ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆ – ರಕ್ಷಣಾ ತಂಡಗಳಿಗೆ ಸಿಕ್ಕಿತು ಮಹತ್ವದ ಸುಳಿವು!

ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆ – ರಕ್ಷಣಾ ತಂಡಗಳಿಗೆ ಸಿಕ್ಕಿತು ಮಹತ್ವದ ಸುಳಿವು!

ಟೈಟಾನಿಕ್ ಹಡಗಿನ ಅವಶೇಷಗಳಿರುವ ಕಡೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆಯಾಗಿದೆ. ಇದೀಗ ಜಲಾಂತರ್ಗಾಮಿ ನೌಕೆಯ ಬಗ್ಗೆ ರಕ್ಷಣಾ ತಂಡಗಳಿಗೆ ಮಹತ್ವದ ಸುಳಿವೊಂದು ಸಿಕ್ಕಿದೆ.

ಟೈಟಾನಿಕ್​ ಹಡಗಿನ ಅವಶೇಷಗಳನ್ನು ನೋಡಲು ಜಲಾಂತರ್ಗಾಮಿ ನೌಕೆಯಲ್ಲಿ ತೆರಳಿ ನಾಪತ್ತೆಯಾಗಿದ್ದ ಐವರು ಸಿಬ್ಬಂದಿ ಇನ್ನೂ ಜೀವಂತ ಇರುವ ಸಾಧ್ಯತೆ ಇದೆ ಎಂಬ ಸುಳಿವು ರಕ್ಷಣಾ ತಂಡಗಳಿಗೆ ಮಹತ್ವದ ಸುಳಿವು ಸಿಕ್ಕಿದೆ. ಹುಡುಕಲ್ಪಡುತ್ತಿರುವ ನೌಕೆಯಿಂದ ಪ್ರತಿ ಅರ್ಧಗಂಟೆಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ ಎಂದು ರಕ್ಷಣಾ ತಂಡಗಳು ತಿಳಿಸಿವೆ.

ಇದನ್ನೂ ಓದಿ:  ‘ಟೈಟಾನಿಕ್’ ಹಡಗಿನ ಅವಶೇಷಗಳನ್ನು ನೋಡಲು ಹೋದಾಗ ದುರಂತ – ಪ್ರವಾಸಿಗರಿದ್ದ ಜಲಾಂತರ್ಗಾಮಿ ನಾಪತ್ತೆ..!

ಯುಎಸ್​ ಕರಾವಳಿ ಪಡೆ, ಕೆನಡಾದ ಜಂಟಿ ರಕ್ಷಣಾ ಕೇಂದ್ರ ಮತ್ತು ಫ್ರಾನ್ಸ್​ನ ಸಂಶೋಧನಾ ಹಡಗುಗಳು ಕಾಣೆಯಾಗಿರುವ ಆರ್ಕಾ (ಸಾಗರದ ಡಾಲ್ಫಿನ್ ಕುಟುಂಬಕ್ಕೆ ಸೇರಿದ ಹಲ್ಲಿನ ತಿಮಿಂಗಿಲವಾಗಿದ್ದು, ಇದನ್ನು ಕಿಲ್ಲರ್​ ತಿಮಿಂಗಲ ಎಂದು ಕರೆಯಲಾಗುತ್ತದೆ) ಗಾತ್ರದ ಜಲಾಂತರ್ಗಾಮಿ ನೌಕೆಯ ಪತ್ತೆಗೆ ನಿರಂತರವಾಗಿ ಶ್ರಮಿಸುತ್ತಿವೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಎಕ್ಸ್‌ಪ್ಲೋರರ್ಸ್ ಕ್ಲಬ್ ಹೆಸರಿನ ಗುಂಪೊಂದು ಹುಡುಕಾಟದ ಸ್ಥಳದಲ್ಲಿ ದೊರೆತ ದತ್ತಾಂಶದ ಪ್ರಕಾರ ನಾಪತ್ತೆಯಾಗಿರುವವರು ಇನ್ನೂ ಜೀವಂತವಾಗಿರುವ ಬಗ್ಗೆ ಚಿಹ್ನೆಗಳು ದೊರೆಯುತ್ತಿವೆ ಎಂದು ತಿಳಿಸಿದೆ.

ನೀರಿನ ಒಳಗಿನ ಶಬ್ಧವನ್ನು ಗುರುತಿಸುವ ಸೋನಾರ್​ ಅನ್ನು ರಕ್ಷಣಾ ಪಡೆಗಳು ಬಳಸಿದ್ದು, ಎರಡು ದಿನಗಳಿಗೂ ಮುಂಚೆ ಜಲಾಂತರ್ಗಾಮಿ ನೌಕೆ ನಾಪತ್ತೆಯಾದ ಸ್ಥಳದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಬಡಿಯುವ ಶಬ್ಧ ಕೇಳಿಬರುತ್ತಿದೆ. ನಾಪತ್ತೆಯಾದ ನೌಕೆಯಲ್ಲಿ ಐವರು ಸಿಬ್ಬಂದಿ ಜೀವಂತವಾಗಿ ಇದ್ದಾರೆ. ಜಲಾಂತರ್ಗಾಮಿ ನೌಕೆಯಲ್ಲಿ ತುರ್ತು ಸಂದರ್ಭದಲ್ಲಿ 96 ಗಂಟೆಗಳಷ್ಟು ಆಮ್ಲಜನಕ ಪೂರೈಕೆಯಾಗುವಂತೆ ನೌಕೆಯನ್ನು ವಿನ್ಯಾಸಗೊಳಿಸಲಾಗಿದೆ.  ಇನ್ನು 30 ಗಂಟೆಗಳಿಗೆ ಬೇಕಾದ ಆಮ್ಲಜನಕ ಮಾತ್ರ ಉಳಿದಿದೆ. ಆದರೆ, ಈಗಾಗಲೇ ಎರಡು ದಿನಗಳು ಕಳೆದಿದ್ದು, ಪತ್ತೆಯಾಗದಿದ್ದಲ್ಲಿ ಆಮ್ಲಜನಕ ಕೊರೆತೆಯಿಂದ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಯುಎಸ್​ ಕರಾವಳಿ ಪಡೆ ತಿಳಿಸಿದೆ.

ವಿಫಲ ಈ ರಕ್ಷಣಾ ಕಾರ್ಯಾಚರಣೆಯ ಆಪರೇಟರ್​ ಓಸನ್​ಗೇಟ್​ ಎಕ್ಸ್‌ಪೆಡಿಶನ್ಸ್​ಗೆ ಘಟನಾ ಸ್ಥಳದ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದು, ನೀರೊಳಗಿನ ಹುಡುಕಾಟ ಪ್ರಯತ್ನದಲ್ಲಿ ಮುಂಚೂಣಿ ಪಾತ್ರ ವಹಿಸಿದೆ. ಕಾರ್ಬನ್ ಫೈಬರ್ ಮತ್ತು ಟೈಟಾನಿಯಂನಿಂದ ಮಾಡಿದ 6.7 ಮೀಟರ್ ಉದ್ದದ ನೌಕೆಯ ಯಾವುದೇ ಚಿಹ್ನೆಗಳನ್ನು ಕಂಡುಹಿಡಿಯಲು ವಾಯುಯಾನ ಹುಡುಕಾಟಗಳು ವಿಫಲವಾಗಿವೆ ಎಂದು ಯುಎಸ್​ ಕರಾವಳಿ ಪಡೆ ತಿಳಿಸಿದೆ.

ಉತ್ತರ ಅಟ್ಲಾಂಟಿಕ್‌ನ 20,000 ಚದರ-ಕಿಲೋಮೀಟರ್ ಪ್ರದೇಶವನ್ನು ಶೋಧಿಸುವ ಮೂಲಕ ಭಾರೀ ಪ್ರಯತ್ನವನ್ನು ಕೈಗೊಂಡಿರುವ ರಕ್ಷಣಾ ತಂಡಗಳು, ಕಡಿಮೆ ಗೋಚರತೆ ಮತ್ತು ಪ್ರತಿಕೂಲ ಹವಾಮಾನದ ವಿರುದ್ಧ ಸೆಡ್ಡು ಹೊಡೆದು ನಿಂತಿವೆ. ಹುಡುಕಾಟದ ಪ್ರದೇಶ ಕಡು ಕಪ್ಪಾಗಿದೆ. ಅಲ್ಲದೆ, ಹೆಪ್ಪುಗಟ್ಟುವಷ್ಟು ಚಳಿಯಾಗಿದೆ. ಸಮುದ್ರದ ತಳವು ಕೆಸರುಮಯವಾಗಿದೆ. ಎಷ್ಟರಮಟ್ಟಿಗೆ ಕೆಸರು ಇದೆ ಅಂದರೆ, ಮುಖದ ಮುಂದೆ ಕೈ ತಂದರೂ ಕಾಣುವುದಿಲ್ಲ. ಬಾಹ್ಯಾಕಾಶಕ್ಕೆ ಹೋಗುವ ಗಗನಯಾತ್ರಿಗಳಂತೆಯೇ ಅನುಭವವಾಗುತ್ತದೆ ಎಂದು ಟೈಟಾನಿಕ್​ ಪರಿಣಿತ ಟಿಮ್​ ಮಾಲ್ಟಿನ್​ ತಿಳಿಸಿದ್ದಾರೆ.

suddiyaana