ನೈಜೀರಿಯಾದಲ್ಲಿ ಗುರಿ ತಪ್ಪಿದ ಡ್ರೋನ್‌ ದಾಳಿ – 85 ನಾಗರಿಕರು ದಾರುಣ ಸಾವು

ನೈಜೀರಿಯಾದಲ್ಲಿ ಗುರಿ ತಪ್ಪಿದ ಡ್ರೋನ್‌ ದಾಳಿ – 85 ನಾಗರಿಕರು ದಾರುಣ ಸಾವು

ಒಂದು ದಶಕಕ್ಕೂ ಹೆಚ್ಚು ಕಾಲ ನೈಜೀರಿಯಾದ ಉತ್ತರವನ್ನು ಅಸ್ಥಿರಗೊಳಿಸಿದ ಉಗ್ರಗಾಮಿ ಹಿಂಸಾಚಾರ ಮತ್ತು ಬಂಡುಕೋರರ ದಾಳಿಯ ವಿರುದ್ಧ ನೈಜೀರಿಯಾದ ಸೇನೆ ಆಗಾಗ ದಾಳಿ ನಡೆಸುತ್ತಲೇ ಇದೆ. ವಾಯುವ್ಯ ನೈಜೀರಿಯಾದಲ್ಲಿ ಸೇನೆಯ ಬಂಡುಕೋರರ ವಿರುದ್ಧ ಡ್ರೋನ್‌ ದಾಳಿ ನಡೆಸಿದ್ದು,  ಡ್ರೋನ್‌ ದಾಳಿ ಗುರಿ ತಪ್ಪಿ ಸುಮಾರು 85 ನಾಗರಿಕರು ದಾರುಣ ಸಾವಿಗೀಡಾಗಿರುವ ಘಟನೆ ನಡೆದಿದೆ.

ಇದನ್ನೂ ಓದಿ: ಚಿಕನ್ ಸಾರು ಮಾಡಿಲ್ಲವೆಂದು ಪತ್ನಿಯನ್ನು ಕೊಲೆಗೈದಿದ್ದ ಪಾಪಿ ಪತಿಗೆ 6 ವರ್ಷ ಜೈಲು ಶಿಕ್ಷೆ!

ಮಂಗಳವಾರ ವಾಯುವ್ಯ ನೈಜೀರಿಯಾದ ಕಡುನಾ ರಾಜ್ಯದ ತುಡುನ್‌ ಬಿರಿ ಗ್ರಾಮದ ಬಳಿ ಭಯೋತ್ಪಾದಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ಆದರೆ ಡ್ರೋನ್‌ ದಾಳಿಯ ಗುರಿ ತಪ್ಪಿದ್ದು, ಸುಮಾರು 85 ನಾಗರಿಕರ ಸಾವಿಗೆ ಕಾರಣವಾಗಿದೆ. ದಾಳಿಯಲ್ಲಿ ಕನಿಷ್ಠ 66 ಜನರು ಗಾಯಗೊಂಡಿದ್ದಾರೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ದಾಳಿಯಲ್ಲಿ ಸಾವನ್ನಪ್ಪಿದವರ ಪೈಕಿ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಇದ್ದಾರೆ. ದಾಳಿಯಲ್ಲಿ ಸಿಲುಕಿರುವ ಸಂತ್ರಸ್ತರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ನೈಜೀರಿಯಾದ ಸಂಘರ್ಷದ ವಲಯದಲ್ಲಿ ನಡೆದ ಮಾರಣಾಂತಿಕ ದಾಳಿ ಬಗ್ಗೆ ತನಿಖೆ ನಡೆಸಲು ದೇಶದ ಅಧ್ಯಕ್ಷರು ಆದೇಶ ಹೊರಡಿಸಿದ್ದಾರೆ. ಅಷ್ಟೇ ಅಲ್ಲದೇ ನೈಜೀರಿಯಾದ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ತೌರೀದ್ ಲಗ್ಬಾಜಾ ಅವರು ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಡ್ರೋನ್ ದಾಳಿಗೆ ಕ್ಷಮೆಯಾಚಿಸಿದ್ದಾರೆ ಎಂದು ವರದಿಯಾಗಿದೆ.

ಒಂದು ದಶಕಕ್ಕೂ ಹೆಚ್ಚು ಕಾಲ ನೈಜೀರಿಯಾದ ಉತ್ತರವನ್ನು ಅಸ್ಥಿರಗೊಳಿಸಿದ ಉಗ್ರಗಾಮಿ ಹಿಂಸಾಚಾರ ಮತ್ತು ಬಂಡುಕೋರರ ದಾಳಿಯ ವಿರುದ್ಧ ಹೋರಾಡುವಾಗ ನೈಜೀರಿಯಾದ ಮಿಲಿಟರಿ ಆಗಾಗ್ಗೆ ವೈಮಾನಿಕ ದಾಳಿಗಳನ್ನು ನಡೆಸುತ್ತದೆ. ಈ ದಾಳಿಗಳಿಂದಾಗಿ ಹಲವು ನಾಗರಿಕ ಸಾವುನೋವುಗಳನ್ನು ಉಂಟುಮಾಡುತ್ತದೆ. ಜನವರಿಯಲ್ಲಿ ನಸಾರಾವಾ ರಾಜ್ಯ ಹಾಗೂ 2022 ರ ಡಿಸೆಂಬರ್‌ನಲ್ಲಿ ಝಂಫಾರಾ ರಾಜ್ಯದಲ್ಲಿ ಹತ್ತಾರು ಮಂದಿ ಇಂತಹ ದಾಳಿಗಳಿಗೆ ಬಲಿಯಾಗಿದ್ದಾರೆ.

Shwetha M