‘ನಾರಿಶಕ್ತಿ’ಗಾಗಿ ಉಳಿತಾಯ ಮಂತ್ರ – ಸಣ್ಣ ಕೈಗಾರಿಕೆ, ಕರಕುಶಲ ಕರ್ಮಿಗಳಿಗೂ ‘ನಮೋ’ ಬಲ!

‘ನಾರಿಶಕ್ತಿ’ಗಾಗಿ ಉಳಿತಾಯ ಮಂತ್ರ – ಸಣ್ಣ ಕೈಗಾರಿಕೆ, ಕರಕುಶಲ ಕರ್ಮಿಗಳಿಗೂ ‘ನಮೋ’ ಬಲ!

ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ಮಹಿಳೆಯರ ಸಬಲೀಕರಣಕ್ಕೂ ಹೆಚ್ಚು ಒತ್ತು ನೀಡಲಾಗಿದೆ. ಹಾಗೇ ಸಣ್ಣ ಉದ್ಯಮಿದಾರರನ್ನ ಉತ್ತೇಜಿಸುವ ನಿಟ್ಟಿನಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಘೋಷಣೆ ಮಾಡಿದ್ದಾರೆ. ಜೊತೆಗೆ ಕರಕುಶಲ ಕರ್ಮಿಗಳಿಗೂ ನೆರವು ಸಿಗಲಿದೆ.

ಮಹಿಳೆಯರ ಸಬಲೀಕರಣಕ್ಕೆ ಒತ್ತು

– 2 ವರ್ಷದ ಅವಧಿಯ ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಯೋಜನೆ ಜಾರಿ

– ಠೇವಣಿ ಇಡುವ ಮಹಿಳೆಯರಿಗೆ ಶೇ 7.5ರಷ್ಟು ಬಡ್ಡಿ ಯೋಜನೆ

–  ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಠೇವಣಿ

– ಯೋಜನೆಯು ಭಾಗಶಃ ಹಿಂಪಡೆಯುವ ಸೌಲಭ್ಯ, ಗರಿಷ್ಠ 2 ಲಕ್ಷ ರೂ. ಠೇವಣಿ ಇಡಲು ಅವಕಾಶ

– ಸ್ವಾತಂತ್ರ್ಯದ ಶತಮಾನದ ವೇಳೆಗೆ ಹೆಣ್ಣು ಮಕ್ಕಳ ಆರ್ಥಿಕ ಸುಧಾರಣೆಗೆ ಹಾಗೂ ಗ್ರಾಮೀಣ ಮಹಿಳೆಯರ ಆರ್ಥಿಕತೆ ಸುಧಾರಣೆಗೆ ‘ದೀನ್ ದಯಾಳ್ ಉಪಾಧ್ಯ’ ಯೋಜನೆ ಜಾರಿ

ಸಣ್ಣ ಕೈಗಾರಿಕೆಗಳಿಗೆ ‘ಸಾಲ’ದ ಸಪೋರ್ಟ್!

ಸಣ್ಣ ಕೈಗಾರಿಕೆಗಳಿಗೆ ಸಾಲ ಸೌಲಭ್ಯ ಯೋಜನೆ

ಸಣ್ಣ ಕೈಗಾರಿಕೆಗಳಿಗೆ 9 ಸಾವಿರ ಕೋಟಿ ರೂ.ವರೆಗೆ ಸಾಲ ಸೌಲಭ್ಯ

ಸಣ್ಣ ಕೈಗಾರಿಕೆಗಳ ಸಾಲದ ಮೇಲಿನ ಬಡ್ಡಿ ದರ ಶೇ.1ರಷ್ಟು ಇಳಿಕೆ

ಶೇಕಡಾ 95ರಷ್ಟು ಮುಟ್ಟುಗೋಲು ಹಾಕಿಕೊಂಡಿದ್ದ ಹಣ ವಾಪಸ್

‘ವಿವಾದ್ ಸೇ ವಿಶ್ವಾಸ್’ ಯೋಜನೆಯಡಿ ಹಣ ವಾಪಸ್

ಕರಕುಶಲ ಕರ್ಮಿಗಳಿಗೆ ಸ್ಪೆಷಲ್ ಪ್ಯಾಕೇಜ್

ಕರಕುಶಲ ಕರ್ಮಿಗಳಿಗಾಗಿ ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್ ಯೋಜನೆ

ಕುಶಲ ಕರ್ಮಿಗಳಿಗಾಗಿ ವಿಶೇಷ ಪ್ಯಾಕೇಜ್ ಘೋಷಣೆ

ಗುಣಮಟ್ಟದ ಹೆಚ್ಚಿನ ಸಂಖ್ಯೆಯ ಕರಕುಶಲ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ

ಎಸ್​ಸಿ/ಎಸ್​ಟಿ, ಹಿಂದುಳಿದ ವರ್ಗಗಳಿಗೆ ಹೆಚ್ಚು ಸಹಾಯಕ

 

suddiyaana