ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚಾ – ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆಗಳೇನು..?

ವಿದ್ಯಾರ್ಥಿಗಳ ಜೊತೆ ಪರೀಕ್ಷಾ ಪೆ ಚರ್ಚಾ – ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಸಲಹೆಗಳೇನು..?

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದಿದ್ದು, ಮುಂದಿನ ತಿಂಗಳಿಂದ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಆರಂಭವಾಗಲಿವೆ. ಹೀಗಾಗಿ ಪ್ರತೀವರ್ಷದಂತೆ ಈ ವರ್ಷವೂ ಪ್ರಧಾನಿ ಮೋದಿ ವಿದ್ಯಾರ್ಥಿಗಳ ಜೊತೆ ‘ಪರೀಕ್ಷಾ ಪೆ ಚರ್ಚಾ’ ನಡೆಸಿದ್ರು. ಪರೀಕ್ಷೆಗಳಿಗೆ ಹೇಗೆ ಸಜ್ಜಾಗಬೇಕು. ಪರೀಕ್ಷೆಯನ್ನ ಹೇಗೆ ಎದುರಿಸಬೇಕು. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸೋಕೆ ಏನು ಮಾಡಬೇಕು ಎಂದು ಸಂವಾದ ನಡೆಸಿದ್ರು.

ಇದನ್ನೂ ಓದಿ : ‘ಪತಿ ಹೆಚ್.ಡಿ ರೇವಣ್ಣ ವಿರುದ್ಧ ಪತ್ನಿ ಭವಾನಿ ಸ್ಪರ್ಧೆ’ – ಟಿಕೆಟ್ ಆಫರ್.. ಏನಿದು ಪಾಲಿಟಿಕ್ಸ್..!?  

ಈ ವರ್ಷ 38 ಲಕ್ಷ ವಿದ್ಯಾರ್ಥಿಗಳು ಪರೀಕ್ಷಾ ಪೆ ಚರ್ಚಾಗೆ ರಿಜಿಸ್ಟರ್ ಮಾಡಿಸಿಕೊಂಡಿದ್ರು. ಪರೀಕ್ಷಾ ಪೆ ಚರ್ಚಾದ 6ನೇ ಆವೃತ್ತಿಯಲ್ಲಿ ಹಲವು ವಿಚಾರಗಳ ಕುರಿತು ಸಂವಾದ ನಡೆಸಲಾಯ್ತು. ಇಂದಿನ ಶಿಕ್ಷಣ, ವಿದ್ಯಾರ್ಥಿಗಳ ಸ್ವಭಾವ, ಮನೆಯಲ್ಲಿ ಪೋಷಕರ ಸ್ವಭಾವಗಳು, ಯಾವ ರೀತಿ ಸಮಸ್ಯೆಗಳು ಇರುತ್ತವೆ ಎಂಬುದರ ಬಗ್ಗೆ ಚರ್ಚೆ ನಡೆಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಕೆಲವು ಕಿವಿಮಾತುಗಳನ್ನು ತಿಳಿಸಿದ್ರು.

ಹಲವು ವಿಚಾರಗಳ ಬಗ್ಗೆ ಚರ್ಚಿಸಿದ ಪ್ರಧಾನಿ ಸಮಯದ ನಿರ್ವಹಣೆ ಬಗ್ಗೆ ತಿಳಿಸಲು ತಾಯಿಯನ್ನ ಉದಾಹರಣೆಯಾಗಿ ನೀಡಿದ್ರು. ಒಬ್ಬ ತಾಯಿಯಾದವಳು ತಾನು ಸಾಕಷ್ಟು ಕೆಲಸ ಮಾಡುತ್ತಿದ್ದರೂ ಸುಸ್ತಾಯಿತು ಅನ್ನಲ್ಲ. ನಿಮ್ಮ ತಾಯಿಯನ್ನು ನೋಡಿ ಸಮಯದ ನಿರ್ವಹಣೆ ಹೇಗೆ ಮಾಡಬೇಕೆಂದು ಕಲಿತುಕೊಳ್ಳಿ ಎಂದು ಮೋದಿ ಮಕ್ಕಳಿಗೆ ಕಿವಿಮಾತು ಹೇಳಿದರು. ಇದೇ ವೇಳೆ  ಮಕ್ಕಳ ಮೇಲೆ ಒತ್ತಡ ಹಾಕದಂತೆ ಪೋಷಕರಿಗೂ ಕಿವಿಮಾತು ಹೇಳಿದರು. .

ಶಿಕ್ಷಣ ಸಚಿವಾಲಯವು ನಡೆಸುವ ಪರೀಕ್ಷಾ ಪೆ ಚರ್ಚಾದ ಆರನೇ ಆವೃತ್ತಿಯನ್ನ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ  ಆಯೋಜಿಸಲಾಗಿತ್ತು. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು, ಆಯ್ದ ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು.

suddiyaana