ಕನ್ನಡ ಅಕ್ಷರಗಳ ಮೋಡಿಗೆ ಪ್ರಧಾನಿ ಮೆಚ್ಚುಗೆ – ಬಾದಲ್ ನಂಜುಂಡಸ್ವಾಮಿ ಕೈಚಳಕಕ್ಕೆ ಶಹಬ್ಬಾಸ್!

ಕನ್ನಡ ಅಕ್ಷರಗಳ ಮೋಡಿಗೆ ಪ್ರಧಾನಿ ಮೆಚ್ಚುಗೆ – ಬಾದಲ್ ನಂಜುಂಡಸ್ವಾಮಿ ಕೈಚಳಕಕ್ಕೆ ಶಹಬ್ಬಾಸ್!

ಕನ್ನಡ ಭಾಷೆಯ ಬಗೆಗಿನ ಬಾದಲ್​ ನಂಜುಂಡಸ್ವಾಮಿಯವರ ಕೈಚಳಕಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ ಕೈಬರಹದಲ್ಲೇ ಬಿಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸೃಜನಾತ್ಮಕ ಕಲೆ ಇದೀಗ ವೈರಲ್ ಪಡೆದು ಪ್ರಧಾನಿ ನರೇಂದ್ರ ಮೋದಿಯವರ ಗಮನಸೆಳೆದಿದೆ.

ಇದನ್ನೂ ಓದಿ : ಯುದ್ಧ ನೌಕೆ ಮೇಲೆ INS ವಿಕ್ರಾಂತ್ ಮೊದಲ ಜೆಟ್ ಲ್ಯಾಂಡಿಂಗ್ – ವಾಯುಪಡೆ ಪಾಲಿಗೆ ಐತಿಹಾಸಿಕ ಮೈಲುಗಲ್ಲು!

ಕನ್ನಡ ಭಾಷೆ ಕಲಿಯುವ ಮಕ್ಕಳ ಅನುಕೂಲಕ್ಕಾಗಿ ಕಲಾವಿದ ಬಾದಲ್ ನಂಡಜುಂಡಸ್ವಾಮಿ ಕನ್ನಡ ವರ್ಣಮಾಲೆಗಳ ಪ್ರತಿ ಅಕ್ಷರಕ್ಕೆ ಹೊಂದಿಕೆಯಾಗುವ ಚಿತ್ರಗಳನ್ನು ಜೋಡಿಸಿದ್ರು. ಕಿರಣ್ ಕುಮಾರ್ ಎಸ್ ಎಂಬುವವರು ಹಂಚಿಕೊಂಡಿದ್ದ ಟ್ವೀಟ್​ಗೆ ಪ್ರಧಾನಿ ಮೋದಿ ರೀಟ್ವೀಟ್ ಮಾಡಿದ್ದಾರೆ. ‘ಭಾಷೆ ಕಲಿಯುವುದನ್ನು ಮೋಜಿನ ಚಟುವಟಿಕೆಯನ್ನಾಗಿ ಮಾಡಲು ಒಂದು ಸೃಜನಶೀಲ ಮಾರ್ಗ, ಸುಂದರವಾದ ಕನ್ನಡ ಭಾಷೆ’ ಎಂದು ಬಣ್ಣಿಸಿದ್ದಾರೆ.

ತಮ್ಮ ಕಲೆಯನ್ನು ಭಾರತದ ಪ್ರಧಾನಿ ಗುರುತಿಸಿದ ಬಗ್ಗೆ ನಂಜುಂಡಸ್ವಾಮಿ ಸಂತಸ ವ್ಯಕ್ತಪಡಿಸಿದ್ದಾರೆ. ಅಖಿಲ ಭಾರತ ವಾಕ್​ ಮತ್ತು ಶ್ರವಣ ಸಂಸ್ಥೆಯ ಮಕ್ಕಳಿಗಾಗಿ ಕ್ಯಾಲಿಗ್ರಫಿ ಮೂಲಕ ಕನ್ನಡ ವರ್ಣಮಾಲೆಯನ್ನು ಸೃಜನಾತ್ಮಕವಾಗಿ ಕಲಿಸುವ ನಿಟ್ಟಿನಲ್ಲಿ 2 ವರ್ಷಗಳ ಹಿಂದೆ ಶಿಕ್ಷಕಿ ಪುಷ್ಪಮ್ಮ ಎಂಬುವವರ ಮನವಿ ಮೇರೆಗೆ ಈ ಕಲೆ ರಚಿಸಿದ್ದೆ. ಇದೀಗ ನನ್ನ ಕಲೆಯನ್ನು ಪ್ರಧಾನಿಯವರು ಗುರುತಿಸಿರುವುದು ಹೆಮ್ಮೆಯ ವಿಚಾರವಾಗಿದ್ದು ಸಂತೋಷ ನೀಡುತ್ತಿದೆ. ಕಲೆಯನ್ನು ಗುರುತಿಸಿರುವುದಕ್ಕೆ ಪ್ರಧಾನಿಯವರಿಗೆ ಧನ್ಯವಾದಗಳು ಎಂದಿದ್ದಾರೆ.

‘ಅ’ ಅಕ್ಷರದೊಳಗೆ ಅಳಿಳು, ‘ಆ’ದಲ್ಲಿ ಆನೆ ಸೊಂಡಿಲು, ‘ಇ’ನಲ್ಲಿ ಇಲಿ, ‘ಈ’ಯಲ್ಲಿ ಈರುಳ್ಳಿಯನ್ನ ಇಟ್ಟು  ಕನ್ನಡ ವರ್ಣಮಾಲೆಯ ಪ್ರತಿ ಅಕ್ಷರಕ್ಕೂ ಸರಿಹೊಂದುವ ಚಿತ್ರಗಳನ್ನು ಆಯಾ ಅಕ್ಷರದಲ್ಲಿ ಕೈಬರಹದಲ್ಲೇ ಬಿಡಿಸಿದ್ದಾರೆ. ಇದು ಸಣ್ಣ ಮಕ್ಕಳ ಗಮನವನ್ನು ಅಕ್ಷರಗಳ ಮೇಲೆ ಕೇಂದ್ರೀಕರಿಸಲು ಹಾಗೂ ಅಕ್ಷರಗಳನ್ನು ಗ್ರಹಿಸಲು ನೆರವಾಗಲಿದೆ.

suddiyaana