ಬಲಿಪ ನಾರಾಯಣ ಭಾಗವತರ ಅಗಲಿಕೆಗೆ ಮೋದಿ ಸಂತಾಪ

ಬಲಿಪ ನಾರಾಯಣ ಭಾಗವತರ ಅಗಲಿಕೆಗೆ ಮೋದಿ ಸಂತಾಪ

ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ ಖ್ಯಾತರಾದ ಬಲಿಪ ನಾರಾಯಣ ಭಾಗವತರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಯಕ್ಷಲೋಕದಿಂದ ಮರೆಯಾದ ಬಲಿಪ ನಾರಾಯಣರ ಅವರ ಅಗಲಿಕೆಗೆ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ‘ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಹಿನ್ನೆಲೆ ಗಾಯನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಶೈಲಿಯಿಂದ ಮೆಚ್ಚುಗೆ ಪಡೆದರು. ಅವರ ಕೃತಿಗಳನ್ನು ಮುಂದಿನ ಪೀಳಿಗೆಯವರು ಮೆಚ್ಚುತ್ತಾರೆ. ಅವರ ನಿಧನದಿಂದ ನೋವಾಗಿದೆ ಎಂದು ಮೋದಿ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  ಯಕ್ಷಲೋಕದಿಂದ ಮರೆಯಾದ ಬಲಿಪ ನಾರಾಯಣ ಭಾಗವತ – ಕಂಚಿನ ಕಂಠದ ಯಕ್ಷ ದಿಗ್ಗಜ ಇನ್ನು ನೆನಪು ಮಾತ್ರ

ಬಲಿಪ ನಾರಾಯಣ ಭಾಗವತರ ನಿವಾಸಕ್ಕೆ ಆಗಮಿಸಿದ ಅಭಿಮಾನಿಗಳು ಮತ್ತು ಯಕ್ಷಗಾನ ಕಲಾವಿದರು ಯಕ್ಷ ದಿಗ್ಗಜನಿಗೆ ಅಂತಿಮ ನಮನ ಸಲ್ಲಿಸಿದರು. ಸುಮಾರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ನಾರಾಯಣ ಭಾಗವತರು ಯಕ್ಷಲೋಕದಿಂದ ಮರೆಯಾಗಿರುವುದು ನಿಜಕ್ಕೂ ನೋವಿನ ಸಂಗತಿಯೇ ಸರಿ.

suddiyaana