ಬೆಳಗಾವಿ ಅಧಿವೇಶನ – ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಸಿಗಲಿದೆ ಉಡುಗೊರೆ..!

ಬೆಳಗಾವಿ ಅಧಿವೇಶನ – ಸಮಯಕ್ಕೆ ಸರಿಯಾಗಿ ಬರುವ ಶಾಸಕರಿಗೆ ಸಿಗಲಿದೆ ಉಡುಗೊರೆ..!

ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಸದನಕ್ಕೆ ಶಾಸಕರು ಸರಿಯಾದ ಸಮಯಕ್ಕೆ ಹಾಜರಾದರೆ ರಾಷ್ಟ್ರೀಯ ಲಾಂಛನ ಇರುವ ಟೀ ಕಪ್ ಸಿಗಲಿದೆ. ಬೆಳಗಾವಿ ಅಧಿವೇಶನದಲ್ಲಿ ಇಂತಹದೊಂದು ಬಹುಮಾನದ ಘೋಷಣೆಯನ್ನು ಸ್ಪೀಕರ್ ಯು.ಟಿ ಖಾದರ್ ನೀಡಿದ್ದಾರೆ.

ಇದನ್ನೂ ಓದಿ: ಮಗನ ಸಾವಿಗೆ ಸಿಗದ ನ್ಯಾಯ – 7 ಬಾರಿ ಗೆದ್ದಿದ್ದ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ ಸೇಡು ತೀರಿಸಿಕೊಂಡ ತಂದೆ!

ಬೆಳಗಾವಿಯ ಸುವರ್ಣ ಸೌಧದಲ್ಲಿ  ಚಳಿಗಾಲದ ಅಧಿವೇಶನ ಆರಂಭವಾಗಿದೆ. ಡಿಸೆಂಬರ್ 4ರಂದು ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭಗೊಂಡಿದೆ. ಬೆಳಗಾವಿ ಜಿಲ್ಲಾಡಳಿತ ಅಧಿವೇಶನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಸುವರ್ಣಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಎಲ್ಲೆಡೆ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ಇನ್ನು ಅಧಿವೇಶನಕ್ಕೆ ಸೂಕ್ತ ಸಮಯಕ್ಕೆ ಆಗಮಿಸುವ ಶಾಸಕರಿಗೆ ಕಾಫಿ ಕಪ್ ಗಿಫ್ಟ್ ಕೊಡಲಾಗುತ್ತಿದೆ. ಈ ಬಗ್ಗೆ ಸ್ವೀಕರ್ ಯುಟಿ ಖಾದರ್ ಮಾಹಿತಿ ನೀಡಿದ್ದಾರೆ.

ಶಾಸಕರಿಗೆ ಕಾಫಿ ಕಪ್ ಗಿಫ್ಟ್ ಕೊಡುವ ಬಗ್ಗೆ ಮಾತನಾಡಿರುವ ಸ್ಪೀಕರ್ ಯು.ಟಿ ಖಾದರ್, ಕಳೆದ ಅಧಿವೇಶದನಲ್ಲಿ ಮೊದಲು ಬೇಗ ಬಂದವರ ಹೆಸರನ್ನ ಕೂಗಿ ಹೇಳುತ್ತೇವೆ ಎಂದು ಹೇಳಿದ್ದೆವು. ಅಂತಿಮವಾಗಿ ಯಾರು ಎಷ್ಟು ದಿನ ಬಂದಿದ್ದಾರೆ ಅವರಿಗೆ ಗಿಫ್ಟ್ ಕೊಡುವುದಾಗಿ ಹೇಳಿದ್ದೆವು. ಕಳೆದ ಅಧಿವೇಶನದಲ್ಲಿ ಕೆಲವರು ಒಂದು ದಿನ, ಮತ್ತೆ ಕೆಲವರು ಐದು ದಿನ, ಹಲವರು ಹತ್ತು ದಿನವೂ ಬಂದಿದ್ದಾರೆ. ಇದಕ್ಕೆ ಅನುಗುಣವಾಗಿ ಇವರಿಗೆ ಪ್ರೋತ್ಸಾಹ ನೀಡಲು ಉಡುಗೊರೆ ನೀಡುತ್ತೇವೆ. ತಡವಾಗಿ ಬರುವವರಿಗೆ ಶಿಕ್ಷೆ ವಿಧಿಸುವುದಕ್ಕಿಂತ ಈ ರೀತಿ ಉಡುಗೊರೆ ಕೊಟ್ಟು ಬೇಗ ಬರುವಂತೆ ಪ್ರೇರಣೆ ಮಾಡುತ್ತೇವೆ ಎಂದು ಯು.ಟಿ ಖಾದರ್ ಹೇಳಿದ್ದಾರೆ. ವಿಧಾನಸಭೆಯ ಒಳಗೆ ಸಿಕ್ಕಿದ 10 ದಿನಗಳ ಅವಧಿಯಲ್ಲಿ ಬೆಳಗಾವಿ, ರಾಜ್ಯದ ಜನರ ಪ್ರಗತಿ ವಿಚಾರವಾಗಿ ಚರ್ಚೆಗಳು ಮಾಡಲಿ. ಜನರಿಗೆ ಬೇಸರವಾಗುವ ವಿಚಾರಗಳ ಬಗ್ಗೆ ಚರ್ಚೆಸುವುದು ಬೇಡ ಎಂದರು. ಸುವರ್ಣಸೌಧದ ಸೌಂದರ್ಯ ಹೆಚ್ಚಿಸಲು ಶಾಶ್ವತವಾಗಿ ಎಲ್ ಇ ಡಿ ಲೈಟ್ ಅಳವಡಿಸಲಾಗಿದೆ. ಅಧಿವೇಶನ ಇಲ್ಲದೆ ಇರುವಾಗ ಪ್ರತಿ ಶನಿವಾರ, ಭಾನುವಾರ ಹಾಗೂ ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಲೈಟಿಂಗ್ ಹಾಕಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದರು.

Sulekha