ಸಮುದ್ರಕ್ಕೆ ಹಾರಿ ಮೂವರು ಯುವಕರನ್ನು ರಕ್ಷಿಸಿದ ಶಾಸಕ..!

ಸಮುದ್ರಕ್ಕೆ ಹಾರಿ ಮೂವರು ಯುವಕರನ್ನು ರಕ್ಷಿಸಿದ ಶಾಸಕ..!

ಗುಜರಾತ್‌ನಲ್ಲಿ ಬಿಜೆಪಿ ಶಾಸಕರೊಬ್ಬರು ಸಮುದ್ರಕ್ಕೆ ಹಾರಿ ನೀರಲ್ಲಿ ಮುಳುಗುತ್ತಿದ್ದ ಮೂವರು ಯುವಕರನ್ನು ರಕ್ಷಿಸಿದ್ದಾರೆ. ಹಿಂದೊಮ್ಮೆ ಗುಜರಾತ್‌ನಲ್ಲಿ ಮೊರ್ಬಿ ಸೇತುವೆ ದುರಂತದಲ್ಲಿ ಮಾಜಿ ಬಿಜೆಪಿ ಶಾಸಕ ಕಾಂತಿಭಾಯ್ ಅಮೃತಿಯಾ ತನ್ನ ಪ್ರಾಣವನ್ನು ಲೆಕ್ಕಿಸದೇ ನೀರಿಗೆ ಹಾರಿ ಕೆಲವರ ಪ್ರಾಣ ಉಳಿಸಿದ್ದರು. ನಂತರ ಮೊರ್ಬಿ ಹೀರೋ ಅಂತಾನೇ ಕರೆಸಿಕೊಂಡ 60 ವರ್ಷದ ಕಾಂತಿಭಾಯ್ ಚುನಾವಣೆಯಲ್ಲೂ ಗೆಲುವು ಸಾಧಿಸಿದ್ದರು. ಈ ಘಟನೆ ಬೆನ್ನಲ್ಲೇ ಈಗ ಅಮ್ರೇಲಿ ಜಿಲ್ಲೆಯ ರಾಜುಲಾ ಶಾಸಕ ಹೀರಾ ಸೋಲಂಕಿ ಕೂಡಾ ಸಮುದ್ರಕ್ಕೆ ಧುಮುಕಿ ಮೂವರು ಯುವಕರ ಪ್ರಾಣವನ್ನು ಕಾಪಾಡಿದ್ದಾರೆ.

ಇದನ್ನೂ ಓದಿ:  ಇನ್ನು ಮುಂದೆ ಈ ರಾಜ್ಯದಲ್ಲೂ 100 ಯೂನಿಟ್‌ ವಿದ್ಯುತ್‌ ಉಚಿತ!

ಬುಧವಾರ ಮಧ್ಯಾಹ್ನ ನಾಲ್ವರು ಯುವಕರು ಸಮುದ್ರ ಕೊಲ್ಲಿಯಲ್ಲಿ ಸ್ನಾನ ಮಾಡುತ್ತಿದ್ದರು. ಈ ಸಮಯದಲ್ಲಿ ಆಳ ಸಮುದ್ರದತ್ತ ತೆರಳಿದ ಯುವಕರು ಮುಳುಗಲಾರಂಭಿಸಿದರು. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಅಲ್ಲೇ ಸಮುದ್ರ ತೀರದಲ್ಲಿದ್ದ ಶಾಸಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಶಾಸಕ ಹೀರಾ ಸೋಲಂಕಿ ಬೋಟ್ ಸಹಾಯದಿಂದ ಸ್ಥಳಕ್ಕಾಗಮಿಸಿ ನೀರಿನಲ್ಲಿ ಮುಳುಗುತ್ತಿದ್ದ ಯುವಕರನ್ನು ರಕ್ಷಿಸಲು ಸಮುದ್ರಕ್ಕೆ ಹಾರಿದ್ದಾರೆ.  ಮೂವರು ಯುವಕರನ್ನು ರಕ್ಷಿಸಿದ್ದಾರೆ. ಆದರೆ ಇನ್ನೊಬ್ಬ ಯುವಕನನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ಸುಮಾರು 2 ಗಂಟೆಗಳ ಕಾಲ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಲಾಯಿತು. ಇದಾದ ಬಳಿಕ ನಾಲ್ಕನೇ ಯುವಕನ ಮೃತದೇಹ ಪತ್ತೆಯಾಗಿದೆ. ಮಾಹಿತಿ ಪ್ರಕಾರ, ನಾಲ್ವರು ಸ್ನೇಹಿತರಾದ ಕಲ್ಪೇಶ್ ಶಿಯಾಲ್, ವಿಜಯ್ ಗುಜಾರಿಯಾ, ನಿಕುಲ್ ಗುಜಾರಿಯಾ ಮತ್ತು ಜೀವನ್ ಗುಜಾರಿಯಾ ಅವರು ಮಧ್ಯಾಹ್ನ ಪಟ್ವಾ ಗ್ರಾಮದ ಬಳಿ ಸ್ನಾನ ಮಾಡಲು ಹೋಗಿದ್ದರು. ಸಮುದ್ರದಲ್ಲಿ ಬಲವಾದ ಪ್ರವಾಹ ಮತ್ತು ಬಲವಾದ ಅಲೆಗಳ ಕಾರಣ, ಈ ನಾಲ್ವರು ಯುವಕರು ಆಳವಾದ ನೀರಿನ ಕಡೆಗೆ ತಿರುಗಿ ಮುಳುಗಲು ಪ್ರಾರಂಭಿಸಿದರು.

suddiyaana