ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್!  – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್!  – ಮದುವೆ ಆಗ್ಬೇಕಂದ್ರೆ ಸಸ್ಯಾಹಾರಿ ಆಗಿರಬೇಕು..!

ಒಂದು ಊರು ಅಂದ್ಮೇಲೆ ಅವರದ್ದೇ ಆದ ರೀತಿ ರಿವಾಜು ಇರುತ್ತದೆ. ಆ ಊರಿನ ಹಿರಿಯರು ಸೇರಿಕೊಂಡು ಕೆಲ ನಿಯಮಗಳನ್ನು ವಿಧಿಸಿರ್ತಾರೆ. ಅದನ್ನೇ ಕಿರಿಯರು ಕೂಡ ಪಾಲನೆ ಮಾಡಿಕೊಂಡು ಬಂದಿರುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹಿರಿಯರು ಪಾಲಿಸಿಕೊಂಡು ಬಂದಿರುವ ರೂಲ್ಸ್ಗಳನ್ನು ಅನೇಕರು ಬ್ರೇಕ್ ಮಾಡ್ತಾರೆ. ಆದ್ರೆ ಇಲ್ಲೊಂದು ಹಳ್ಳಿಯಿದೆ. ಈ ಹಳ್ಳಿಯವರನ್ನು  ಮದ್ವೆಯಾಗ್ಬೇಕಂದ್ರೆ ಮಾಂಸಾಹಾರ ಸೇವಿಸಬಾರದು, ಮದ್ಯ ಸೇವನೆ ಮಾಡಲೇಬಾರದು. ಅಷ್ಟಕ್ಕೂ ಈ ಹಳ್ಳಿ ಇರೋದು ಎಲ್ಲಿ? ಅಲ್ಲಿನ ರೂಲ್ಸ್ ಏನು ಅನ್ನೋದ್ರ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ರಾಜ್ಯದ ಅರ್ಚಕರಿಗೆ ಬಿಗ್‌ ಶಾಕ್‌! – ಅರ್ಚಕರಿಂದ 10 ವರ್ಷದ ಸಂಬಳ ವಾಪಸ್ ಕೇಳಿದ ಸರ್ಕಾರ!

ಈ ಹಳ್ಳಿ ಇರೋದು ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯಲ್ಲಿ. ವೈಶಾಲಿ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿರುವ ಕುಶ್ವಾಹ ಟೋಲಾ ಅನ್ನೋ ಹಳ್ಳಿ. ಟೋಲಾದಲ್ಲಿ ಮದ್ಯಪಾನ ಸೇರಿದಂತೆ ಯಾವುದೇ ಅಮಲು ಪದಾರ್ಥಗಳ ಸೇವನೆ ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈಗಾಗ್ಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಿಹಾರದಲ್ಲಿ ಮಧ್ಯ ನಿಷೇಧ ಜಾರಿಗೊಳಿಸಿದ್ದಾರೆ. ಇಡೀ ರಾಜ್ಯ ಪಾನಮುಕ್ತ ಆಗಬೇಕು ಎನ್ನುವುದು ನಿತೀಶ್ ಕುಮಾರ್ ಕನಸು. ಆದ್ರೆ ಕುಶ್ವಾಹ ಟೋಲಾದಲ್ಲಿ ಮಧ್ಯ ನಿಷೇಧಕ್ಕೂ ಮೊದಲೇ ತಲೆ ತಲಾಂತರಗಳಿಂದ ಮಧ್ಯಪಾನದ ನಿಷೇಧವಿದೆ. ಅಷ್ಟೇ ಅಲ್ಲದೆ ಬೀಡಿ, ಸಿಗರೇಟು, ಪಾನ್ ಗುಟ್ಕಾ ಸೇರಿದಂತೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಈ ಹಳ್ಳಿಯಲ್ಲಿ ಮಾರಾಟ ಮಾಡುವಂತಿಲ್ಲ. ಅಥವಾ ಹಳ್ಳಿಯ ಜನ ಸೇವನೆ ಮಾಡುವಂತಿಲ್ಲ.

ಸುಮಾರು 60 ಮನೆಗಳಿರುವ 500ರಷ್ಟು ಜನರು ವಾಸಿಸುತ್ತಿರುವ ಕುಶ್ವಾಹ ಟೋಲಾದಲ್ಲಿ ಕುಶ್ವಾಹ ಸಮುದಾಯದ ಜನರೇ ವಾಸವಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿರುವ ಈ ಕುಶ್ವಾಹ ಸಮುದಾಯದ ಜನರು ಈ ಹಳ್ಳಿಯಲ್ಲಿ ಮಾತ್ರ ಅಮಲು ಪದಾರ್ಥದ ಜೊತೆಗೆ ಮಾಸಾಂಹರವನ್ನೂ ತ್ಯಜಿಸಿದ್ದಾರೆ. ಇಲ್ಲಿ ಮಾಂಸಾಹಾರ ಸೇವನೆ ಮಾಡುವಂತಿಲ್ಲ. ಈ ಕಟ್ಟು ನಿಟ್ಟಿನ ನಿಯಮ ಪಾಲನೆಗಾಗಿ ಕುಶ್ವಾಹ ಟೋಲಾದ ಜನರು  ಅಲ್ಲೆ ನಡೆಯುವ ಮದುವೆಗಳಿಗೂ ಷರತ್ತು ವಿಧಿಸಿದ್ದಾರೆ. ಮನೆಗೆ ಬಂದ ಅಳಿಯ ಅಥವಾ ಸೊಸೆ ಮದ್ಯಪಾನ ಮಾಡಬಾರದು. ಮಾಂಸ ಸೇವನೆ ಮಾಡಬಾರದು. ಈಗಾಗಲೇ ಅವರು ಮದ್ಯಪಾನ ಅಥವಾ ಮಾದಕ ವಸ್ತುಗಳ ಸೇವನೆ ಮಾಡುತ್ತಿದ್ದರೆ, ಅಂಥ ಕುಟುಂಬದಿಂದ ಬಂದವರಾಗಿದ್ದರೆ ಅವರಿಗೆ ಹೆಣ್ಣು ನೀಡೋದಿಲ್ಲ. ಹಾಗೆಯೇ ಅಂಥ ಕುಟುಂಬದಿಂದ ಸೊಸೆಯನ್ನೂ  ತರೋದಿಲ್ಲ ಎನ್ನುವ ನಿಯಮ ಪಾಲನೆಯಲ್ಲಿದೆ. ಈ ಎಲ್ಲಾ ನಿಯಮಗಳ ಪಾಲನೆಯಿಂದ ಈ ಊರಿನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೀತಿಲ್ವಂತೆ.. ಅಪರಾಧಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿವೆ. ಅಲ್ಲದೆ ಜನರ ಆರೋಗ್ಯವೂ ಉತ್ತಮ ಸ್ಥಿತಿಯಲ್ಲಿದ್ದು, ಕೊರೊನಾದ ಸಮಯದಲ್ಲೂ ಇಲ್ಲಿನ ಜನರಿಗೆ ತೊಂದರೆಯಾಗಿರಲಿಲ್ಲ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

Shwetha M