ಐಪಿಎಲ್‌ ಹರಾಜಿನಲ್ಲಿ ರಚಿನ್​​ ರವೀಂದ್ರಗೆ ಅನ್ಯಾಯ? – 20 ವರ್ಷದವನಿಗೆ 8.4 ಕೋಟಿ ಬೇಕಿತ್ತಾ?

ಐಪಿಎಲ್‌ ಹರಾಜಿನಲ್ಲಿ ರಚಿನ್​​ ರವೀಂದ್ರಗೆ ಅನ್ಯಾಯ? – 20 ವರ್ಷದವನಿಗೆ 8.4 ಕೋಟಿ ಬೇಕಿತ್ತಾ?

ಈ ಬಾರಿಯ ಐಪಿಎಲ್ ಆಕ್ಷನ್​ನಲ್ಲಿ ಒಂದಷ್ಟು ಸರ್​​ಪ್ರೈಸ್​ಗಳು ಕೂಡ ಇವೆ. ಸೋಲ್ಡ್ ಆದ ಆಟಗಾರರು ಮತ್ತು ಅನ್​ಸೋಲ್ಡ್ ಪ್ಲೇಯರ್ಸ್ ವಿಚಾರದಲ್ಲಿ ಒಂದಷ್ಟು ಇಂಟ್ರೆಸ್ಟಿಂಗ್ ಡೆವಲ್​​ಮೆಂಟ್​ಗಳಾಗಿವೆ. ಸೋಲ್ಡ್ ಆಗಬಹುದು ಅಂದುಕೊಂಡಿದ್ದವರು ಯಾರೆಲ್ಲಾ ಅನ್​ಸೋಲ್ಡ್ ಆಗಿದ್ದಾರೆ? ನಿರೀಕ್ಷೆಗೆ ಮೀರಿ ಹಣ ಪಡೆದುಕೊಂಡ ಆಟಗಾರರು ಯಾರೆಲ್ಲಾ ಅನ್ನೋ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ..

ಈ ಬಾರಿಯ ಆಕ್ಷನ್​ನಲ್ಲಿ ದೊಡ್ಡ ಸರ್​ಪ್ರೈಸ್ ಅಂದ್ರೆ, 20 ವರ್ಷದ ಫಸ್ಟ್ ಕ್ಲಾಸ್ ಕ್ರಿಕೆಟರ್ ಸಮೀರ್​ ರಿಜ್ವಿ ಸೋಲ್ಡ್ ಔಟ್ ಆದ ಅಮೌಂಟ್. ಸಮೀರ್​ ರಿಜ್ವಿ ಸದ್ಯ ಫಸ್ಟ್ ಕ್ಲಾಸ್ ಕ್ರಿಕೆಟರ್​ ಆಗಿದ್ದು, ಈ ಬಾರಿ ಉತ್ತರಪ್ರದೇಶ ಟಿ-20 ಲೀಗ್​ನಲ್ಲಿ ಕೇವಲ 9 ಮ್ಯಾಚ್​ಗಳಲ್ಲಿ 455 ರನ್ ಹೊಡೆದಿದ್ದಾರೆ. 188.8 ಸ್ಟ್ರೈಕ್​​ರೇಟ್​ನಲ್ಲಿ ಸ್ಕೋರ್ ಮಾಡಿದ್ದು, 2 ಸೆಂಚೂರಿ ಕೂಡ ಹೊಡೆದಿದ್ದಾರೆ. ಹೀಗಾಗಿ 20 ವರ್ಷದ ಯಂಗ್ ಬ್ಯಾಟ್ಸ್​​ಮನ್​​ನನ್ನ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 8.4 ಕೋಟಿ ರೂಪಾಯಿ ಕೊಟ್ಟು ಖರೀದಿಸಿದೆ.

ಇದನ್ನೂ ಓದಿ: ಹಿಟ್ ​ಮ್ಯಾನ್​ ಗೆ 5 ಫ್ರಾಂಚೈಸಿಗಳ ಗಾಳ! – ಸೈಲೆಂಟ್ ಆಗಿದ್ಯಾಕೆ ರೋಹಿತ್ ಶರ್ಮಾ?

ತಮಿಳುನಾಡಿನ ಯಂಗ್​ ಕ್ರಿಕೆಟರ್​ ಶಾರುಖ್​​ ಖಾನ್​ಗೆ ಈ ಬಾರಿ ಲಾಟ್ರಿಯೇ ಹೊಡೆದಿದೆ. ಶಾರುಖ್ ಖಾನ್​ರನ್ನ ಸಿಎಸ್​​ಕೆಯ ಪರ್ಚೇಸ್ ಮಾಡಬಹುದು ಅಂತಾ ಅಂದುಕೊಳ್ಳಲಾಗಿತ್ತು. ಆದ್ರೆ, ಶಾರುಖ್​ರನ್ನ ಗುಜರಾತ್ ಟೈಟಾನ್ಸ್ ಖರೀದಿ ಮಾಡಿದೆ. ಬರೋಬ್ಬರಿ 7.40 ಕೋಟಿ ರೂಪಾಯಿ ನೀಡಿ ಶಾರುಖ್ ಖಾನ್​ರನ್ನ ಟೀಂಗೆ ಸೇರ್ಪಡೆಗೊಳಿಸಿದೆ. ಅಂದ್ರೆ ರಚಿನ್ ರವೀಂದ್ರಗಿಂತಲೂ ಹೆಚ್ಚು ಹಣ ಶಾರುಖ್ ಖಾನ್​ಗೆ ಸಿಗ್ತಿದೆ. ರಚಿನ್ 1.50 ಕೋಟಿಗೆ ಸಿಎಸ್​ಕೆಗೆ ಸೋಲ್ಡ್ ಆಗಿದ್ದಾರೆ. ಒಬ್ಬ ಇಂಟರ್​ನ್ಯಾಷನಲ್ ಲೆವೆಲ್ ಪ್ಲೇಯರ್​ಗಿಂತಲೂ ಹೆಚ್ಚು ಡಿಮ್ಯಾಂಡ್ ಶಾರುಖ್​ ಖಾನ್​​ಗೆ ಬಂದಿರೋದು ನಿಜಕ್ಕೂ ಆಶ್ಚರ್ಯದ ಸಂಗತಿ. ಶಾರುಖ್ ಖಾನ್ ಇದುವರೆಗೆ 33 ಐಪಿಎಲ್​​ ಮ್ಯಾಚ್​ಗಳನ್ನಾಡಿದ್ದಾರೆ. 423 ರನ್​​ ಗಳಿಸಿದ್ದಾರೆ. ಬ್ಯಾಟಿಂಗ್ ಎವರೇಜ್ 134.8. ಹೀಗಾಗಿ ಶಾರುಖ್​ ಖಾನ್​​ಗೆ ಇಷ್ಟೊಂದು ಹಣ ಚೆಲ್ಲಿದ್ದಾರೆ.

ಇನ್ನು ಜಾರ್ಖಂಡ್​ ಮೂಲದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಕುಮಾರ್​​ ಕುಶಾಗ್ರಾಗೂ ಬಂಪರ್ ಲಾಟ್ರಿ ಹೊಡೆದಿದೆ. ಫಸ್ಟ್ ಕ್ಲಾಸ್ ಕ್ರಿಕೆಟರ್ 11 ಮ್ಯಾಚ್​ಗಳನ್ನಾಡಿದ್ದು, 140 ರನ್ ಹೊಡೆದಿದ್ದಾರೆ. 117.6 ಸ್ಟ್ರೈಕ್​ರೇಟ್. ದೆಹಲಿ ಕ್ಯಾಪಿಟಲ್ಸ್ ಕುಮಾರ್​​ ಕುಶಾಗ್ರಾರನ್ನ 7.2 ಕೋಟಿ ರೂಪಾಯಿ ಕೊಟ್ಟು ತಂಡಕ್ಕೆ ಸೇರಿಸಿಕೊಂಡಿದೆ.

ಇನ್ನು ಕಳೆದ ಸೀಸನ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ಆಡಿದ್ದ ಯಶ್​ ದಯಾಳ್​ರನ್ನ 5 ಕೋಟಿ ರೂಪಾಯಿ ಕೊಟ್ಟು ರಾಯಲ್​ ಚಾಲೆಂಜರ್ಸ್ ಬೆಂಗಳೂರು ಖರೀದಿಸಿದೆ. ಯಶ್ ದಯಾಳ್ ಬೌಲರ್​ ಆಗಿದ್ದು, 14 ಐಪಿಎಲ್​ ಮ್ಯಾಚ್​ಗಳನ್ನಾಡಿದ್ದಾರೆ. 13 ವಿಕೆಟ್ ಪಡೆದಿದ್ದಾರೆ.

ಇನ್ನು ಶುಭಮ್ ದುಬೆ 5.8 ಕೋಟಿ ರೂಪಾಯಿಗೆ ಸೋಲ್ಡ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್​ ದುಬೆರನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ವರ್ಷ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದುಬೆ 7 ಮ್ಯಾಚ್​ಗಳಲ್ಲಿ 221 ರನ್ ಹೊಡೆದಿದ್ದಾರೆ. 187.28 ಬ್ಯಾಟಿಂಗ್​ ಸ್ಟ್ರೈಕ್​ರೇಟ್. ಹೀಗಾಗಿ ರಾಜಸ್ಥಾನ ದುಬೆಗೆ 5.8 ಕೋಟಿ ಕೊಟ್ಟಿದೆ.

ಇದ್ರ ಜೊತೆಗೆ ಸೋಲ್ಡ್ ಆಗ್ತಾರೆ ಅನ್ನೋ ನಿರೀಕ್ಷೆ ಇದ್ರೂ ಅನ್​ಸೋಲ್ಡ್ ಆಗಿರೋ ಕೆಲ ಪ್ಲೇಯರ್ಸ್​ಗಳ ಬಗ್ಗೆಯೂ ಮಾಹಿತಿ ನೀಡ್ತೀನಿ. ಮುಂಬೈ ಮೂಲದ ಬ್ಯಾಟ್ಸ್​ಮನ್ ಸರ್ಫರಾಜ್​ ಖಾನ್​ರನ್ನ ಖರೀದಿಸೋಕೆ ಯಾವ ಫ್ರಾಂಚೈಸಿಗಳು ಕೂಡ ಮುಂದೆ ಬಂದಿಲ್ಲ. ಸರ್ಫರಾಜ್​ ಖಾನ್​ರದ್ದು ಒಂಥರಾ ದುರಂತ ಕಥೆ. ಟೀಂ ಇಂಡಿಯಾದಲ್ಲಿ ಸರ್ಫರಾಜ್​ಗೆ ಚಾನ್ಸ್​ ಸಿಗ್ತಿಲ್ಲ. ಐಪಿಎಲ್​​ನಲ್ಲೂ ಯಾರೂ ಖರೀದಿಸ್ತಿಲ್ಲ. ಫಸ್ಟ್​ ಕ್ಲಾಸ್ ಕ್ರಿಕೆಟ್​​ನಲ್ಲಷ್ಟೇ ರನ್​ ಗುಡ್ಡೆ ಹಾಕ್ತಾ ಇದ್ದಾರೆ. ಆದ್ರೆ ಇತ್ತೀಚಿನ ಟೂರ್ನಿಗಳಲ್ಲಿ ಅವರ ಪರ್ಫಾಮೆನ್ಸ್ ಡಲ್​ ಆಗಿದ್ದು, ಹೀಗಾಗಿ ಐಪಿಎಲ್​ ಆಕ್ಷನ್​ನಲ್ಲೂ ಹೊಡೆತ ತಿಂದಿದ್ದಾರೆ.

ಇನ್ನು ಇಂಗ್ಲೆಂಡ್​ನ ಕ್ರಿಕೆಟರ್ ಆದಿಲ್ ರಶೀದ್ ಕೂಡ ಈ ಬಾರಿ ಅನ್​ಸೋಲ್ಡ್ ಆಗಿದ್ದಾರೆ. ಹಾಗೆಯೇ ಸೌತ್​​ ಆಫ್ರಿಕಾದ ಸ್ಪಿನ್ನರ್ ತಬ್ರೀಜ್ ಶಮ್ಷಿಯನ್ನ ಕೂಡ ಯಾವ ಫ್ರಾಂಚೈಸಿಯೂ ಖರೀದಿಸಿಲ್ಲ. ಅಫ್ಘಾನಿಸ್ತಾನದ ಪ್ರತಿಭೆ ಮುಜೀಬ್ ರೆಹಮಾನ್ ಕುಡ ಅನ್​ಸೋಲ್ಡ್ ಆಗಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾದ ಜಾಶ್ ಇಂಗ್ಲಿಷ್ ಮತ್ತು ಶ್ರೀಲಂಕಾದ ಕುಸಾಲ್ ಮೆಂಡಿಸ್​ರನ್ನ ಕೂಡ ಯಾರೂ ಖರೀದಿಸಿಲ್ಲ. ಇವಿಷ್ಟು ಈ ಬಾರಿಯ ಐಪಿಎಲ್​ ಮಿನಿ ಆಕ್ಷನ್​ನಲ್ಲಿ ಸರ್​ಫ್ರೈಸ್ ಆಗಿರೋ ಸೋಲ್ಡ್ ಮತ್ತು ಅನ್​ಸೋಲ್ಡ್ ಪ್ಲೇಯರ್ಸ್​ಗಳ ಲಿಸ್ಟ್.

Shwetha M