ಸ್ಯಾಂಡಲ್ ​ವುಡ್ ಸ್ಟಾರ್ಸ್, ಕ್ರಿಕೆಟರ್ಸ್ ಜೊತೆ ಮೋದಿ ಡಿನ್ನರ್ – ಔತಣಕೂಟದ ಹಿಂದಿದ್ಯಾ ಚುನಾವಣಾ ತಂತ್ರ..!?

ಸ್ಯಾಂಡಲ್ ​ವುಡ್ ಸ್ಟಾರ್ಸ್, ಕ್ರಿಕೆಟರ್ಸ್ ಜೊತೆ ಮೋದಿ ಡಿನ್ನರ್ – ಔತಣಕೂಟದ ಹಿಂದಿದ್ಯಾ ಚುನಾವಣಾ ತಂತ್ರ..!?

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇವತ್ತಿನಿಂದ ಏರ್ ಶೋ ಶುರುವಾಗಿದೆ. ಏರೋ ಇಂಡಿಯಾ 2023ಕ್ಕೆ ಮೋದಿ ಚಾಲನೆ ನೀಡಿದ್ದಾರೆ. ಬಾನ ತುಂಬೆಲ್ಲಾ ಯುದ್ಧ ವಿಮಾನಗಳ ಸಾಹಸ ಪ್ರದರ್ಶನ ನಡೀತಿದೆ. ಆದ್ರೆ ಏರ್ ಶೋಗಿಂತ ನಿನ್ನೆ ರಾತ್ರಿಯ ಮೋದಿ ಡಿನ್ನರ್ ಬಗ್ಗೆಯೇ ಹೆಚ್ಚು ಸುದ್ದಿಯಾಗ್ತಿದೆ.

ಇದನ್ನೂ ಓದಿ : ಸಂಸತ್ತಿನಲ್ಲಿ ಮೋದಿ ಟೀಕಿಸಿದ್ದ ರಾಹುಲ್ ಗಾಂಧಿಗೆ ನೋಟಿಸ್ – ಬುಧವಾರದ ಡೆಡ್ ಲೈನ್ ನೀಡಿದ್ದೇಕೆ..!?

ಇಂದಿನಿಂದ ಬೆಂಗಳೂರಿನಲ್ಲಿ ಏರ್ ಶೋ ಶುರುವಾಗಿದ್ದು, ಏರ್ ಇಂಡಿಯಾ-2023ಕ್ಕೆ ಚಾಲನೆ ನೀಡಲು ಪ್ರಧಾನಿ ಮೋದಿ ನಿನ್ನೆಯೇ ಬೆಂಗಳೂರಿಗೆ ಆಗಮಿಸಿದ್ದರು. ನಿನ್ನೆ ರಾತ್ರಿ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದು, ರಾತ್ರಿಯ ಔತಣಕೂಟಕ್ಕೆ ಸ್ಯಾಂಡಲ್​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳನ್ನು ಆಹ್ವಾನಿಸಲಾಗಿತ್ತು.

ಚಿತ್ರರಂಗದಿಂದ ನಟ ಯಶ್‌, ಅಶ್ವಿನಿ ಪುನೀತ್ ರಾಜಕುಮಾರ್​, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್‌ಗೆ ಆಹ್ವಾನ ನೀಡಲಾಗಿತ್ತು. ಹಾಗೇ ಕ್ರಿಕೆಟ್ ಕ್ಷೇತ್ರದಿಂದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್​ ಕುಂಬ್ಳೆ ದಂಪತಿ, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆಗೆ ಆಹ್ವಾನಿಸಲಾಗಿತ್ತು. ಅಲ್ಲದೇ ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಭಾಗಿಯಾಗಿದ್ದರು. ಜೊತೆಗೆ ಈ ಗಣ್ಯರ ಜೊತೆ ಮೋದಿ ಸಂವಾದ ಕೂಡ ನಡೆಸಿದ್ದಾರೆ.

ಔತಣಕೂಟದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್​ ಪ್ರಧಾನಮಂತ್ರಿ ಮೋದಿ ಜೊತೆ ಕೆಲ ಬಿಜೆಪಿ ನಾಯಕರು ಪಾಲ್ಗೊಂಡಿದ್ದರು. 2023 ವರ್ಷ ಆರಂಭವಾದಾಗಿನಿಂದ ಪ್ರಧಾನಿ ಮೋದಿ 4ನೇ ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಚುನಾವಣಾ ಹೊಸ್ತಿಲಿನಲ್ಲಿ, ಪ್ರಧಾನಿಯವರ ರಾಜ್ಯ ಪ್ರವಾಸ ಸಂಚಲನ ಮೂಡಿಸಿದೆ. ಇದೀಗ ಸ್ಯಾಂಡಲ್​ವುಡ್​, ಕ್ರಿಕೆಟ್ ಕ್ಷೇತ್ರ​ ಮತ್ತು ಉದ್ಯಮಿಗಳ ಕ್ಷೇತ್ರದವರ ಜೊತೆ ಔತಣಕೂಟ ಏರ್ಪಡಿಸಿರೋದು ಕುತೂಹಲ ಮೂಡಿಸಿದೆ.

 

suddiyaana