ಜೈಲಿನಿಂದ ಹೊರ ಬಂದ ಬಳಿಕ ಮುಂದುವರಿದ ಟೆಂಪಲ್‌ ರನ್‌ – ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಹೆಚ್ ಡಿ ರೇವಣ್ಣ

ಜೈಲಿನಿಂದ ಹೊರ ಬಂದ ಬಳಿಕ ಮುಂದುವರಿದ ಟೆಂಪಲ್‌ ರನ್‌ – ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದ ಹೆಚ್ ಡಿ ರೇವಣ್ಣ

ಜೈಲಿನಿಂದ ಹೊರ ಬಂದಿರುವ ಪ್ರಜ್ವಲ್‌ ರೇವಣ್ಣ ಟೆಂಪನ್‌ ರನ್‌ ಮುಂದುವರಿಸಿದ್ದಾರೆ. ರಾಜ್ಯದ ಹಲವು ದೇಗುಲಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಧರ್ಮಸ್ಥಳಕ್ಕೆ ತೆರಳಿರುವ ಹೆಚ್‌ಡಿ ರೇವಣ್ಣ, ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ‘ಸುಪ್ರೀಂ’ ಮೆಟ್ಟಿಲೇರಿದ ಅರವಿಂದ ಕೇಜ್ರಿವಾಲ್

ಸೋಮವಾರ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿರುವ ಮಂಜುನಾಥನ ದೇವಸ್ಥಾನಕ್ಕೆ  ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಜುನಾಥ ಸ್ವಾಮಿಯ ದರ್ಶನಕ್ಕೆ ಯಾವಾಗಲೂ ಬರುತ್ತೇನೆ. ನಾನು ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರಾಜಕಾರಣಿದಲ್ಲಿದ್ದೇನೆ. 25 ವರ್ಷ ಶಾಸಕನಾಗಿ ಕೆಲಸ ಮಾಡಿದ್ದೇನೆ. ಕಾನೂನು ಬಗ್ಗೆ ಗೌರವವಿದೆ, ದೇವರ ಬಗ್ಗೆ ನಂಬಿಕೆಯಿದೆ. ಪ್ರಕರಣ ಕೋರ್ಟ್ ನಲ್ಲಿರುವುದರಿಂದ ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡಲ್ಲ. ಮಂಜುನಾಥ ಸ್ವಾಮಿ ಮೇಲೆ ನನಗೆ ನಂಬಿಕೆಯಿದೆ. ಸೋಮವಾರದ ವಿಶೇಷ ದಿನ ಮಂಜುನಾಥ ಸ್ವಾಮಿ ದರ್ಶನ ಮಾಡಿದ್ದೇನೆ. ರಾಜ್ಯದ ಜನತೆ ಬಗ್ಗೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಅವರು ಹೇಳಿದ್ದಾರೆ

ಕಳೆದ ಸೋಮವಾರ ಕೋರ್ಟ್ ನಿಂದ ಜಾಮೀನು ಪಡೆದ ಬಳಿಕ ರೇವಣ್ಣ, ಒಂದೆರಡು ದಿನ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡು ಆಮೇಲೆ ದೇವಸ್ಥಾಗಳಿಗೆ ಭೇಟಿ ನೀಡಲಾರಂಭಿಸಿದರು. ಕಳೆದ ಶುಕ್ರವಾರ ಕಲಬುರಗಿಯ ಗಾಣಗಾಪುರದಲ್ಲಿರುವ ಪ್ರಸಿದ್ಧ ದತ್ತಾತ್ರೇಯ ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಬೆಂಗಳೂರಲ್ಲಿರುವಾಗಲೂ ಅವರು ಅಲ್ಲಿನ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಗಮನಿಸಬೇಕಾದ ಸಂಗತಿಯೆಂದರೆ, ರೇವಣ್ಣ ದೇವಸ್ಥಾನಗಳಿಗೆ ಹೋಗುವಾಗ ಸಾಮಾನ್ಯವಾಗಿ ಅವರ ಧರ್ಮಪತ್ನಿ ಭವಾನಿ ರೇವಣ್ಣ ಜೊತೆಗಿರುತ್ತಾರೆ. ಆದರೆ ರೇವಣ್ಣ ಜೈಲಿಂದ ಹೊರಬಂದ ನಂತರ ಭವಾನಿಯವರು ಪತಿಯ ಜೊತೆ ಕಾಣಿಸಿಲ್ಲ.

Shwetha M