ಹಾಸನಾಂಬೆ ದರ್ಶನಕ್ಕೆ ಬಂದ ಹೆಚ್‌ಡಿ ರೇವಣ್ಣ ಕಾರು ತಡೆದ ಅಧಿಕಾರಿಗಳು!

ಹಾಸನಾಂಬೆ ದರ್ಶನಕ್ಕೆ ಬಂದ ಹೆಚ್‌ಡಿ ರೇವಣ್ಣ ಕಾರು ತಡೆದ ಅಧಿಕಾರಿಗಳು!

ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ನೀಡುವ ಹಾಸನ ಜಿಲ್ಲೆಯ ಹಾಸನಾಂಬೆ ದೇಗುಲ ಓಪನ್‌ ಆಗಿದ್ದು, ಲಕ್ಷಾಂತರ ದರ್ಶನ ಪಡೆಯುತ್ತಿದ್ದಾರೆ. ಗಣ್ಯರು ದೇವಿ ದರ್ಶನ ಪಡೆಯುತ್ತಿದ್ದಾರೆ. ಇಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ ದಂಪತಿ ಹಾಸನಾಂಬೆಯ ದರ್ಶನ ಪಡೆದಿದ್ದಾರೆ. ಈ ವೇಳೆ ರೇವಣ್ಣ ಅಧಿಕಾರಿಗಳ ಮೇಲೆ ಗರಂ ಆಗಿದ್ದಾರೆ.

ಇದನ್ನೂ ಓದಿ: ಗಿಲ್ಲಿಗೆ ಕಾವ್ಯ ಮೇಲೆ ಲವ್?‌ – ಕಿಚ್ಚನ ಮುಂದೆಯೇ ಗುಟ್ಟು ರಿವೀಲ್‌ ಮಾಡಿದ  ಗಿಲ್ಲಿನಟ!  

ಇಂದು ಮಾಜಿ ಸಚಿವ ಹೆಚ್‌ಡಿ ರೇವಣ್ಣ ದಂಪತಿ ಹಾಸನಾಂಬೆ ದರ್ಶನ ಪಡೆಯಲು ಬಂದಿದ್ರು. ಮಾಜಿ ಪ್ರಧಾನಿ ಕುಟುಂಬದ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಹೊಂದಿರುವ ರೇವಣ್ಣ ಅವರು ತಮ್ಮದೇ ಕಾರಿನಲ್ಲಿ ತಮ್ಮದೇ ಭದ್ರತಾ ವ್ಯವಸ್ಥೆಯೊಂದಿಗೆ ದೇವಿ ದರ್ಶನಕ್ಕೆ ಆಗಮಿಸಿದ್ದರು. ತಮ್ಮ ಭದ್ರತಾ ವ್ಯವಸ್ಥೆಯೊಂದಿಗೆ ಶಿಷ್ಟಾಚಾರ ಪಾಲನೆ ಅಧಿಕಾರಿಗಳಿಗೆ ತಿಳಿಸದೆ ಬಂದಿದ್ದರಿಂದ ಅಧಿಕಾರಿಗಳು ರೇವಣ್ಣ ಅವರ ಕಾರನ್ನು ತಡೆದಿದ್ದಾರೆ. ಈ ವೇಳೆ ಕಾರನ್ನ ತಡೆದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ.

ಪತ್ನಿ ಭವಾನಿ ರೇವಣ್ಣ ಜೊತೆ ಸಾವಿರ ರೂ. ಟಿಕೆಟ್ ಪಡೆದು ನೇರ ದರ್ಶನಕ್ಕೆ ರೇವಣ್ಣ ಆಗಮಿಸಿದ್ದರು. ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವಿಶೇಷ ಪೂಜೆ ಸಲ್ಲಿಸಿದರು. ಹೆಚ್.ಡಿ.ದೇವೇಗೌಡರು, ಚೆನ್ನಮ್ಮ, ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸೂರಜ್ ರೇವಣ್ಣ, ಪ್ರಜ್ವಲ್ ರೇವಣ್ಣ ಸೇರಿ ಕುಟುಂಬ ಸದಸ್ಯರ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.

ಬ್ಯಾಹ್ಮಿ, ಕೌಮಾರಿ, ಮಹೇಶ್ವರಿ ಮೂರು ದೇವರ ಮೇಲಿದ್ದ ಕುಂಕುಮ ಕೇಳಿ ಪಡೆದ ರೇವಣ್ಣ, ಪ್ರತ್ಯೇಕವಾಗಿ ಬಾಕ್ಸ್‌ನಲ್ಲಿ ಕುಂಕುಮ, ದೇವರ ಮೇಲಿದ್ದ ಹೂವು ಕೊಂಡೊಯ್ದರು. ಈ ವೇಳೆ ರೇವಣ್ಣ ದಂಪತಿಗೆ ಹಾಸನ ಮಹಾನಗರ ಪಾಲಿಕೆ ಮೇಯರ್ ಗಿರೀಶ್ ಸಾಥ್ ನೀಡಿದ್ದಾರೆ.

Shwetha M