ಪ್ರವಾಸಿಗರ ಎದುರೇ ಮಾಯವಾಗುತ್ತೆ ಈ ಕಡಲತೀರ! -ಸಮುದ್ರವೂ ಕಣ್ಣಾಮುಚ್ಚಾಲೆ ಆಡುತ್ತೆ ಗೊತ್ತಾ?

ಪ್ರವಾಸಿಗರ ಎದುರೇ ಮಾಯವಾಗುತ್ತೆ ಈ ಕಡಲತೀರ! -ಸಮುದ್ರವೂ ಕಣ್ಣಾಮುಚ್ಚಾಲೆ ಆಡುತ್ತೆ ಗೊತ್ತಾ?

ಮಕ್ಕಳು ಕಣ್ಣಾಮುಚ್ಚಾಲೆ ಆಡೋದನ್ನ ನಾವೆಲ್ಲಾ ಕೇಳಿದ್ದೇವೆ. ಆದ್ರೆ ಸಮುದ್ರ ಕೂಡ ಕಣ್ಣಾಮುಚ್ಚಾಲೆ ಆಡುತ್ತೆ ಅಂದ್ರೆ ನೀವು ನಂಬ್ತೀರಾ. ನಂಬಲೇಬೇಕು. ಸಮುದ್ರದ ಅಲೆಗಳಿಗೆ ಮೈವೊಡ್ಡಿ ಆಡೋ ಮಜಾನೇ ಬೇರೆ. ಆದ್ರೆ ಈ ಬೀಚ್ ಕೆಲವೊಮ್ಮೆ ಮಾಯವಾಗಿ ಬಿಡುತ್ತೆ.

ಇದನ್ನೂ ಓದಿ : ಈ ಗ್ರಾಮದಲ್ಲಿ ಪಕ್ಷಿಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತವೆ – ಹಿಂಡು ಹಿಂಡು ಪಕ್ಷಿಗಳನ್ನು ಕೊಲ್ಲುತ್ತಿವೆಯಾ ಆತ್ಮಗಳು..?

ಒಡಿಶಾದಲ್ಲಿರುವ ಈ ಬೀಚ್​ಗೆ ಹೈಡ್  & ಸೀಕ್ ಬೀಚ್ ಅಂತಾನೇ ಕರೆಯಲಾಗುತ್ತೆ. ಬಾಲಸೋರ್ ಜಿಲ್ಲೆಯ ರೈಲು ನಿಲ್ದಾಣದಿಂದ 16 ಕಿಲೋಮೀಟರ್ ದೂರದಲ್ಲಿರುವ ಈ ಕಡಲತೀರ ವಿಸ್ಮಯ ರೀತಿಯಲ್ಲಿ ದಿನಕ್ಕೆ 2 ಬಾರಿ ಸ್ಥಾನ ಬದಲಾವಣೆ ಮಾಡುತ್ತೆ. ಅಂದ್ರೆ ಅಲೆಗಳ ಕಡಿಮೆ ಉಬ್ಬರವಿಳಿತದ ಸಮಯದಲ್ಲಿ ಸುಮಾರು 5 ಕಿಲೋಮೀಟರ್ ವರೆಗೆ ನೀರು ಹಿಂದಕ್ಕೆ ಹೋಗುತ್ತದೆ. ಆಗ ವಿಶಾಲವಾದ ಬಯಲು ಉಂಟಾಗುತ್ತೆ. ಇಂಥಾ ಟೈಮಲ್ಲಿ ಮಕ್ಕಳು ಖಾಲಿ ಜಾಗದಲ್ಲಿ ಆಟ ಆಡುತ್ತಾರೆ. ಬಳಿಕ ನೀರು ಮರಳಿದಾಗ ಸಮುದ್ರದ ರೋಮಾಂಚನಕಾರಿ ಅನುಭವವಾಗುತ್ತದೆ. ಈ ಹೈಡ್ ಆಂಡ್ ಸೀಕ್ ಬೀಚ್‍ಗೆ ಭೇಟಿ ನೀಡಲು ನವೆಂಬರ್ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಒಳ್ಳೇ ಟೈಂ. ಯಾಕಂದ್ರೆ ಈ ತಿಂಗಳುಗಳಲ್ಲಿ ಹಲವಾರು ನೃತ್ಯಗಳು, ಕಲೆ ಮತ್ತು ಸಾಂಸ್ಕತಿಕ ಕಾರ್ಯಕ್ರಮಗಳನ್ನ ನಡೆಸಲಾಗುತ್ತದೆ.

Shantha Kumari