ಬಾಂಗ್ಲಾದಲ್ಲಿ ನಿಲ್ಲದ ಹಿಂದೂಗಳ ಹತ್ಯೆ – ದೇವಾಲಯದ ಉಸ್ತುವಾರಿ ಹೆಣವಾಗಿ ಪತ್ತೆ

ಬಾಂಗ್ಲಾದೇಶದ ಸದರ್ ಉಪಜಿಲಾದ ಗುಡ್ಡಗಾಡು ಪ್ರದೇಶದಲ್ಲಿ ಮೂರು ದಿನಗಳಿಂದ ನಾಪತ್ತೆಯಾಗಿದ್ದ ದೇವಾಲಯದ ಉಸ್ತುವಾರಿ ವಹಿಸಿಕೊಂಡಿದ್ದ ವ್ಯಕ್ತಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ನಯನ್ ದಾಸ್ (35) ಎಂದು ಗುರುತಿಸಲಾಗಿದೆ. ಅವರು ಸತ್ಕಾನಿಯಾದವರಾಗಿದ್ದು, ಖುರುಷ್ಖುಲ್ ಒಕ್ಕೂಟದ ಪುಲಿಶ್ಶೋರ ಘೋನಾ ನಾಗ್ ಪಂಚಮಿ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ವರ್ಷದ ಆರಂಭದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದ ನಂತರ ಬಾಂಗ್ಲಾದೇಶದಲ್ಲಿ ನಡೆದ ಮೊದಲ ಹಿಂದೂ ಹತ್ಯೆಯ ಘಟನೆ ಇದಾಗಿದೆ.
ಪೊಲೀಸರು ಮತ್ತು ಸ್ಥಳೀಯ ಮೂಲಗಳ ಪ್ರಕಾರ, ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ನಯನ ಅವರನ್ನು ಖುರುಷ್ಕುಲ್ ಪ್ರದೇಶದಲ್ಲಿರುವ ಅವರ ನಿವಾಸದಿಂದ ಅಪರಿಚಿತ ವ್ಯಕ್ತಿಗಳ ಗುಂಪೊಂದು ಹೊರಗೆ ಕರೆದಿದೆ ಎನ್ನಲಾಗಿದೆ. ಅದಾದ ಕೆಲವೇ ದಿನಗಳಲ್ಲಿ ಅವರು ನಾಪತ್ತೆಯಾಗಿದ್ದರು. ಬಳಿಕ ಕುಟುಂಬಸ್ಥರು ಹುಡುಕಾಡಿದ್ದಾರೆ ಆದರೆ ನಯನ್ ದಾಸ್ ಪತ್ತೆಯಾಗದ ಕಾರಣ ಕಾಕ್ಸ್‌ನ ಬಜಾರ್ ಸದರ್ ಮಾದರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ನೀರು ಕುಡಿಯಲು ಹೋದ ಗಜರಾಜ ದುರಂತ ಅಂತ್ಯ! – ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ 3 ದಿನಗಳ ನಂತ್ರ ಸಾವು!
ಬುಧವಾರ ಮಧ್ಯಾಹ್ನ, 30 ರಿಂದ 35 ಜನರ ಗುಂಪು ದೇವಾಲಯದ ಪೂರ್ವಕ್ಕೆ ದೂರದ ಬೆಟ್ಟದ ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಅವರ ಶವವನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿತು. ಕುತ್ತಿಗೆಗೆ ಸ್ಕಾರ್ಫ್ ಸುತ್ತಿಕೊಂಡಿದ್ದ ಶವವನ್ನು ಪೊಲೀಸರು ವಶಪಡಿಸಿಕೊಂಡು, ಶವಪರೀಕ್ಷೆಗಾಗಿ ಕಾಕ್ಸ್ ಬಜಾರ್ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಿಂದ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತಿಳಿಯುತ್ತದೆ ಎಂದು ಕಾಕ್ಸ್‌ನ ಬಜಾರ್ ಸದರ್ ಮಾದರಿ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಮೊಹಮ್ಮದ್ ಸಮಿಯುದ್ದೀನ್ ಹೇಳಿದ್ದಾರೆ.
ಕಾಕ್ಸ್ ಬಜಾರ್ ಪೂಜಾ ಉದ್ಜಪನ್ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜೋನಿ ಧಾರ್, ಕುಟುಂಬವನ್ನು ಉಲ್ಲೇಖಿಸಿ, ನಯನ್ ಏಪ್ರಿಲ್ 19 ರಂದು ಅಪರಿಚಿತ ವ್ಯಕ್ತಿಗಳು ಕರೆ ಮಾಡಿದ ನಂತರ ಮನೆಯಿಂದ ಹೊರಟು ಹೋಗಿದ್ದರು ಮತ್ತು ಮತ್ತೆ ಹಿಂತಿರುಗಲಿಲ್ಲ ಎಂದು ಹೇಳಿದ್ದಾರೆ.

ನೋಡಿರಿ

