ಆಸೀಸ್ ಸೋಲಿಗೆ RCB ಕಾರಣ – ಜೋಶ್ ಹೇಜಲ್ ವುಡ್ ಫೈನಲ್ ಆಡಿದ್ದೇ ತಪ್ಪಾ?
WTC ಕಳ್ಕೊಂಡ AUS ಹೊಸ ಕಿರಿಕ್

ಆಸೀಸ್ ಸೋಲಿಗೆ RCB ಕಾರಣ – ಜೋಶ್ ಹೇಜಲ್ ವುಡ್ ಫೈನಲ್ ಆಡಿದ್ದೇ ತಪ್ಪಾ?WTC ಕಳ್ಕೊಂಡ AUS ಹೊಸ ಕಿರಿಕ್

ಜೂನ್ 14ರಂದು ಇಂಗ್ಲೆಂಡ್​ನ ಲಾರ್ಡ್ಸ್ ಮೈದಾನದಲ್ಲಿ ನಡೆದ ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡ ಗೆದ್ದು ಐಸಿಸಿ ಟ್ರೋಫಿಯನ್ನ ತನ್ನದಾಗಿಸಿಕೊಂಡಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಟೆಂಬಾ ಬವುಮಾ ಮತ್ತು ಏಡನ್ ಮಾರ್ಕ್ರಂ ಜೋಡಿಯ ಅದ್ಭುತ ಜೊತೆಯಾಟದಿಂದಾಗಿ ಆಸಿಸ್ ಬೌಲರ್​ಗಳು ಥಂಡಾ ಹೊಡೆದಿದ್ರು. ಇಲ್ಲಿ ಆಸಿಸ್ ಬೌಲರ್​ಗಳು ಇವ್ರಿಬ್ಬರ ವಿಕೆಟ್ ಬೇಟೆಯಾಡಲು ಸಾಧ್ಯವಾಗದಿರಲು ಐಪಿಎಲ್ ಕಾರಣ ಅಂತೆ. ಅದೂ ಕೂಡ ಆರ್​ಸಿಬಿ ಪರ ಫೈನಲ್ ಪಂದ್ಯ ಆಡಿದ್ದ ಜೋಶ್ ಹೇಜಲ್​ವುಡ್ ಮೇನ್ ರೀಸನ್ ಅಂತಾ ಆಸಿಸ್ ಮಾಜಿ ಆಟಗಾರ ಮಿಚೆಲ್ ಜಾನ್ಸನ್ ಸ್ಫೋಟಕ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ICUನಲ್ಲಿ ತಾಯಿ.. ENGಗೆ ಗಂಭೀರ್ – ತಂಡಕ್ಕಾಗಿ ಗೌತಮ್ ಅತಿದೊಡ್ಡ ತ್ಯಾಗ

ಲಾರ್ಡ್ಸ್‌ ಮೈದಾನದಲ್ಲಿ ನಡೆದ ಫೈನಲ್‌ ಮ್ಯಾಚಲ್ಲಿ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿ ದಕ್ಷಿಣ ಆಫ್ರಿಕಾ ಚಾಂಪಿಯನ್ ಪಟ್ಟಕ್ಕೇರಿತ್ತು. ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 212 ರನ್‌ ಕಲೆ ಹಾಕಿತು. ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 138 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ಇನಿಂಗ್ಸ್‌ನಲ್ಲಿ ಆಸೀಸ್‌ 207 ರನ್ ಸೇರಿಸಿತು. ದಕ್ಷಿಣ ಆಫ್ರಿಕಾ ಗುರಿಯನ್ನು ಬೆನ್ನಟ್ಟಿ 5 ವಿಕೆಟ್‌ ನಷ್ಟಕ್ಕೆ 282 ರನ್‌ ಕಲೆ ಹಾಕಿ ಜಯ ಸಾಧಿಸಿತು. ಌಕ್ಚುಲಿ ಈ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಬೌಲರ್‌ಗಳ ಪ್ರದರ್ಶನ ಕನ್ಸಿಸ್ಟೆನ್ಸಿಯಾಗಿ ಇರಲಿಲ್ಲ. ಇದರ ಪರಿಣಾಮವೇ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕೈ ಚೆಲ್ಲಬೇಕಾಯಿತು ಎಂದು ಆಸ್ಟ್ರೇಲಿಯಾದ ಮಾಜಿ ವೇಗಿ ಮಿಚೆಲ್ ಜಾನ್ಸನ್ ಆರೋಪ ಮಾಡಿದ್ದಾರೆ. ಅಲ್ಲದೆ ಇವರು ಆರ್‌ಸಿಬಿ ತಂಡದ ವೇಗದ ಬೌಲರ್‌ ಮೇಲೂ ಜೋಶ್ ಹೇಜಲ್ ವುಡ್ ಮೇಲೂ ಕಿಡಿ ಕಾರಿದ್ದಾರೆ.

ಆಸಿಸ್ ಸೋಲಿಗೆ RCB ಕಾರಣ!

ಡಬ್ಲ್ಯೂಟಿಸಿಗೆ ಜೋಶ್ ಹೇಜಲ್‌ ವುಡ್‌ ಮೊದಲ ಆಯ್ಕೆಯ ಆಟಗಾರ

ಸ್ಕಾಟ್ ಬೋಲ್ಯಾಂಡ್‌ ತಂಡದಿಂದ ಹೊರಗಿಟ್ಟು ಹೇಜಲ್ ​ವುಡ್ ಸ್ಥಾನ

ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಜೋಶ್‌ ಕೇವಲ 2 ವಿಕೆಟ್‌ ಕಬಳಿಸಿದ್ದಾರೆ

ಪ್ರದರ್ಶನ ಕಳಪೆಯಾಗಿತ್ತು ಅಂತಾ ಆಸೀಸ್‌ ಮಾಜಿ ವೇಗಿ ಮಿಚೆಲ್ ಜಾನ್ಸನ್ ಕಿಡಿ

ಜೋಶ್‌ ಹ್ಯಾಜಲ್‌ವುಡ‌ ಐಪಿಎಲ್​ನಲ್ಲಿ ಆರ್​ಸಿಬಿ ಪರ ಆಡುವ ಬದಲು

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ಗೆ ತಯಾರಿ ನಡೆಸಿದ್ದರೆ ಚೆನ್ನಾಗಿರುತ್ತಿತ್ತು

ಹೇಜಲ್‌ ವುಡ್‌ ಕಳೆದ ಕೆಲವು ತಿಂಗಳುಗಳಿಂದ ಫಿಟ್ನೆಸ್‌ ಸಮಸ್ಯೆ

ಸಿದ್ಧತೆ ನಡೆಸುವ ಬದಲು, ರೀ ಸ್ಟಾರ್ಟ್ ಆಗಿದ್ದ ಐಪಿಎಲ್‌ ನಲ್ಲಿ ಆಡಲು ಮನಸ್ಸು

ಅಭ್ಯಾಸ ನಡೆಸೋಕೆ ಹೆಚ್ಚಿನ ಅವಕಾಶ ಸಿಗದೆ ಇದ್ದಿದ್ದೇ ಆಸ್ಟ್ರೇಲಿಯಾ ಸೋಲಿಗೆ ಕಾರಣ

ಆಸ್ಟ್ರೇಲಿಯಾ ಆಟಗಾರರು ಮರಳಿ ಐಪಿಎಲ್​ ಆಡಲು ಹೋಗಬಾರದಿತ್ತು

ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯಿಂದಾಗಿ ಐಪಿಎಲ್​ ಅನ್ನು ಮೇ 9 ರಂದು ಒಂದು ವಾರ ಸ್ಥಗಿತಗೊಳಿಸಲಾಯಿತು. ಬಳಿಕ ಮೇ 17ರಿಂದ ಐಪಿಎಲ್ ಪುನಾರಂಭಕ್ಕೆ ಬಿಸಿಸಿಐ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟ ಮಾಡಿತ್ತು. ಪರಿಣಾಮ ಮೇ 25ರಂದು ನಿಗದಿಯಾಗಿದ್ದ ಫೈನಲ್ ಪಂದ್ಯವನ್ನ ಜೂನ್ 3ಕ್ಕೆ ಮುಂದೂಡಲಾಗಿದೆ. 10 ದಿನಗಳ ಕಾಲ ಪೋಸ್ಟ್ ಪೋನ್ ಆಗಿದ್ರಿಂದ ಕೆಲ ವಿದೇಶಿ ಆಟಗಾರರು ನ್ಯಾಷನಲ್ ಡ್ಯೂಟಿಗಾಗಿ ತಮ್ಮ ದೇಶಗಳಿಗೆ ವಾಪಸ್ ಆಗಿದ್ರು. ಆದ್ರೆ ಜೋಶ್ ಹೇಜಲ್​​ವುಡ್ ಇಂಜುರಿಯಿಂದ ರಿಕವರ್ ಆಗಿ ಆರ್​ಸಿಬಿಯ ಕೊನೆಯ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ರು. ಪಂಜಾಬ್ ವಿರುದ್ಧ ಎಲಿಮಿನೇಟರ್ 1ನಲ್ಲಿ 3 ವಿಕೆಟ್ ಬೇಟೆಯಾಡಿದ್ರೆ ಫೈನಲ್ ಪಂದ್ಯದಲ್ಲಿ 1 ವಿಕೆಟ್ ಉರುಳಿಸಿದ್ರು. ಆರ್​ಸಿಬಿ ಪರ ಬೌಲಿಂಗ್ ಬ್ರಹ್ಮಾಸ್ತ್ರವಾಗಿದ್ದ ಹೇಜಲ್​ವುಡ್ ಈ ಸೀಸನ್​ನಲ್ಲಿ ಹೈಯೆಸ್ಟ್ ವಿಕೆಟ್ ಟೇಕರ್ ಕೂಡ ಆಗಿದ್ರು. ಆದ್ರೆ ಆರ್​ಸಿಬಿ ಪರ ಅಂತಿಮ ಪಂದ್ಯಗಳನ್ನ ಆಡೋ ಬದಲು ಡಬ್ಲ್ಯೂಟಿಸಿ ಫೈನಲ್​ಗೆ ತಯಾರಿ ನಡೆಸಿದ್ರೆ ನಾವೇ ಗೆಲ್ಲುತ್ತಿದ್ವಿ ಅನ್ನೋದು ಮಿಚೆಲ್ ಜಾನ್ಸನ್ ವಾದ.

Shantha Kumari