ಸ್ ಸಿಗದೆ ನಿವೃತ್ತಿ ಘೋಷಿಸ್ತಾರಾ?
ಟಾರ್ಗೆಟ್ ಮಾಡಿದ್ರಾ ಗಂಭೀರ್?

ಶಮಿ ಕೆರಿಯರ್ ಮುಗಿಸಿತಾ BCCI? – ಚಾನ್ಸ್ ಸಿಗದೆ ನಿವೃತ್ತಿ ಘೋಷಿಸ್ತಾರಾ?ಟಾರ್ಗೆಟ್ ಮಾಡಿದ್ರಾ ಗಂಭೀರ್?

ಐಪಿಎಲ್​ ಫೀವರ್ ನಡುವೆ ಭಾರತ ತಂಡದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ನಿವೃತ್ತಿ ಬಾಂಬ್ ಸಿಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗಿಟ್ಟಿರೋ ಬಿಸಿಸಿಐ ವಿರುದ್ಧ ಸಿಟ್ಟಾಗಿರೋ ವೇಗಿ ಕ್ರಿಕೆಟ್ ಕರಿಯರ್​​ನೇ ಎಂಡ್ ಮಾಡಿಕೊಳ್ಳೋ ಹಿಂಟ್ ಕೊಟ್ಟಿದ್ದಾರೆ. ಮೊಹಮ್ಮದ್ ಶಮಿ. ಭಾರತ ತಂಡದ ಸ್ಟಾರ್ ಬೌಲರ್. 2023ರ ಏಕದಿನ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ್ದ ಆಟಗಾರ. ಕೆರಿಯರ್​ನ ಪೀಕ್​ನಲ್ಲಿ ಇದ್ದಾಗ್ಲೇ ಇಂಜುರಿ ಭೂತ ಅವ್ರ ಬೆನ್ನೇರಿತ್ತು. ಇನ್ನೇನು ರಿಕವರ್ ಆಗಿ ಬಂದ್ರು ಅನ್ನುವಷ್ಟರಲ್ಲೇ ಟೀಂ ಇಂಡಿಯಾ ಕೋಚ್ ಚೇಂಜ್ ಆದ್ರು. ಅಂದಿನಿಂದ ಚಾನ್ಸ್​​ಗಾಗಿ ಕಾದಿದ್ದೇ ಬಂತು. 2025ರ ಆರಂಭದಲ್ಲಿ ಅವಕಾಶ ಕೊಟ್ರೂ ಆ ನಂತ್ರದಲ್ಲಿ ಮತ್ತದೇ ನಿರ್ಲಕ್ಷ್ಯ. ಹೀಗೆ ಬಿಸಿಸಿಐ ತಮ್ಮ ಆಯ್ಕೆ ಬಗ್ಗೆ ತೋರುತ್ತಿರೋ ನಿರಾಸಕ್ತಿ ಬಗ್ಗೆ ಮೊಹಮ್ಮದ್ ಶಮಿ ಬೇಸತ್ತು ಹೋಗಿದ್ದಾರೆ.

ಇದನ್ನೂ ಓದಿ : RR ಬೌಲಿಂಗ್ ಬ್ರಹ್ಮಾಸ್ತ್ರ ಬ್ರಿಜೇಶ್ – ಚೊಚ್ಚಲ ಮ್ಯಾಚಲ್ಲೇ ಚೆನ್ನೈಗೆ ಪಂಚ್!

ನನಗೆ ಬೋರ್ ಅನಿಸಿದಾಗ ನಿವೃತ್ತಿ ಎಂದ ಶಮಿ!

ಶುಭಂಕರ್ ಮಿಶ್ರಾ ಅವ್ರ ಶೋನಲ್ಲಿ ಕಾಣಿಸಿಕೊಂಡಿದ್ದ ಶಮಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವ ಬಗ್ಗೆ ಮಾತ್ನಾಡಿದ್ದಾರೆ. ನನಗೆ ಬೋರ್ ಅನಿಸಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.  ಸದ್ಯಕ್ಕೆ ಆ ಯೋಚನೆ ಮಾಡಿಲ್ಲ. ಇಂಥಾ ಥಾಟ್ಸ್ ಬಂದಾಗ ನಿಮ್ಮನ್ನು ಕೆಳಗೆ ಎಳೆಯುತ್ತವೆ. ಆಗ ನೀವು ಆಯಾಸಗೊಂಡಿದ್ದೀರಿ ಅಂತಾ ಅರ್ಥ. ಹೀಗಾಗಿ ನಾನು ಬೇಸರಗೊಂಡ ದಿನ ಕ್ರಿಕೆಟ್ ಬಿಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಆಯ್ಕೆ ಸಮಿತಿಗೂ ಟಾಂಟ್ ಕೊಟ್ಟಿದ್ದಾರೆ. ಯಾರೂ ಬಂದು ನನ್ನ ಅಂಕಿ-ಅಂಶಗಳನ್ನು ಹೊಗಳಬೇಕಿಲ್ಲ. ನಿಮ್ಮಲ್ಲಿ ಸಾಮರ್ಥ್ಯ ಇದ್ದರೆ, ಯಾಕೆ ಅಂಕಿಅಂಶಗಳನ್ನು ನೋಡಿ ಅಳೆಯಬೇಕು? ನನ್ನ ಐಪಿಎಲ್ ರೆಕಾರ್ಡ್ಸ್ ನೋಡಿ, ಕಳೆದ 5-6 ವರ್ಷಗಳಲ್ಲಿ ಯಾವ ಭಾರತೀಯ ಬೌಲರ್ ಆದ್ರೂ ನನ್ನ ರೆಕಾರ್ಡ್ ಹತ್ತಿರ ಬಂದಿದ್ದಾರಾ? ಆದರೂ ನಾನು ಟಿ20 ಬೌಲರ್ ಅಲ್ಲ ಅಂತಾರೆ. ಕಳೆದ ಕೆಲವು ವರ್ಷಗಳಲ್ಲಿ ನಾನು 130 ವಿಕೆಟ್ ಪಡೆದಿದ್ದೇನೆ. ನಿಮಗೆ ಇನ್ನೇನು ಬೇಕು? ಎಂದು ಶಮಿ ಪ್ರಶ್ನಿಸಿದ್ದಾರೆ. ಅಲ್ದೇ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕೇವಲ 7 ಪಂದ್ಯಗಳಿಂದ 16 ವಿಕೆಟ್ ಪಡೆದಿದ್ದರು. ಆದರೂ, 2026ರ ಟಿ20 ವಿಶ್ವಕಪ್ ತಂಡದಲ್ಲಿ ಹರ್ಷಿತ್ ರಾಣಾ ಬದಲಿಗೆ ಆಯ್ಕೆ ಸಮಿತಿಯು ಮೊಹಮ್ಮದ್ ಸಿರಾಜ್ ಅವರನ್ನು ಆಯ್ಕೆ ಮಾಡಿತು. ಇನ್ನು ಶಮಿ 2025-26ರ ದೇಶೀಯ ಆವೃತ್ತಿಯಲ್ಲಿ ಬಂಗಾಳ ಪರ 67 ವಿಕೆಟ್‌ಗಳನ್ನು ಕಬಳಿಸಿದ್ದರು.

ಬಿಸಿಸಿಐ ನಿರ್ಧಾರಕ್ಕೆ ನಿಗಿನಿಗಿ ಕೆಂಡವಾದ ಶಮಿ!

2023ರ ಏಕದಿನ ವಿಶ್ವಕಪ್ ಬಳಿಕ ಶಮಿ  2025ರಲ್ಲಿ ಭಾರತದ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡದ ಭಾಗವಾಗಿದ್ದರು. ಆ ನಂತ್ರ ಟೀಂ ಇಂಡಿಯಾ ಪರ ಕಾಣಿಸಿಕೊಂಡಿಲ್ಲ. ಪೂರ್ಣ ಫಿಟ್‌ನೆಸ್‌ ಸಾಧಿಸಿದ್ರು ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಶಮಿಯನ್ನು ಕಡೆಗಣಿಸಿದೆ. ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸರಣಿ ಹಾಗೇ ಟಿ20 ವಿಶ್ವಕಪ್‌ಗೂ ಆಯ್ಕೆಮಾಡಲಾಗಿಲ್ಲ. ಇನ್ನು ಉತ್ತಮ ಫಾರ್ಮ್​ನಲ್ಲಿ ಇದ್ರೂ ಅಜಿತ್ ಅಗರ್ಕರ್ ನೇತೃತ್ವದ ಸಮಿತಿ ಶಮಿಯನ್ನು ಕೈಬಿಟ್ಟಿತ್ತು. ಅಗರ್ಕರ್ ವಿರುದ್ಧ ಶಮಿ ಮಾಡಿದ ಬಹಿರಂಗ ಹೇಳಿಕೆಗಳೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅದೂ ಅಲ್ದೇ ಗೌತಮ್ ಗಂಭೀರ್ ಕೋಚ್ ಆದ್ಮೇಲೆ ಶಮಿಯನ್ನ ಟಾರ್ಗೆಟ್ ಮಾಡಿದ್ರಾ ಅನ್ನೋ ಮಾತುಗಳೂ ಇವೆ. ಕಳೆದ ವರ್ಷದ ಆರಂಭದಲ್ಲಿ ಅವಕಾಶ ಕೊಟ್ಟಿದ್ದು ಬಿಟ್ರೆ ಆ ನಂತ್ರದಲ್ಲಿ ಸ್ಥಾನ ನೀಡಿಲ್ಲ. ಅದೂ ಅಲ್ದೇ ಯಂಗ್​ಸ್ಟರ್​ಗಳ ಟೀಂ ಕಟ್ಟಬೇಕು ಅನ್ನೋ ಗಂಭೀರ್ ಅಜೆಂಡಾ ಕೂಡ ಶಮಿಗೆ ಚಾನ್ಸ್ ತಪ್ಪಿಸಿರೋ ಆರೋಪವೂ ಇದೆ. ಸದ್ಯ ಡೊಮೆಸ್ಟಿಕ್ ಮತ್ತು ಐಪಿಎಲ್​ನಲ್ಲಿ ಮಾತ್ರ ಶಮಿ ಕಾಣಿಸಿಕೊಳ್ತಿದ್ದಾರೆ. ಶಮಿ ಐಪಿಎಲ್ ಜರ್ನಿ ನೋಡೋದಾದ್ರೆ 2013ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೂಲಕ ಐಪಿಎಲ್ ಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಶಮಿ ಅವರು ಈವರಗೆ ಒಟ್ಟು 5 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಲಖನೌ ಸೂಪರ್ ಜೈಂಟ್ಸ್ ಅವರು ಪ್ರತಿನಿಧಿಸುತ್ತಿರುವ ಆರನೇ ತಂಡವಾಗಿದೆ. ಐಪಿಎಲ್ ನಲ್ಲಿ ಆಡಿರುವ ಒಟ್ಟು 119 ಪಂದ್ಯಗಳಿಂದ ಅರು ಒಟ್ಟು 123 ವಿಕೆಟ್ ಗಳನ್ನು ಕಬಳಿಸಿದ್ದಾರೆ.  ಈ ಆವೃತ್ತಿಯಲ್ಲೂ ಸಾಕಷ್ಟು ಎಕ್ಸ್​ಪೆಕ್ಟೇಷನ್ಸ್ ಇದೆ.

Shantha Kumari