ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಕಣ್ಣೀರು – 6 ಆರೋಪಿಗಳನ್ನು 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಜಡ್ಜ್‌ ಆದೇಶ

ನ್ಯಾಯಾಧೀಶರ ಮುಂದೆ ಚೈತ್ರ ಕುಂದಾಪುರ ಕಣ್ಣೀರು – 6 ಆರೋಪಿಗಳನ್ನು 10 ದಿನ ಸಿಸಿಬಿ ಕಸ್ಟಡಿಗೆ ನೀಡಿ ಜಡ್ಜ್‌ ಆದೇಶ

ಉಡುಪಿ: ಎಂಎಲ್​ಎ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಪಡೆದು ವಂಚನೆ ಕೇಸ್​ಗೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತೆ ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನು ಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಆದೇಶ ಹೊರಡಿಸಿದೆ. 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ನ್ಯಾಯಾಧೀಶರಿಗೆ ಸಿಸಿಬಿ ಮನವಿ ಮಾಡಿದ್ದರು.

ಸೆಪ್ಟೆಂಬರ್‌ 8ರಂದು ಬಂಡೇಪಾಳ್ಯ ಪೊಲೀಸ್‌ ಠಾಣೆಯಲ್ಲಿ ಚೈತ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು ಮಂಗಳವಾರ ರಾತ್ರಿ ಉಡುಪಿಯಲ್ಲಿ ಚೈತ್ರಾ ಕುಂದಾಪುರಳನ್ನ ಬಂಧಿಸಲಾಗಿದೆ. ಬಳಿಕ ಚೈತ್ರಾ ಮತ್ತು ಗ್ಯಾಂಗ್​ನ ಸದಸ್ಯರನ್ನ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. ಈ ವೇಳೆ ಆಕೆ ಕೋರ್ಟ್​ನಲ್ಲೂ ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾಳೆ.

ಇದನ್ನೂ ಓದಿ: ಬಂಧನದ ವೇಳೆ ಕೈ ಬಳೆ ಒಡೆದುಕೊಂಡು, ಉಂಗುರ ನುಂಗಲು ಯತ್ನ – ಪೊಲೀಸ್ ಜೀಪಿನಲ್ಲಿಯೂ ಚೈತ್ರಾ ಕುಂದಾಪುರ ಹೈಡ್ರಾಮಾ

ಬಂಧನ ಪ್ರಕ್ರಿಯೆ ಬಗ್ಗೆ ಚೈತ್ರ ಕುಂದಾಪುರಗೆ ನ್ಯಾಯಾಧೀಶರು ಪ್ರಶ್ನಿಸಿದ್ದರು. ಈ ವೇಳೆ ಆಕೆ ಮನೆಯವರ ಭೇಟಿಗೆ ಅವಕಾಶ ನೀಡಿಲ್ಲ, ಕಂಪ್ಲೇಂಟ್‌ ಕಾಪಿ ಓದಲು ಬಿಟ್ಟಿಲ್ಲ. ನನ್ನ ಮೇಲಿರುವ ಪ್ರಕರಣ ಏನು ಎನ್ನುವುದೇ ಗೊತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ

ಬಳಿಕ ಆರು ಆರೋಪಿಗಳನ್ನ ಸಿಸಿಬಿ ಕಸ್ಟಡಿಗೆ ನೀಡಿ ಕೋರ್ಟ್‌ ಆದೇಶ ಹೊರಡಿಸಿದೆ. ಚೈತ್ರ ಕುಂದಾಪುರ, ಶ್ರೀಕಾಂತ್, ರಮೇಶ್, ಗಗನ್, ಪ್ರಜ್ವಲ್ ಹಾಗೂ ಧನರಾಜ್‌ನನ್ನುಸೆಪ್ಟೆಂಬರ್ 23ರವರೆಗೆ ಸಿಸಿಬಿ ಕಸ್ಟಡಿಗೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ಕೋರ್ಟ್​ ಆದೇಶ ನೀಡಿದೆ.

ಇನ್ನು ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯಾಗಿರುವ ಹಿರೇಹಡಗಲಿ ಹಾಲು ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದಾರೆ.. ಅವರ ಬಂಧನಕ್ಕೂ ಕೂಡ ಸಿಸಿಬಿ ತಂಡ ಶೋಧ ಆರಂಭಿಸಿದೆ.. ತನಿಖೆ ವೇಳೆ ಈ ಟೀಂ 100 ತಿಂಗಳ ಹಿಂದೆಯೇ ಕೋಟಿ ಕೋಟಿ ಹಣ ದೋಚಲು ಸಂಚು ರೂಪಿಸಿತ್ತು ಅನ್ನೋದು ಗೊತ್ತಾಗಿದೆ.. ಒಟ್ಟಾರೆ ಇಷ್ಟು ದಿನ ಹೋರಾಟಗಳಲ್ಲಿ ಘಂಟಾಘೋಷವಾಗಿ ಮಾತನಾಡುತ್ತಿದ್ದ ಚೈತ್ರ ಇವತ್ತು ದುಪ್ಪಟದಲ್ಲಿ ತನ್ನ ಮುಖ ಮುಚ್ಚಿಕೊಂಡೇ ಓಡಾಡುತ್ತಿದ್ದಳು.. ಆದ್ರೆ ಈ ವಂಚನೆ ಹಿಂದೆ ಇನ್ನೂ ಯಾರೆಲ್ಲಾ ಇದ್ದಾರೆ ಅನ್ನೋದು ತನಿಖೆ ಬಳಿಕವಷ್ಟೇ ಹೊರಬರಬೇಕಿದೆ.

Shwetha M