ವಿಜಯ್-ರಶ್ಮಿಕಾ ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ನಿಷೇಧ – ಫೋಟೋ ಲೀಕ್ ಮಾಡುವಂಗಿಲ್ಲ

ವಿಜಯ್-ರಶ್ಮಿಕಾ ಮದುವೆ ಬರುವ ಅತಿಥಿಗಳಿಗೆ ಮೊಬೈಲ್ ನಿಷೇಧ – ಫೋಟೋ ಲೀಕ್ ಮಾಡುವಂಗಿಲ್ಲ

ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಫೆಬ್ರವರಿ 26ರಂದು ಉದಯಪುರದಲ್ಲಿ ಮದುವೆ ನಡೆಯಲಿದೆ. ಜೊತೆಗೆ ಮಾರ್ಚ್ 4ಕ್ಕೆ ಹೈದರಾಬಾದ್‌ನಲ್ಲಿ ಆರತಕ್ಷತೆ ಇದೆ. ಈ ವಿವಾಹದಲ್ಲಿ ಭಾಗವಹಿಸುವ ಅತಿಥಿಗಳಿಗೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ:ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಮುಹೂರ್ತ ಫಿಕ್ಸ್!‌ – ಎಲ್ಲಿ ನಡೆಯಲಿದೆ ವಿವಾಹ?  

ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಕನ್ನಡತಿ ರಶ್ಮಿಕಾ ಮಂದಣ್ಣ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಉದಯಪುರದಲ್ಲಿ ಇವರ ವಿವಾಹ ನಡೆಯುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆಯ ಸುಂದರ ಕ್ಷಣಗಳನ್ನು ಸೆರೆ ಹಿಡಿಯಲು ಟೀಂ ಒಂದನ್ನು ಆಯ್ಕೆ ಮಾಡಿದೆ. ಈ ತಂಡ ತಮ್ಮ ಕ್ಯಾಮೆರಾ ಮೂಲಕ ಫೋಟೋಗ್ರಫಿ ಹಾಗೂ ವಿಡಿಯೋಗ್ರಫಿ ಮಾಡಲಿದೆ. ಈ ಫೋಟೋಗಳನ್ನು ಎಲ್ಲಿಯೂ ರಿವೀಲ್ ಮಾಡುವುದಿಲ್ಲ ಮತ್ತು ಹಂಚಿಕೊಳ್ಳುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗಿದೆ. ಇನ್ನು, ವಿಜಯ್ ಮದುವೆಗೆ ಆಪ್ತರು ಹಾಗೂ ಸ್ನೇಹಿತರು ಮಾತ್ರ ಭಾಗಿ ಆಗಲಿದ್ದಾರೆ ಎಂದು ವರದಿ ಆಗಿದೆ. ಹೀಗಾಗಿ, ಯಾರೂ ಮೊಬೈಲ್ ತರದಂತೆ ಕಠಿಣ ನಿಯಮವನ್ನು ಮಾಡಲಾಗಿದೆ. ಮದುವೆಗೆ ಬರೋ ಅತಿಥಿಗಳು ಮೊಬೈಲ್​​​ ಅನ್ನು ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಚೆಕ್ಕಿಂಗ್ ಇರುತ್ತದೆ. ವಿವಾಹ ನಡೆಯೋ ಜಾಗದಲ್ಲಿಯೂ ಈ ಬಗ್ಗೆ ಕಣ್ಣಿಡಲು ಜನರನ್ನು ನೇಮಿಸಲಾಗಿದೆ. ಈ ರೀತಿಯ ಫೋಟೋ-ವಿಡಿಯೋ ಲೀಕ್ ಆಗದಂತೆ ನೋಡಿಕೊಳ್ಳುವುದು ರಶ್ಮಿಕಾ-ವಿಜಯ್​​ಗೆ ಇರೋ ದೊಡ್ಡ ಚಾಲೆಂಜ್. ಈ ಮೊದಲು ಕತ್ರಿನಾ ಕೈಫ್-ವಿಕ್ಕಿ ಕೌಶಲ್ ದಂಪತಿ, ಕಿಯಾರಾ ಅಡ್ವಾಣಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಕೂಡ ಮೊಬೈಲ್ ತರದಂತೆ ನಿಯಮ ತಂದಿದ್ದರು. ಆ ತಂತ್ರ ಕೆಲಸ ಮಾಡಿತ್ತು. ಈಗ ರಶ್ಮಿಕಾ-ವಿಜಯ್ ಕೂಡ ಇದೇ ಪಾಲಿಸಿ ಅಳವಡಿಸಿಕೊಳ್ಳುತ್ತಿದ್ದಾರೆ. ಚಿತ್ರರಂಗದ ಯಾರನ್ನೂ ಮದುವೆಗೆ ಆಮಂತ್ರಿಸಿಲ್ಲ ಎನ್ನಲಾಗಿದೆ. ರಶ್ಮಿಕಾ ಮಂದಣ್ಣ ಅವರು ಹಲವು ಸೆಲೆಬ್ರಿಟಿಗಳ ಜೊತೆ ಕೆಲಸ ಮಾಡಿದ್ದಾರೆ. ಅವರೆಲ್ಲರನ್ನೂ ಹೈದರಾಬಾದ್​​ನ ಆರತಕ್ಷತೆಗೆ ಆಮಂತ್ರಿಸಲಾಗುತ್ತಿದೆ. ಮದುವೆ ಕೇವಲ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದೆ ಎಂಬುದು ವಿಶೇಷ. ವಿಜಯ್ ಹಾಗೂ ರಶ್ಮಿಕಾ ಅವರ ವಿವಾಹ ಆಮಂತ್ರಣ ಪತ್ರ ವೈರಲ್ ಆಗಿದೆ. ಇದರಲ್ಲಿ ವಿವಾಹ ದಿನಾಂಕ ಫೆಬ್ರವರಿ 26 ಎಂದಿದೆ. ಮಾರ್ಚ್​ 4ರಂದು ಹೈದರಾಬಾದ್​​​ನ್ಲಿ ಆರತಕ್ಷತೆ ಇದೆ ಎಂಬ ಮಾಹಿತಿಯೂ ರಿವೀಲ್ ಆಗಿದೆ.

Sulekha