ಮೋದಿ ಹೋದಲ್ಲೆಲ್ಲಾ ತಜ್ಞರಾಗುತ್ತಾರೆ! – ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ – ಬಿಜೆಪಿ ಟ್ವೀಟ್‌ ಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ

ಮೋದಿ ಹೋದಲ್ಲೆಲ್ಲಾ ತಜ್ಞರಾಗುತ್ತಾರೆ! – ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ – ಬಿಜೆಪಿ ಟ್ವೀಟ್‌ ಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ

ಬೆಂಗಳೂರು: ಎಟಿಎಂ ಸರ್ಕಾರದ‌ ಶ್ಯಾಡೋ ಸಿಎಂ ಯತೀಂದ್ರ ಸ್ಥಾನಕ್ಕಾಗಿ ಪೈಪೋಟಿ ಏರ್ಪಟ್ಟಿದೆ. ಸಿಕ್ಕ ಸಿಕ್ಕಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕೈಯಾಡಿಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಟ್ವೀಟ್‌ ಮೂಲಕ ಗುರುವಾರ ಸಚಿವ ಪ್ರಿಯಾಂಕ್ ಖರ್ಗೆ ಅವರ ಕಾಲೆಳೆದಿತ್ತು. ಈ ಟ್ವೀಟ್‌ ಗೆ ಪ್ರಿಯಾಂಗ್‌ ಖರ್ಗೆ ರೀ ಟ್ವೀಟ್‌ ಮಾಡಿದ್ದಾರೆ. ಚೀನಾ ಅತಿಕ್ರಮಣ ಮಾಡಿದಾಗ ರಕ್ಷಣಾ ತಜ್ಞರಾಗುತ್ತಾರೆ, ಬೆಲೆ ಏರಿಕೆಗೆ ಆರ್ಥಿಕ ತಜ್ಞರಾಗುತ್ತಾರೆ, ಮೋದಿ ವಿದೇಶ ಪ್ರವಾಸಕ್ಕೆ ಹೋದರೆ ವಿದೇಶಾಂಗ ತಜ್ಞರಾಗುತ್ತಾರೆ! ಈ ಏಕಪಾತ್ರಾಭಿನಯ ಬಿಜೆಪಿಗರಿಗೆ ಮಾತ್ರ ಸಾಧ್ಯ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಪ್ರಿಯಾಂಕ್‌ ಖರ್ಗೆ,  ನಾನು ನನ್ನ ಪಕ್ಷದ ವಕ್ತಾರನಾಗಿದ್ದೇನೆ. ಜನರ ಆಶೀರ್ವಾದದಿಂದ ಸಚಿವ ಸ್ಥಾನದ ಜವಾಬ್ದಾರಿ ಹೊತ್ತಿದ್ದೇನೆ. ಸರ್ಕಾರದ ಪರವಾಗಿ, ನಾಡಿನ ಜನರ ಪರವಾಗಿ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಟ್ವೀಟ್ ನಲ್ಲಿ ಬರೆದು ಕೊಂಡಿದ್ದಾರೆ.

ಇದನ್ನೂ ಓದಿ: ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಭರ್ಜರಿ ಶತಕ – ಯಶಸ್ವಿ ಜೈಸ್ವಾಲ್ ಈಗ ಹಲವು ದಾಖಲೆಗಳ ಸರದಾರ

ಬಿಜೆಪಿಗರಿಗೆ ಕರ್ತವ್ಯದ ಬಗ್ಗೆ ಅಜ್ಞಾನವಿದ್ದರೆ ನಾನು ಹೊಣೆಗಾರನಲ್ಲ! ಬಿಜೆಪಿಗೆ ಕರ್ತವ್ಯದ ಅರಿವು ಇಲ್ಲದಿದ್ದರಿಂದಲೇ ಹೀನಾಯ ಸೋಲಿಗೆ ಗುರಿಯಾಗಿದ್ದು ಎಂದು ಲೇವಡಿ ಮಾಡಿರುವ ಪ್ರಿಯಾಂಕ್ ,ಬಿಜೆಪಿ ಆಡಳಿತದ ಇಬ್ಬರು ಮುಖ್ಯಮಂತ್ರಿಗಳ ಅವಧಿಯಲ್ಲಿ ಯಾರು ಶಾಡೋ ಸಿಎಂ ಆಗಿದ್ದರು, ಯಾರು ಸೂಪರ್ ಸಿಎಂ ಆಗಿದ್ದರು ಎನ್ನುವುದು ಜಗತ್ತಿಗೆ ತಿಳಿದ ವಿಚಾರ, ಬಿಜೆಪಿಗೆ ತಿಳಿದಿಲ್ಲವೆಂದರೆ ಯತ್ನಾಳರ ಹಾಗೂ ರೇಣುಕಾಚಾರ್ಯರ ಮಾತುಗಳನ್ನು ರಿವೈಂಡ್ ಮಾಡಿ ಕೇಳಿಸಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

ಸೋತು ವಿರೋಧ ಪಕ್ಷದಲ್ಲಿ ಕೂತಿದ್ದರೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುವ ಕನಿಷ್ಠ ಹೊಣೆಗಾರಿಕೆ ಪ್ರದರ್ಶಿಸಲು ಸಾಧ್ಯವಾಗಿಲ್ಲ ಬಿಜೆಪಿಗೆ. ಅಧಿವೇಶನ ಶುರುವಾಗಿ, ರಾಜ್ಯಪಾಲರ ಭಾಷಣವಾಗಿ,ಬಜೆಟ್ ಮಂಡನೆಯಾಗಿ, ಬಜೆಟ್ ಮೇಲಿನ ಚರ್ಚೆಯೂ ಆಯ್ತು, ಆದರೆ ಒಬ್ಬ ವಿರೋಧ ಪಕ್ಷದ ನಾಯಕ ಸಿಗದಿರುವುದು ಬಿಜೆಪಿಯ ರಾಜಕೀಯ ಹಾಗೂ ನೈತಿಕ ದಿವಾಳಿತನಕ್ಕೆ ಸಾಕ್ಷಿ.

ಹೈಕಮಾಂಡ್ ನಾಯಕರಿಂದ ತಿರಸ್ಕಾರಕ್ಕೊಳಪಟ್ಟ ಬಿಜೆಪಿ ಕರ್ನಾಟಕ ವಿಪಕ್ಷ ನಾಯಕನ ಆಯ್ಕೆಯ ವಿಚಾರದಲ್ಲಿ ಬೊಗಸೆಯಷ್ಟಾದರೂ ಗೌರವವನ್ನು ಪಡೆದು ಬಂದ ನಂತರ ನನ್ನ ಬಗ್ಗೆ ಮಾತಾಡಲಿ ಎಂದು ತಿವಿದಿದ್ದಾರೆ.

suddiyaana