ಮಂಜ ಬಾಯ್ಬಿಟ್ರೆ #*@$%@@#*!.. ಮಹಾಕವಿಗೆ RED CARD? ಕೊಳಕು ಮಾತು.. ಡೈರೆಕ್ಟ್‌ ಎಲಿಮಿನೇಟ್?‌  

ಮಂಜ ಬಾಯ್ಬಿಟ್ರೆ #*@$%@@#*!.. ಮಹಾಕವಿಗೆ RED CARD? ಕೊಳಕು ಮಾತು.. ಡೈರೆಕ್ಟ್‌ ಎಲಿಮಿನೇಟ್?‌  

ಮಾಡ್ರನ್‌ ಮಹಾಕವಿ ಮಂಜ.. ಬಾಯಿ ಬಿಟ್ರೆ ಕವಿತೆಗಿಂತ ಹೆಚ್ಚು ಬರೋದೇ ಕೆಟ್ಟ ಪದಗಳು.. ಅಶ್ಲೀಲ ಮಾತು. ಆರಂಭದಲ್ಲೇ ಕಿಚ್ಚು ಸುದೀಪ್‌ ಮಂಜನಿಗೆ ಕ್ಲಾಸ್‌ ತೆಗೆದುಕೊಂಡಿದ್ರು. ಇನ್ನಾದ್ರೂ ಬದಲಾಗ್ತಾರೆ ಅಂತ ವೀಕ್ಷಕರು ಕೂಡ ಅಂದ್ಕೊಂಡಿದ್ರು. ಮಂಜ ಮತ್ತೆ ಮಿತೀಮೀರಿ ವರ್ತಿಸಿದ್ದಾರೆ. ಟಾಸ್ಕ್‌ ವೇಳೆ ಪ್ರಾಪರ್ಟಿ ಹಾಳು ಮಾಡಿದ್ದಲ್ಲದೇ, ಸಹ ಸ್ಪರ್ಧಿಗಳನ್ನ ನಿಂದಿಸಿದ್ದಾರೆ. ಇದ್ರಿಂದ ಯಶಸ್‌ ಕಣ್ಣೀರು ಹಾಕಿದ್ದಾರೆ. ಇದೀಗ ವೀಕ್ಷಕರು ಮಂಜನ ವಿರುದ್ಧ ಕಿಡಿಕಾರಿದ್ದಾರೆ. ಕಿಚ್ಚ ಸುದೀಪ್‌ ತಮ್ಮ ವಿಶೇಷ ಅಧಿಕಾರ ಬಳಸಿ, ಮಂಜನಿಗೆ ರೆಡ್‌ ಕಾರ್ಡ್‌ ಎಲಿಮಿನೇಟ್‌ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬದುಕಿರೋ ಭೂಮಿ ಬಚಾವ್‌.. ದೀಪಿಕಾ ಮುಂದೆ ಮಹಾ ಸತ್ಯ ರಿವೀಲ್! – ಜೈದೇವ್‌ ಅಟ್ಟಹಾಸಕ್ಕೆ ಮಲ್ಲಿ ಬ್ರೇಕ್!

ಬಿಗ್‌ ಬಾಸ್‌ ಮನೆ ಅಂದ್ರೆ ಅಲ್ಲಿ ವಾದ, ವಿವಾದ ಜಗಳ ಕಾಮನ್.‌ ಆದ್ರೆ ಈ ಬಾರಿ ಮಾತ್ರ ಸ್ಪರ್ಧಿಗಳು ಮಿತಿ ಮೀರಿ ವರ್ತಿಸ್ತಿದ್ದಾರೆ. ಅದ್ರಲ್ಲೂ ಮಾರ್ಡ್ರನ್‌ ಮಹಾಕವಿ ಮಂಜ ಅಂತೂ ತಾವಾಡಿದ್ದೇ ಆಟ ಅನ್ನೋ ರೀತಿ ವರ್ತಿಸ್ತಿದ್ದಾರೆ. ಅವರ ನಡೆ-ನುಡಿ ಹಾಗೂ ಕಿರುಚಾಟ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.  ದೊಡ್ಮನೆಯಲ್ಲಿ ಅವರು ಬಳಸುತ್ತಿರುವ ಭಾಷೆ, ಇತರ ಸ್ಪರ್ಧಿಗಳ ಮೇಲೆ ಬಳಸುತ್ತಿರುವ ಕೆಟ್ಟ ಪದಗಳು ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳನ್ನು ಎರಡು ಗುಂಪುಗಳಾಗಿ ಮಾಡಿ ಗಂಧರ್ವರು vs ರಾಕ್ಷಸರು ಎಂಬ ಟಾಸ್ಕ್‌ ನೀಡಿದ್ರು. ಟಾಸ್ಕ್ ವೇಳೆ ಮೊದಲ ಹಂತದಲ್ಲಿ ಮಂಜು ಅವರು ರಾಕ್ಷಸರ ತಂಡದಲ್ಲಿದ್ದರೆ, ಯಶಸ್ ಗಂಧರ್ವರ ತಂಡದಲ್ಲಿದ್ದರು. ಈ ವೇಳೆ ಮಂಜು ಅವರು ಯಶಸ್ ಅವರನ್ನ ಸ್ತ್ರೀ ವ್ಯಾಮೋಹ ಇರುವ ಕಳ್ಳನಾಯಿ ಎಂದು ನಿಂದಿಸಿದ್ರು. ಯಶಸ್ ಇದನ್ನ ಸಂಯಮದಿಂದಲೇ ಸಹಿಸಿಕೊಂಡಿದ್ದರು. ಆದರೆ, ಮುಂದಿನ ಹಂತದಲ್ಲಿ ತಂಡಗಳು ಅದಲು-ಬದಲು ಆದಾಗ, ರಾಕ್ಷಸರಾದ ಯಶಸ್ ಮಂಜು ಅವರನ್ನ ಪದೇ ಪದೇ ನಾಯಿ ನಾಯಿ ಎಂದು ಹಂಗಿಸಲು ಆರಂಭಿಸಿದರು. ಆರಂಭದಲ್ಲಿ ಮಂಜು ಇದನ್ನ ಸಹಿಸಿಕೊಂಡರೂ, ಟಾಸ್ಕ್ ಮುಂದುವರಿಯುತ್ತಿದ್ದಂತೆ ಅವರ ತಾಳ್ಮೆಯ ಕಟ್ಟೆ ಒಡೆಯಿತು. ಈ ವೇಳೆ ಸಿಡಿದೆದ್ದ ಮಂಜ ಮನೆಯ ಪ್ರಾಪರ್ಟಿಗಳನ್ನ ಹಾನಿಗೊಳಿಸಲು ಶುರುಮಾಡಿದ್ರು. ಅಷ್ಟಕ್ಕೇ ನಿಲ್ಲದೆ ಯಶಸ್ ಅವರನ್ನ ಕಾಮುಕ ಎಂದು ಕರೆದು, ಸರಣಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಬಳಿಕ ಯಶಸ್‌ ತಂದೆ ತಾಯಿಗೂ ಬಯ್ಯೋದಿಕ್ಕೆ ಶುರ ಮಾಡಿದ್ರು ಮಂಜು ಬಳಸಿದ ಕೆಟ್ಟ ಪದಗಳ ತೀವ್ರತೆ ಎಷ್ಟಿತ್ತೆಂದರೆ, ʻಬಿಗ್ ಬಾಸ್ʼ ಆ ಸಂಭಾಷಣೆಯನ್ನ ಪ್ರಸಾರ ಮಾಡಲು ಸಾಧ್ಯವಾಗದೆ ದೀರ್ಘ ಸಮಯದವರೆಗೆ ಬೀಪ್  ಶಬ್ದ  ಹಾಗೂ ಚಿಹ್ನೆಗಳನ್ನ ಹಾಕಬೇಕಾಯಿತು. ಯಶಸ್‌ ಕೂಡ ಮಂಜನ ಮಾತಿನಿಂದ ಕಣ್ಣೀರು ಹಾಕಿದ್ದಾರೆ. ಇನ್ನು ವೀಕ್ಷಕರು ಕೂಡ ಈ ಎಪಿಸೋಡ್‌ ನೋಡಿದ್ಮೇಲೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಹೌದು ಮಂಜನ ವರ್ತನೆ, ಕೆಟ್ಟ ಮಾತನ್ನ ನೋಡಿ ವೀಕ್ಷಕರ ತಾಳ್ಮೆ ಕಟ್ಟೆ ಒಡೆದಿದೆ. ಈ ರೀತಿಯ ಪದಗಳನ್ನ ಬಳಸಿದ್ರೆ ಫ್ಯಾಮಿಲಿ ಮುಂದೆ ಕುಳಿತು ನೋಡೋದು ಹೇಗೆ?  ಮಂಜ ಯಶಸ್ ವಿರುದ್ಧ ಅಸಭ್ಯ ಮತ್ತು ನಿಂದನೀಯ ಪದಗಳನ್ನ ಬಳಸುತ್ತಿರುವುದು ಮನೆಯ ವಾತಾವರಣವನ್ನ ಕೆಡಿಸಿದೆ. ಟಾಸ್ಕ್ ವೇಳೆ ಹಾಗೂ ಸಾಮಾನ್ಯ ಸಂಭಾಷಣೆಗಳಲ್ಲೂ ಅವರು ತಾಳ್ಮೆ ಕಳೆದುಕೊಂಡು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಬಿಗ್ ಬಾಸ್ ರೂಲ್ಸ್‌ಗಳ ಪ್ರಕಾರ ಮನೆಯಲ್ಲಿ ಶಿಸ್ತು ಮತ್ತು ಗೌರವಯುತ ಭಾಷೆ ಅತ್ಯಗತ್ಯ. ಆದರೆ, ಮಂಜ ಅವರ ನಿಂದನೆಗಳು ನಿಜಕ್ಕೂ ಕಿರಿಕಿರಿಯಾಗುತ್ತೆ. ಇಂತಹ ವರ್ತನೆಯನ್ನ ಬಿಗ್ ಬಾಸ್ ಮನೆಯಲ್ಲಿ ಸಹಿಸಲು ಸಾಧ್ಯವಿಲ್ಲ . ಮಂಜನ ಆಟಕ್ಕೆ ಕಿಚ್ಚ ಸುದೀಪ್‌ ಬ್ರೇಕ್‌ ಹಾಕಲೇ ಬೇಕು. ತಮ್ಮ ವಿಶೇಷ ಅಧಿಕಾರ ಬಳಸಿ, ಮಂಜನಿಗೆ ರೆಡ್‌ ಕಾರ್ಡ್‌ ತೋರಿಸಿ ಎಲಿಮಿನೇಟ್‌ ಮಾಡಬೇಕು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಒತ್ತಾಯಿಸಿದ್ದಾರೆ. ಇದೀಗ ವೋಟಿಂಗ್ ಪ್ರಕ್ರಿಯೆಯನ್ನೇ ಬದಿಗೊತ್ತಿ, ಕಿಚ್ಚ ಸುದೀಪ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಮಂಜುನ ಎಲಿಮಿನೇಟ್‌ ಮಾಡ್ತಾರಾ? ಮಂಜನಿಗೆ ಗಂಭೀರ ಎಚ್ಚರಿಕೆ ನೀಡಿ ಕೊನೆಯ ಅವಕಾಶ ಕೊಡ್ತಾರಾ? ಅನ್ನೋದನ್ನ ಕಾದು ನೋಡಬೇಕಿದೆ.

Shwetha M

One thought on “ಮಂಜ ಬಾಯ್ಬಿಟ್ರೆ #*@$%@@#*!.. ಮಹಾಕವಿಗೆ RED CARD? ಕೊಳಕು ಮಾತು.. ಡೈರೆಕ್ಟ್‌ ಎಲಿಮಿನೇಟ್?‌  ”

Leave a Reply

Your email address will not be published. Required fields are marked *